ಕೋಲಾರ / 12 ಮಾರ್ಚ್ : ನೆಹರು ಯುವ ಕೇಂದ್ರ ಕೋಲಾರ, ಬೆಂಗಳೂರು ಮಹಿಳಾ ಸಂಘ ಹಾಗೂ ಸಂಭ್ರಮ್ ಇನ್ಟ್ಟ್ಯೂಟ್ ಆಫ್ ನರ್ಸಿಂಗ್ ಕಾಲೇಜು ಇರವರುಗಳ ಸಹಯೋಗದಲ್ಲಿ ಸಂಭ್ರಮ್ ಕಾಲೇಜಿನಲ್ಲಿ ಕೆ.ಜಿ.ಎಫ್ ತಾಲ್ಲೂಕು ಮಟ್ಟದ ಕ್ರೀಡಾಕೂಟ ಹಾಗೂ ಮಹಿಳಾ ದಿನಾಚರಣೆಯನ್ನು ನ್ಯಾಯಾಧೀಶರಾದ 3ನೇ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾದೀಶರು ಗಣಪತಿ ಗುರುಸಿದ್ಧ ಬಾದಾಮಿ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನ್ಯಾಯಾಧೀಶರಾದ ಮುಜಫರ್ ಎ.ಮಂಜರಿ ಮಾತನಾಡಿ ಹೆಣ್ಣು ಕೇವಲ ಮಹಿಳೆ ಅಲ್ಲ. ಅವಳು ಒಂದು ಶಕ್ತಿ, ಅದಕ್ಕೆ ಹೆಣ್ಣಿನಲ್ಲಿ ಭೂಮಿ, ಪರಿಸರ, ನೀರು ಹಾಗೂ ದೇವತೆಗಳಿಗೆ ಹೋಲಿಸಿದ್ದಾರೆ. ಹೆಣ್ಣು ಈ ಜಗತ್ತಿನ ಕಣ್ಣು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕೋಲಾರ ವಿಭಾಗದ ಕಾರ್ಯದರ್ಶಿ ಮಂಜುಳಾ ಭೀಮ್ರಾವ್ ಮಾತನಾಡಿ ಮಹಿಳೆಯರ ಸಾಧನೆ ಈ ದೇಶದಲ್ಲಿ ಅಪಾರ. ಸಮಾಜಕ್ಕೆ ಅವರ ಕೊಡುಗೆ ಮತ್ತು ಲಿಂಗ ಸಮಾಜಕ್ಕೆ ಅವರ ಕೊಡುಗೆ ಮತ್ತು ಲಿಂಗ ಸಮಾನತೆ ಪ್ರತಿಪಾದಿಸಲು ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಗಳು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಬೆಳಕು ಮಹಿಳಾ ಸಂಘದ ಅಧ್ಯಕ್ಷೆ ರಾಧಾಮಣಿ ಮಾತನಾಡಿ ಸಾಮಾಜಿಕ, ಆರ್ಥಿಕ , ಶೈಕ್ಷಣಿಕ, ಸಾಂಸ್ಕøತಿಕ, ಕ್ರೀಡಾ, ರಾಜಕೀಯ ಸೇರಿದಂತೆ ಎಲ್ಲಾ ಕೇತ್ರಗಳಲ್ಲಿ ಮಹಿಳೆಯರ ಸಾಧನೆ ಗುರುತಿಸಲು, ಸಮಾನತೆ ಹಕ್ಕುಗಳನ್ನು ಪ್ರತಿಪಾದಿಸುವುದು ಮಹಿಳಾ ದಿನಾಚರಣೆಯ ವಿಶೇಷ ಎಂದು ತಿಳಿಸಿದರು.
ಸಂಭ್ರಮ್ ಕಾಲೇಜಿನ ಪ್ರಾಂಶುಪಾಲ ಇಂದಿರಾ ಜೋಸೆಫ್ ಮಾತನಾಡಿ ಮಹಿಳೆಯರು ಈ ದೇಶದ ಬುನಾದಿ, ಆದ್ದರಿಂದ ಮಹಿಳೆಯರು ಆರೋಗ್ಯವಂತರಾಗಿರಬೇಕು. ಮಹಿಳೆ ಅಡಿಗೆ ಮಾಡುವುದರಿಂದ ಆಕೆ ಉತ್ತಮವಾದಿ ಆಹಾರ ಯಾವುದೆಂದು ತಿಳಿದಿರುವುದರಿಂದ ಉತ್ತಮವಾದ ಆಹಾರ ಸೇವಿಸುವುದರ ಜೊತೆಗೆ ಇಡೀ ಕುಟುಂಬದ ಸದಸ್ಯರ ಆರೋಗ್ಯ ಕಾಪಾಡುವಂತವಳು ಒಂದು ಹೆಣ್ಣು. ಕ್ರೀಡಾಕೂಟಗಳು ಆಗಾಗ ವಾರ್ಡ್ಗಳ ಮಟ್ಟದಲ್ಲಿ ನಡೆದರೆ ಉತ್ತಮ. ಇದು ಕಡ್ಡಾಯವಾದರೆ ಮಹಿಳೆಯರ ಆರೋಗ್ಯ ಉತ್ತಮವಾಗಿ ಕಾಪಾಡಿಕೊಳ್ಳಬಹುದು. ಕ್ರೀಡಾಕೂಟಗಳು ಇಲ್ಲದೆ ಮಹಿಳೆಯರು ದೈಹಿಕ ದಿನೇ ದಿನೇ ಕ್ಷೀಣಿಸುತ್ತಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ರಾಜಗೋಪಾಲ್ಗೌಡ, ಮಣಿವಣ್ಣನ್, ಜಂಟಿ ಕಾರ್ಯದರ್ಶಿಗಳಾದ ಮಹೇಂದ್ರನ್, ಕಾಲೇಜಿನ ಉಪಪ್ರಾಂಶುಪಾಲರಾದ ಕನಿಮೋಳಿ, ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.