ಬಿಹಾರ: ಗರ್ಭಿಣಿಯೊಬ್ಬರು ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ಈ ಅಪರೂಪದ ಘಟನೆ ನಡೆದಿದೆ. ಜಿಲ್ಲೆಯ ನೈನಿಜೋರ್ ಪೊಲೀಸ್ ಠಾಣೆ ವ್ಯಾಪ್ತಿಯ ಜೋಟ್ಯಿ ನೈನಿಜೋರ್ ಗ್ರಾಮದ ಭರತ್ ಯಾದವ್ ಅವರ ಪತ್ನಿ ಜ್ಞಾನತಿ ದೇವಿ (32) ಏಕಕಾಲದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅವರ ಇಡೀ ಕುಟುಂಬವು ಅತ್ಯಂತ ಸಂತೋಷದಿಂದ ನವಜಾತ ಶಿಶುಗಳ ಆರೈಕೆಗಾಗಿ ಒಟ್ಟಿಗೆ ಕೂಡಿದ್ದಾರೆ.
ಈ ಆಸ್ಪತ್ರೆಯಲ್ಲಿ ಒಂದೇ ಬಾರಿಗೆ ನಾಲ್ಕು ಶಿಶುಗಳು ಜನಿಸಿರುವುದು ಇದೇ ಮೊದಲು ಎಂದು ತಿಳಿದುಬಂದಿದೆ. ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳು ಜನಿಸಿರುವ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಜ್ಞಾನಿ ದೇವಿಗೆ ಶಸ್ತ್ರಚಿಕಿತ್ಸೆ ನಡೆಸಿದ ಸ್ತ್ರೀರೋಗ ತಜ್ಞ ಡಾ.ಗುಂಜನ್ ಸಿಂಗ್ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಮೊದಮೊದಲು ಜ್ಞಾನತಿದೇವಿಯ. ಹೊಟ್ಟೆಯಲ್ಲಿ ನಾಲ್ವರು ಮಕ್ಕಳಿರುವುದು ನಮಗೆ ಗೊತ್ತಿರಲಿಲ್ಲ. ನಂತರ ಮಹಿಳೆ ಹೊಟ್ಟೆಯಲ್ಲಿ ಒಂದಲ್ಲ ನಾಲ್ಕು ಮಕ್ಕಳನ್ನು ಹೊತ್ತಿರುವುದು ಪತ್ತೆಯಾಗಿದೆ. ಮೇಲಾಗಿ
ನಾಲ್ವರು ಹುಡುಗರಿರುವುದು ಗೊತ್ತಾಗಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ನಾಲ್ಕು ಶಿಶುಗಳು ಮತ್ತು ತಾಯಿ ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು” ಡಾ.ಗುಂಜನ್ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ.