ಶ್ರೀನಿವಾಸಪುರ: ದೈಹಿಕ ಶಿಕ್ಷಣ ಪರಿವೀಕ್ಷಕರಾಗಿ ಈ ಕ್ಷೇತ್ರದಲ್ಲಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ವಿದ್ಯಾರ್ಥಿಗಳ ಹಾಗೂ ಪಾಲಕರ ಮನ ಗೆದ್ದಿದ್ದಾರೆ. ಇಂದಿನ ಶಿಕ್ಷಕ ವರ್ಗದವರಿಗೆ ಕೆ.ವಿ ನಾರಾಯಣಸ್ವಾಮಿ ಮಾದರಿಯಾಗಿದ್ದಾರೆಂದ ನಿವೃತ್ತಿ ಹೊಂದಿದ ಬಿಇಓ ರೇಣುಕಮ್ಮ ಮೆಚ್ಚುಗೆಯನ್ನು ವ್ಯಕ್ತಿಪಡಿಸಿದರು.
ಪಟ್ಟಣದ ಸರ್ಕಾರಿ ನೌಕರ ಭವನದಲ್ಲಿ ಈ ತಾಲ್ಲೂಕಿನಲ್ಲಿ 5 ವರ್ಷಗಳ ಕಾಲ ದೈಹಿಕ ಪರೀವೀಕ್ಷಣ ಅಧಿಕಾರಿಯಾಗಿ ಕೆಜಿಎಫ್ ತಾಲ್ಲೂಕಿಗೆ ವರ್ಗಾವಣೆಯಾದ ನಾರಾಯಣಸ್ವಾಮಿಗೆ ಸಮುದಾಯ ವತಿಯಿಂದ ಅತ್ಮೀಯ ಬೀಳ್ಕೊಡಿಗೆಯನ್ನು ಮಾಡಿ ಮಾತನಾಡಿದ ರೇಣುಕಮ್ಮ ದೈಹಿಕ ಶಿಕ್ಷಕರಾಗಿ ಇರುವಷ್ಟು ಕಾಲ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಇದ್ದು, ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಅನೇಕ ವಿದ್ಯಾರ್ಥಿಗಳನ್ನು ಉತ್ತಮ ಕ್ರೀಡಾ ಪಟಗಳನ್ನಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಅವದಿಯಲ್ಲಿ ಶಿಸ್ತು ಬದ್ದರಾಗಿ ಕೆಲಸ ಮಾಡಿ ಅಧಿಕಾರಿಗಳಿಂದ ಒಳ್ಳೆಯ ಹೆಸರನ್ನು ಪಡೆದಿದ್ದಾರೆ. ಮುಂದೆಯು ಇದೇ ರೀತಿ ಹೆಸರನ್ನು ಗಳಿಸಲಿ ಎಂದು ಶುಭವನ್ನು ಹಾರೈಸಿದರು.
ನಿವೃತ್ತಿ ಮುಖ್ಯ ಶಿಕ್ಷಕ ತಿಪ್ಪಣ್ಣ ಮಾತನಾಡಿ ಕೆ.ವಿ. ನಾರಾಯಣಸ್ವಾಮಿ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಹೆಸರನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳಲ್ಲಿ ಶಿಸ್ತುನ್ನು ಮೂಡಿಸಿ ಕ್ರೀಡಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲ ಭಾಗವಹಿಸುವಂತೆ ಮಕ್ಕಳನ್ನು ಪ್ರೇರೇಪಿಸಿ ಉತ್ಸಹ ತುಂಬಿ ಉತ್ತಮ ಕ್ರೀಡಾಪಟಗಳನ್ನು ಮಾಡಿದ್ದಾರೆ.ಇಂದು ವರ್ಗಾವಣೆಯಾಗುತ್ತಿರುವ ಇವರಿಗೆ ಇನ್ನಷ್ಟು ಹೆಸರನ್ನು ಗಳಿಸಲು ದೇವರು ಒಳ್ಳೆಯದನ್ನು ಮಾಡಲಿ ಇವರ ಸೇವೆ ಇನ್ನೂ ಹೆಚ್ಚಿನದಾಗಿ ಸಿಗಲಿ ಎಂದು ಆಶಿಸಿದರು.
ಬೀಳ್ಕೋಡಿಗೆ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ದೈಹಿಕ ಪರಿವೀಕ್ಷಣಾಧಿಕಾರಿ ಕೆ.ವಿ. ನಾರಾಯಣಸ್ವಾಮಿ ನಾನು ಐದು ವರ್ಷಗಳಿಂದ ಇಲ್ಲಿ ಕೆಲಸ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡಿ ಇಂದು ವರ್ಗಾವಣೆಯಾಗುತ್ತಿದ್ದೇನೆ. ಇದಕ್ಕೆಲ್ಲ ಕಾರಣ ನೀವು ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸ ಸರ್ಕಾರದಿಂದ ಯಾವುದೇ ಸೌಲಭ್ಯ ಬಂದರೂ ನೇರವಾಗಿ ವಿದ್ಯಾರ್ಥಿಗಳಿಗೆ ಸಿಗುವಂತೆ ಕೆಲಸ ಮಾಡಿದ್ದೇನೆ. ಉತ್ತಮ ಕ್ರೀಡಾಪಟಗಳನ್ನು ತೆಯಾರು ಮಾಡಿ ಜಿಲ್ಲೆ, ರಾಜ್ಯ ಮಟ್ಟದಲ್ಲಿ ಶಾಲೆಗೆ ಪ್ರಶಸ್ತಿಗಳನ್ನು ತಂದುಕೊಡುವAತಹ ಕೆಲಸ ಮಾಡಿದ್ದೇನೆ. ನನ್ನ ಕಾಲಾವಧಿಯಲ್ಲಿ ಸಹಕರಿಸಿ ಎಲ್ಲಾ ಶಿಕ್ಷP ವೃಂದದವರಿಗೆ ಅಧಿಕಾರಿ ವರ್ಗದವರಿಗೆ ಸಂಘ ಸಂಸ್ಥೆಯ ಮುಖಂಡರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆಂದರು.
ಇದೆ ಕಾರ್ಯಕ್ರಮದಲ್ಲಿ ವಿವಿದ ಸಂಘ ಸಂಸ್ಥೆಯ ಮುಖಂಡರು, ಶಿಕ್ಷಕ ವರ್ಗದವರು, ಅದ್ದೂರಿಯಾಗಿ ಸನ್ಮಾನಿಸಿ ಬೀಳ್ಕೋಡಿಗೆಯನ್ನು ನಡಿಸಿಕೊಟ್ಟರು.
ಈ ಸಂದರ್ಭದಲ್ಲಿ ನಿವೃತ್ತಿ ಶಿಕ್ಷಕ ದಿಂಬಾಲು ರಾಮಪ್ಪ, ಶಿಕ್ಷಕರಾದ ಸುಶೀಲಮ್ಮ, ಪೆದ್ದಪ್ಪಯ್ಯ, ರಾಜಪ್ಪ, ಮಾದವಿ, ಗಂಗಮ್ಮ, ಜಿ.ವಿ. ಕೃಷ್ಣಪ್ಪ ಮುಖಂಡರಾದ ಚಲ್ದಿಗಾನಹಳ್ಳಿ ವೆಂಕಟೇಶ್, ನಾಗದೇನಹಳ್ಳಿ ವೆಂಕಟರವಣ, ಹೂಹಳ್ಳಿ ಕೃಷ್ಣಪ್ಪ, ಮೊಗಿಲಹಳ್ಳಿ ಶಿವಪ್ಪ, ಮರಸನಪಲ್ಲಿ ವೆಂಕಟರವಣ, ಅಂಬೇಡ್ಕರ್ ಪಾಳ್ಯ ನರಸಿಂಹಮೂರ್ತಿ, ಅಲವಾಟ ಲಕ್ಷö್ಮಣ್, ಇನ್ನೀತರರು ಉಪಸ್ಥಿತರಿದ್ದರು.