ಹಲಾಲ್ /  ಜಟ್ಕಾ ಕಟ್ ವಿವಾದದ ನಡುವೆ  ಪಶು ಸಂಗೋಪನಾ ಇಲಾಖೆಯಿಂದ ಬೇರೆಯೇ  ಆದೇಶ

JANANUDI.COM NETWORK

ಬೆಂಗಳೂರು,ಎ.2:  ರಾಜ್ಯದಲ್ಲಿ ಹಲಾಲ್ ಕಟ್ ಜಟ್ಕಾ ಕಟ್ ವಿವಾದಗಳ ನಡುವೆ  ಪಶು ಸಂಗೋಪನಾ ಇಲಾಖೆ ಮಹತ್ವದ  ಆದೇಶ ಹೊರಡಿಸಿದೆ. ಮೊದಲಿಗೆ ಪ್ರಾಣಿಗೆ ಚಿತ್ರ  ಹಿಂಸೆ ತಡೆಗಟ್ಟಿ ಎಂದು ಆದೇಶ ಹೊರಡಿಸಲಾಗಿದೆ.

ಪ್ರಾಣಿಗಳನ್ನು ಆಹಾರಕ್ಕಾಗಿ ವಧೆ ಮಾಡುವಾಗ ಅವುಗಳಿಗೆ ಹಿಂಸೆ ನೀಡಬಾರದು ಎಂದು ಸೂಚನೆ ನೀಡಲಾಗಿದೆ. ಹಿಂಸೆ ನೀಡದೆ ಪ್ರಾಣಿಗಳನ್ನು ವಧೆ ಮಾಡಬೇಕೆಂದು ಆದೇಶ ಹೊರಡಿಸಲಾಗಿದೆ. ಬೆಂಗಳೂರಿನಲ್ಲಿ ಇನ್ನು ಮುಂದೆ ಪ್ರಾಣಿ ವಧೆಗೆ ಸ್ಟನ್ನಿಂಗ್ (stunning) ಕಡ್ಡಾಯ ಎಂದು ಸರ್ಕಾರದ ಆದೇಶ ಹೇಳಿದೆ.    ಪ್ರಾಣಿ ವಧೆಗೂ ಮುನ್ನ ಸ್ಟನಿಂಗ್ ಮಾಡಲು ಸೂಚನೆ ನೀಡಲಾಗಿದ್ದು, ಸ್ಟನ್ನಿಂಗ್ ಸಿಸ್ಟಮ್ ಇರುವವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಅಂದರೆ ಪ್ರಾಣಿ ಹತ್ಯೆಗೂ ಮುನ್ನಾ ಪ್ರಾಣಿಗಳಿಗೆ ಪ್ರಜ್ಞೆ ತಪ್ಪಿಸುವ ವಿಧಾನ ಅನುಸರಿಸಬೇಕಾಗುತ್ತದೆ.  ಪ್ರಜ್ಞೆ ತಪ್ಪಿಸುವುದರಿಂದ ಪ್ರಾಣಿಗಳನ್ನು ಸಾಯಿಸುವಾಗ‌ ಅವುಗಳಿಗೆ ನೋವು ತಿಳಿಯುವುದಿಲ್ಲ. ಯಾವುದೇ ಅಂಗಡಿಗಳಲ್ಲಿ ಇದನ್ನು ಪಾಲನೆ ಮಾಡದ ಹಿನ್ನೆಲೆಯಲ್ಲಿ, ಅನೇಕ ದೂರುಗಳು ಪಶು ಸಂಗೋಪನಾ ಇಲಾಖೆಗೆ ಬಂದಿದ್ದವು. ಹೀಗಾಗಿ ಈಗ ಆದೇಶ ಹೊರಡಿಸಲಾಗಿದೆ ಮತ್ತುಮಹತ್ವ ಪಡೆದುಕೊಂಡಿದೆ.