ಸಮಾಜದಿಂದ ಸಕಲ ಸಂಪತ್ತು ಪಡೆಯುವ ಮನುಷ್ಯನು ಸೇವಾ ಮನೋಭಾವ ಬೆಳಸಿಕೊಳ್ಳಬೇಕು:ಗುಂಜೂರು ಶ್ರೀನಿವಾಸರೆಡ್ಡಿ

ಶ್ರೀನಿವಾಸಪುರ 1 : ಸಮಾಜದಿಂದ ಸಕಲ ಸಂಪತ್ತು ಪಡೆಯುವ ಮನುಷ್ಯನು ಸೇವಾ ಮನೋಭಾವ ಬೆಳಸಿಕೊಳ್ಳಬೇಕೆಂದರು. ಸುಖದ ಜೀವನಕ್ಕೆ ಜೋತು ಬಿದ್ದಿರುವ ಜನ ಮಾನಸಿಕ ದೈಹಿಕ ಆರೋಗ್ಯ ಕ್ಷೀಣಿಸಿ ಒತ್ತಡಗಳಿಂದ ಬಳಲುತ್ತಿದ್ದಾರೆ ಎಂದು ಸಮಾಜಸೇವಕ ಗುಂಜೂರು ಶ್ರೀನಿವಾಸರೆಡ್ಡಿ ಹೇಳಿದರು.
ಪಟ್ಟಣ ವಾಸವಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಗುಂಜೂರು ಶ್ರೀನಿವಾಸರೆಡ್ಡಿಯವರ ಅಭಿಮಾನಿ ಬಳಗದಿಂದ ಹಮ್ಮಿಕೊಳ್ಳಲಾದ 53 ನೇ ಹಟ್ಟು ಹಬ್ಬದ ಅಂಗವಾಗಿ ನಡೆದ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರು ಸಮಾಜದ ಹಿತದೃಷ್ಟಿಯಿಂದ ಆರೋಗ್ಯವಂತ ಸಮಾಜ ನಿರ್ಮಾಪಕರಾಬೇಕೆಂದು ಸಲಹೆ ಮಾಡಿದರು. ಇತ್ತೀಚಿನ ದಿನಗಳಲ್ಲಿ ರಕ್ತದ ಕೊರತೆ ಹೇರಳವಾಗಿದ್ದು .ಆರೋಗ್ಯವಂತರು ಸ್ವಯಂ ಪ್ರೇರಿತರಾಗಿ ರಕ್ತ ಧಾನವನ್ನು ಮಾಡುವಂತೆ ಕರೆನೀಡಿದರು.
ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ನಾನು ಚಿರಋಣಿ. ನಾನು ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿದ್ದು, ನಿಮ್ಮೆಲ್ಲರ ಆರ್ಶೀವಾದ ನನ್ನ ಮೇಲೆ ಇರಲಿ, ನಾನು ನಿಮ್ಮ ಮನೆಯ ಮಗನಂತೆ ತಿಳಿದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ಹಾಕುವುದರೊಂದಿಗೆ ಜಯಶೀಲನಾಗುವಂತೆ ಆರ್ಶೀವಾದ ಮಾಡುವಂತೆ ಮನವಿ ಮಾಡಿದರು.
ಹುಟ್ಟು ಹಬ್ಬದ ಅಂಗವಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣುಹಂಪಲು , ವಾಸವಿ ಕಲ್ಯಾಣ ಮಂಟಪದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಎಪಿಎಂಸಿ ಮಾಜಿ ಅಧ್ಯಕ್ಷ ರಾಜೇಂದ್ರ ಪ್ರಸಾದ್, ಪುರಸಭೆ ಮಾಜಿ ಅಧ್ಯಕ್ಷ ಬಿ.ಎಂ.ಪಕ್ರಾಶ್, ತಾ.ಪಂ. ಮಾಜಿ ಸದಸ್ಯ ಅತ್ತಿಕುಂಟೆ ರಾಜೇಖರೆಡ್ಡಿ, ಮುಖಂಡರಾದ ನಂಬಿಹಳ್ಳಿ ಶ್ರೀನಿವಾಸ್, ಉನಿಕಿಲಿ ಬೈರಪ್ಪ, ಕೇತುಗಾನಹಳ್ಳಿ ಶ್ರೀನಾಥ್, ರಮೇಶ್, ರಾಜಣ್ಣ, ಮಹಮ್ಮದ್ ಆಲಿ, ಶ್ರೀರಾಮ್, ಶಂಷೀರ್ ಹಲವಾರು ಅಭಿಮಾನಿಗಳು ಇದ್ದರು.