ಫೆಬ್ರವರಿ 16 ಕ್ಕೆ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ದೇಶಾದ್ಯಂತ ಸಾರ್ವತ್ರಿಕ ಮುಷ್ಕರ ಹಿನ್ನೆಲೆಯಲ್ಲಿ ಶ್ರೀನಿವಾಸಪುರ ದಲ್ಲಿ ರೈತ – ಕಾರ್ಮಿಕರಿಂದ ಪ್ರತಿಭಟನಾ ಮೆರವಣಿಗೆ ಹೋರಾಟ ಮಾಡಲು ತೀರ್ಮಾನಿಸಲಾಗಿದೆ.
ರೈತ ಕಾರ್ಮಿಕರ ಮುಖಂಡರು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಪಿ. ಆರ್. ಸೂರ್ಯ ನಾರಾಯಣ ಮಾತನಾಡಿ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಪ್ಯಾಸಿಸ್ಟ್ ಸರ್ಕಾರ ಈ ದೇಶದ ಬಹುಸಂಖ್ಯಾತ ದುಡಿಯುವ ರೈತಾಪಿ ವರ್ಗ ಮತ್ತು ಕಾರ್ಮಿಕರನ್ನು ಕಡೆಗಣಿಸುತ್ತಾ ಬಂದಿದೆ. ರೈತಾಪಿ ವರ್ಗದ ಕೃಷಿಯನ್ನು ಕಾಪೆರ್Çರೇಟಿಕರಣ ಗೊಳಿಸುತ್ತಿದೆ. ಕೃಷಿ ಕ್ಷೇತ್ರದಲ್ಲಿ ಅನುದಾನಗಳು ಮತ್ತು ರಿಯಾಯಿತಿಗಳನ್ನು ಹಂತ ಹಂತವಾಗಿ ಕಡಿತಗೊಳಿಸುವ ಕ್ರಮಗಳನ್ನು ಕೈಗೊಂಡಿದೆ. ಹೊಸ ಆರ್ಥಿಕ ನೀತಿಗಳ ಜಾರಿಯಿಂದ ಕೃಷಿ ದುಬಾರಿಯಾಗಿ ರೈತಾಪಿ ವರ್ಗ ಕೃಷಿಯಿಂದ ದೂರ ಉಳಿಯುವಂತೆ ಮಾಡಿದೆ. ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಮಾಡಿದ ಸಾಲುಗಳನ್ನು ತೀರಿಸಲಾಗದೆ ರೈತರ ಆತ್ಮಹತ್ಯೆಗಳು ಮುಂದುವರೆದಿವೆ ಎಂದರು.
ದುಡಿಯುವ ಕಾರ್ಮಿಕ ವರ್ಗಕ್ಕೆ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆ ನೀಡಬೇಕಾಗಿದ್ದ ಕೇಂದ್ರ ಸರ್ಕಾರ ಕಾರ್ಮಿಕರ ಹಕ್ಕುಗಳ ರಕ್ಷಣಾ ಕಾಯ್ದೆಗಳನ್ನು ತೆಗೆದುಹಾಕಿ ಕಾಪೆರ್Çರೇಟ್ ಬೆಂಬಲಿತ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಲು ಮುಂದಾಗಿದೆ. ಹತ್ತು ವರ್ಷಗಳಿಂದ ಭರವಸೆ ನೀಡಿದ ಯಾವುದೇ ಘೋಷಣೆಗಳು ಜಾರಿ ಮಾಡಿಲ್ಲ. ಜನಸಾಮಾನ್ಯರ ಅಗತ್ಯವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಆಗುತ್ತಿಲ್ಲ. ಜಗತ್ತಿನಲ್ಲೇ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆ ನಮ್ಮ ದೇಶದಲ್ಲಿದೆ. ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ದೇಶದ ಸಂಪತ್ತು ಕೆಲವೇ ಶ್ರೀಮಂತರ ಕೈ ಸೇರುತ್ತಿದೆ. ಹಸಿವಿನ ಸೂಚ್ಯಂಕದಲ್ಲಿ ಭಾರತ 111 ನೇ ಸ್ಥಾನದಲ್ಲಿದ್ದರು ಸುಳ್ಳಿನ ಕತೆಗಳನ್ನು ಹೇಳುತ್ತಾ ಜನಸಾಮಾನ್ಯರನ್ನು ಭ್ರಮಾಲೋಕದಲ್ಲಿ ತೇಲಿ ಸುತ್ತಿದೆ ಎಂದರು. ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅIಖಿU ಜಿಲ್ಲಾ ಮುಖಂಡರಾದ ಆರ್ ಆಂಜಲಮ್ಮ ಮಾತನಾಡಿ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಅಂಗನವಾಡಿ, ಬಿಸಿಯೂಟ ಯೋಜನೆಗಳನ್ನು ಕಡೆಗಣಿಸಿದ್ದಾರೆ. ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿಗೆ ಅನುದಾನಗಳು ಕಡಿತ ಮಾಡಿದ್ದಾರೆ.ಇದರ ವಿರುದ್ಧ ಸಂಘಟಿತ ಹೋರಾಟ ಅನಿವಾರ್ಯವಾಗಿದೆ ಎಂದರು.
ಅಂಗನವಾಡಿ ಮುಖಂಡರಾದ ಪುಷ್ಪ, ಅಂಬಿಕಾ, ಸಿ. ಪದ್ಮ,ಶಕುಂತಲಾ ,ಲಕ್ಷ್ಮೀ ., ಗ್ರಾಮ ಪಂ. ನೌ. ಸಂಘದ ತಾಲೂಕು ಅಧ್ಯಕ್ಷ ಯಲ್ದೂರು ಶಿವಶಂಕರ್, ಕಾರ್ಯದರ್ಶಿ ರಾಮೇಗೌಡ,ಕಟ್ಟಡ ಕಾರ್ಮಿಕಸಂಘದ ಸುಮಿತಿ ,ಬಿಸಿಯೂಟ ನೌಕರರ ಸಂಘದ ವೆಂಕಟಮ್ಮ,ಕ.ಪ್ರಾಂ ರೈತ ಸಂಘದ ತಾಲೂಕು ಕಾರ್ಯದರ್ಶಿ ಸೈಯದ್ ಪಾರೂಕ್, ಆರ್. ವೆಂಕಟೇಶ್ , , ಮಂಜುಳ,ರೈತ ಸಂಘದ ರಾಮಪ್ಪ, ಮುಂತಾದವರು ಉಪಸ್ಥಿತರಿದ್ದರು.”