ಜಾರ್ಖಂಡ್ ಛತ್ರಾ: ಜಾರ್ಖಂಡ್ನ ಛತ್ರಾ ಜಿಲ್ಲೆಯ ಇಟ್ಖೋರಿ ಎಂಬ ಹಳ್ಳಿಯ ಮಹಿಳೆ ಆಸ್ಪತ್ರೆಯಲ್ಲಿ ಐವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅದೂ ಎಳು ತಿಂಗಳಲ್ಲಿ. ಸದ್ಯ ತಾಯಿ ಮತ್ತು ಮಕ್ಕಳು ಎಲ್ಲರೂ ಆರೋಗ್ಯವಾಗಿದ್ದು, ರಿಮ್ಸ್ ಆಸ್ಪತ್ರೆ ತಿಳಿಸಿದ್ದು, ಆಸ್ಪತ್ರೆಯ ಟ್ವಿಟರ್ನಲ್ಲಿ ಐದೂ ಶಿಶುಗಳ ಫೋಟೋವನ್ನು ಹಂಚಿಕೊಂಡಿದೆ.
ಡಾ. ಶಶಿ ಬಾಲಾ ಸಿಂಗ್ ಅವರ ನೇತೃತ್ವದಲ್ಲಿ ಈ ಹೆರಿಗೆ ಮಾಡಿಸಲಾಗಿದೆ ಎಂದೂ ಆಸ್ಪತ್ರೆ ತಿಳಿಸಿದೆ. ಸದ್ಯ ಐದೂ ಶಿಶುಗಳನ್ನು ಎನ್‌ಐಸಿಯುದಲ್ಲಿ ಇಡಲಾಗಿದ್ದು, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ವೈದ್ಯರು ಅವುಗಳ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮಕ್ಕಳ ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಇಲ್ಲದೆ ಇದ್ದರೂ ಎಲ್ಲವುಗಳ ತೂಕವೂ ಕಡಿಮೆ ಇದೆ. ಇವೆಲ್ಲವೂ ಪ್ರಿಮೆಚ್ಯೂರ್ ಶಿಶುಗಳಾಗಿದ್ದು ಹೆಚ್ಚಿನ ಕಾಳಜಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಹೀಗೆ ಏಕಕಾಲದಲ್ಲಿ ಮಹಿಳೆಯೊಬ್ಬರು 5 ಶಿಶುಗಳಿಗೆ ಜನ್ಮ ನೀಡಿದ್ದು ಜಾರ್ಖಂಡ್ನಲ್ಲಿ ಇದೇ ಮೊದಲು ಎಂದು ವರದಿಯಿಂದ ತಿಳಿದುಬಂದಿದೆ.