ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಆಗಸ್ಟ್ 7 : ಹೆಣ್ಣುಮಕ್ಕಳು ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯಯನ್ನು ತಡೆಯಲು ಸಭೆಯನ್ನು ನಚಿಕೇತ ನಿಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಭೆಯನ್ನು ಉದ್ದೇಶಿಸಿ ಸಂಘ ಸಂಸ್ಥೆಗಳ ಮುಖಂಡರು ತಮ್ನ ತಮ್ಮ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ ಜಿಲ್ಲೆಯಲ್ಲಿ ದೇಶದಲ್ಲಿ ಹೆಣ್ಣುಮಕ್ಕಳು ಮೇಲೆ ದೌರ್ಜನ್ಯ, ಅತ್ಯಾಚಾರ ಕೊಲೆಗಳು ನಡೆಯುತ್ತಿದ್ದು ನಾಗರಿಕ ಸಮಾಜ ತಲೆ ತಗ್ಗಿಸುವಂತೆಯಾಗಿದೆ ಎಂದು ವಿμÁದ ವ್ಯಕ್ತಪಡಿಸಿದರು.
ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಅರಿವಿನ ಅಗತ್ಯವಿರುವುದರಿಂದ ಯುವಜನರಿಗೆ, ಸಮುದಾಯಗಳಿಗೆ ಪೆÇೀಷಕರಿಗೆ ಮತ್ತು ಹದಿಹರೆಯದ ಮಕ್ಕಳಿಗೆ ಲೈಂಗಿಕತೆ ಬಗ್ಗೆ ಬಹಳಷ್ಟು ಮಾಹಿತಿ ಅಗತ್ಯವಿರುವುದರಿಂದ ಮತ್ತು ಹೆಣ್ಣು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ “ಲೈಂಗಿಕ ದೌರ್ಜನ್ಯ ವಿರೋಧಿ ಅಭಿಯಾನ” ಜಿಲ್ಲೆಯಲ್ಲಿ ಪ್ರಾರಂಭಿಸಿ ಅಭಿಯಾನದ ಮೂಲಕ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ, ಸಮುದಾಯಗಳಿಗೆ ಲೈಂಗಿಕತೆ ಬಗ್ಗೆ ಅರಿವು ಮೂಡಿಸಬೇಕು.ಸಂಸ್ಥೆಯ ಯುವಜನ ತರಬೇತಿದಾರರಿಗೆ ತರಬೇತಿ ನೀಡಲು 26-08-2021ರಂದು ಗುರುವಾರ ಪತ್ರಕರ್ತರ ಭವನದಲ್ಲಿ ಮಾಡಲು ತೀರ್ಮಾನಿಸಲಾಯಿತು.
ಬಾಲ್ಯ ವಿವಾಹ ಮುಕ್ತ ಜಿಲ್ಲೆಗಾಗಿ ಅಭಿಯಾನವನ್ನು ಮತ್ತಷ್ಟು ಗಟ್ಟಿ ಮಾಡಬೇಕೆಂದು ತೀರ್ಮಾನಿಸಲಾಯಿತು.ನಿರಂತರವಾಗಿ ಹೆಣ್ಣು ಮಕ್ಕಳು ಪರವಾಗಿ ನಿರಂತರವಾಗಿ ನಿಲ್ಲಬೇಕು ಮತ್ತು ಧ್ವನಿ ಯಾಗಬೇಕೆಂದು ತೀರ್ಮಾನಿಸಲಾಯಿತು.
ತಿಂಗಳಿಗೊಮ್ಮೆ ಯುವಜನರಿಗೆ ಸಭೆ ಮಾಡಬೇಕೆಂದು ಎಲ್ಲಾರು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಈ ಸಭೆಯಲ್ಲಿ ಗಮನ ಮಹಿಳಾ ಸಮೂಹದ ಶಾಂತಮ್ಮ, ಯಂಗ್ ಇಂಡಿಯಾ ಡೆವಲಪ್ಮೆಂಟ್ ಸೊಸೈಟಿ ಹೂಹಳ್ಳಿ ನಾಗರಾಜ್, ಸಂವಾದ ಸುನೀತ, ಕಲಾವಿದ ಶಾಂತಮ್ಮ, ವಿಮೋಚನಾ ವಿನೋದಾ, ಚೈಲ್ಡ್ ಲೈನ್ ರೂಪ, ಗಮನ ಲಕ್ಷ್ಮಿ, ಯುವ ಜಾಗೃತಿ ದಳ ಷಮ್ಸ್ತಾರಾ, ಚಲ್ಲಹಳ್ಳಿ ಶ್ರೀನಾಥ್, ಗಂಗಾಧರ, ಆದರ್ಶ, ಶಂಕರ್, ಗಮನ ಸಂಧ್ಯಾ, ಸವಿತ ಮುಂತಾದವರು ಭಾಗವಹಿಸಿದರು.