JANANUDI.COM NETWORK

ಮಾಜಿ ಶಾಸಕ, ಸಹಕಾರಿ ಧುರೀಣ ಹಾಗೂ ಹಲವು ದಶಕಗಳಿಂದ ಸಾಮಾಜಿಕವಾಗಿ, ರಾಜಕೀಯವಾಗಿ ಒಡನಾಡಿಯಾಗಿದ್ದ ಎ. ಜಿ. ಕೊಡ್ಗಿಯವರ ನಿಧನದಿಂದ ಬಹಳ ದು:ಖವಾಗಿದೆ ಎಂದು ಮಾಜಿ ಶಾಸಕ, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆಯವರು ತಿಳಿಸಿದ್ದಾರೆ. ಕೊಡ್ಗಿಯವರ ಸಮಾಜಾಭಿವೃದ್ಧಿ ಚಿಂತನೆಗಳು ಕುಂದಾಪುರ ಮಾತ್ರವಲ್ಲ, ಕರಾವಳಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಅನುಕೂಲವಾಗಿವೆ. ಗ್ರಾಮೀಣಾಭಿವೃದ್ದಿ ಬಗ್ಗೆ ಸದಾ ಚಿಂತನೆ ನಡೆಸುತ್ತಿದ್ದ ಈ ಪ್ರಗತಿಪರ ಕೃಷಿಕ ರಾಜ್ಯ ಕಂಡ ಅತ್ಯುತ್ತಮ ಧುರೀಣರಲ್ಲಿ ಒಬ್ಬರು ಎಂದು ಕೊಡ್ಗಿಯವರ ವ್ಯಕ್ತಿತ್ವವನ್ನು ಬಣ್ಣಿಸಿದ್ದಾರೆ.