JANANUDI.COM NETWORK
ಕುಂದಾಪುರ,ಫೇ. 23: ಸ್ಥಳೀಯ ಸೈಂಟ್ ಮೇರೀಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ.೨೨ ರಂದು 3 ರಿಂದ 7 ನೇ ವಿದ್ಯಾರ್ಥಿಗಳಿಗೆ ಬೆಂಕಿ ಇಲ್ಲದೆ ತಿಂಡಿ ತಯಾರಿ ಸ್ಪರ್ಧೆ ನಡೆಸಲಾಯಿತು.
ಮುಖ್ಯೋಪಾಧ್ಯಾಯಿನಿ ಶ್ರೀಮತಿ ಡೋರಾ ಸುವಾರಿಸ್ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್. ತೆರೆಜಾ ಶಾಂತಿ ಇವರು ತೀರ್ಪುಗಾರರಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ದೈಹಿಕ ಶಿಕ್ಷಕಿ ಶಾಂತಿ ರಾಣಿ ಬರೆಟ್ಟೊ ಸಂಯೋಜಕರಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕಿಯರಾದ ಆನ್ನಿ ಕ್ರಾಸ್ತಾ, ಸಿಂತಿಯಾ ರೊಡ್ರಿಗಸ್, ಗೀತಾ ನೊರೊನ್ಹ, ಜ್ಯೋತಿ ಡಿಸಿಲ್ವ, ಪ್ರೀತಿ ಹಾಜರಿದ್ದು ಸಹಕರಿಸಿದರು.