

ಮಂಗಳೂರು, ಜೂನ್ 20: ಕಥೊಲಿಕ್ ಕ್ರೈಸ್ತ ಧರ್ಮಪ್ರಾಂತ್ಯದ ನಿಯೋಗವು ಇಂದು ನೂತನ ಜಿಲ್ಲಾಧಿಕಾರಿಯವರನ್ನು ಭೇಟಿ ನೀಡಿ ಶುಭ ಹಾರೈಸಿದರು.
ಮಂಗಳೂರಿನ ಬಿಷಪ್ ಅತೀ ಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಇವರ ಪರವಾಗಿ ನೂತನ ಜಿಲ್ಲಾಧಿಕಾರಿಯವರಾದ ಶ್ರೀ ಮುಳ್ಳಯಿ ಮುಗಿಲನ್ ಇವರಿಗೆ ಕ್ರೈಸ್ತ ಸಮುದಾಯದ ಪರವಾಗಿ ಸ್ವಾಗತಿಸಿ ಶುಭ ಹಾರೈಕೆಗಳನ್ನು ತಲುಪಿಸಿದರು. ನಿಯೋಗದಲ್ಲಿ ಸದಸ್ಯರಾದ, ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀ ರಾಯ್ ಕ್ಯಾಸ್ತೆಲಿನೊ, ರಾಕ್ಣೊ ವಾರ ಪತ್ರಿಕೆಯ ಸಂಪಾದಕರಾದ ಫಾ. ರೂಪೇಶ್ ಮಾಡ್ತಾ, ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕರಾದ ಫಾ. ರಿಚರ್ಡ್ ಕುವೆಲ್ಹೊ, ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಸಂಸ್ಥೆಯ ನಿರ್ದೇಶಕರಾದ ಫಾ. ಪ್ರಕಾಶ್ ಡಿಸೋಜಾ, ಕಥೊಲಿಕ್ ಸಭಾ ಮಂಗಳೂರು ಇದರ ಪ್ರಸ್ತುತ ಅಧ್ಯಕ್ಷರಾದ ಶ್ರೀ ಸ್ಟ್ಯಾನಿ ಲೋಬೊ ಹಾಗು ನೂತನ ಅಧ್ಯಕ್ಷರಾದ ಶ್ರೀ ಆಲ್ವಿನ್ ಡಿಸೋಜಾ ಇವರು ಹಾಜರಿದ್ದು ಪುಸ್ತಕವನ್ನು ಉಡುಗೊರೆಯಾಗಿ ನೀಡುವುದರೊಂದಿಗೆ ಬಿಷಪ್‍ರವರ ವತಿಯಿಂದ ಹಾರೈಕೆ ಪತ್ರವನ್ನು ನೀಡಿ ಶುಭಕೋರಿದರು.



