

ಉಡುಪಿ.ಕುಂದಾಪುರ ; ರಾಜ್ಯಾದ್ಯಂತ ಸದ್ದು ಮಾಡಿದ ಬ್ರಹ್ಮಾವರದ , ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆಯ ಮುಂಭಾಗದಲ್ಲಿ , ಜಿಲ್ಲಾ ರೈತ ಸಂಘಟನೆಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಕ್ರೈಸ್ತ ಮುಖಂಡರ ನಿಯೋಗ , ಹಿರಿಯ ಸಹಕಾರಿ ಕ್ಷೇತ್ರದ ಧುರಿಣ, ಬ್ರಹ್ಮಾವರ ಕೆಥೂಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಾಜಿ ಅಧ್ಯಕ್ಷ ಕೋಟ ವಲೇರಿಯನ್ ಮಿನೇಜಸ್ ರವರ ನೇತೃತ್ವದಲ್ಲಿ ಭೇಟಿಯನ್ನು ನೀಡಿ, ಬೆಂಬಲವನ್ನು ಸೂಚಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ವಲೇರಿಯನ್ ಮಿನೇಜಸ್ ರವರು , ಕರಾವಳಿಯ ಬಲಿಷ್ಠ ಸಹಕಾರಿ ಕ್ಷೇತ್ರಕ್ಕೆ ಬುನಾದಿಯನ್ನು ನೀಡಿದ , ಅವಿಭಜಿತ ದಕ್ಷಿಣ ಕನ್ನಡ ಹಾಗೂ ನೆರೆಯ ಜಿಲ್ಲೆಗಳ ರೈತರಿಗೆ ನೆರವಾಗಬೇಕಿದ್ದ ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಾರವಾಗಿದ್ದು ತನಿಖೆಗೆ ಸರಕಾರ ಅನುಸರಿಸುತ್ತಿರುವ ವಿಳಂಬ ನೀತಿ ಸರಿಯಲ್ಲ, ತಪ್ಪು ಎಸಗಿದ್ದ ಆರೋಪವನ್ನು ಹೊಂದಿರುವ ಸರಕಾರಿ ಅಧಿಕಾರಿಗಳ ಹಾಗೂ ಆಡಳಿತ ಮಂಡಳಿಯ ಸದಸ್ಯರ ಮೇಲೆ ಸರಕಾರ ತನಿಖೆಯನ್ನು ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದರು.ಜನಸಾಮಾನ್ಯರಿಗೆ ಮಾದರಿಯಾಗಬೇಕಾದ ಸಹಕಾರಿ ಕ್ಷೇತ್ರ ಇತ್ತೀಚಿನ ದಿನಗಳಲ್ಲಿ ಅವ್ಯವಹಾರದ ದೂರುಗಳಿಗೆ ಸುದ್ದಿಯಾಗುತ್ತಿರುವುದು ದುರದೃಷ್ಟಕರ ಎಂದರು.
ಸಕ್ಕರೆ ಕಾರ್ಖಾನೆಯ ಅವ್ಯವಾರವನ್ನು ಬಯಲಿಗೆಳೆದು , ರೈತರ ಪರ ನಿಂತಿರುವ ಜಿಲ್ಲಾ ರೈತ ಸಂಘದ ಅಧ್ಯಕ್ಷ ಶ್ರೀ ಪ್ರತಾಪ್ ಚಂದ್ರ ಶೆಟ್ಟಿ ಅವರ ಹೋರಾಟ ಪಕ್ಷತೀತವಾಗಿದ್ದು , ಸಹಕಾರಿ ಕ್ಷೇತ್ರದ ಮೌಲ್ಯಗಳ ರಕ್ಷಣೆಗೆ ಬಲವನ್ನು ನೀಡಿದಂತಾಗಿದೆ ಎಂದರು .
ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟೊ, ಕೆಥೋಲಿಕ್ ಸಭಾ ವಲಯ ಹಾಗೂ ಕುಂದಾಪುರ ಘಟಕದ ಅಧ್ಯಕ್ಷರಾದ ವಿಲ್ಸನ್ ಅಲ್ಮೇಡಾ, ಪಂಚಾಯತ್ ಸದಸ್ಯರಾದ ರೋಷನ್ ಬರೆಟ್ಟೊ , ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯೆ ಆಶಾ ಕರ್ವಾಲ್ಲೊ, ಕೆಥೋಲಿಕ್ ಸಭಾ ಘಟಕದ ಅಧ್ಯಕ್ಷರಾದ ಹೆರಾಲ್ಡ್ ಫೆರ್ನಾಂಡಿಸ್ , ಜಾನ್ ಅಲ್ಮೆಡಾ , ಪದಾಧಿಕಾರಿಗಳಾದ ವಾಲ್ಟರ್ ಡಿಸೋಜ, ಆನಗಳ್ಳಿ ಜೋಸೆಫ್ ರೆಬೆಲ್ಲೊ ಹಾಗೂ ವೇಲಾ ಬ್ರಗಾಂಜ, ಕ್ಲಿಫರ್ಡ್ ಡಿಸಿಲ್ವಾ, ನೊಯೆಲ್ ಸಿಕ್ವೇರಾ, ಆಲ್ವಿನ್ ಡಿಸೋಜಾ ಹೇರಿಕುದ್ರು, ಫ್ರಾಂಕಿ ಕ್ರಾಸ್ತಾ ತ್ರಾಸಿ ಮತ್ತು ರೈತ ಮುಖಂಡರಾದ ಕೆದೂರು ಸದಾನಂದ ಶೆಟ್ಟಿ, ವಂಡಬಳ್ಳಿ ಜಯರಾಮ ಶೆಟ್ಟಿ, ಭುಜಂಗ ಶೆಟ್ಟಿ ಬ್ರಹ್ಮಾವರ , ಉದಯ ಕುಮಾರ್ ಶೆಟ್ಟಿ ವಂಡ್ಸೆ, ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ಚಂದ್ರಶೇಖರ್ ಶೆಟ್ಟಿ ಮರತ್ತೂರು, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಜ್ಯೋತಿ ಪುತ್ರನ್, ಜ್ಯೋತಿ ಅಚ್ಯುತ ಮೂಡುಬಗೆ, ಅಭಿಜಿತ್ ಪೂಜಾರಿ, ಗೋವರ್ಧನ ಜೋಗಿ ವಂಡ್ಸೆ, ಆದರ್ಶ ಕುಮಾರ್ ಶೆಟ್ಟಿ ಹೇರಿಕುದ್ರು , ನಿತ್ಯಾನಂದ ಶೆಟ್ಟಿ ಬ್ರಹ್ಮಾವರ, ವಾಣಿ ಶೆಟ್ಟಿ ಮೊಳಹಳ್ಳಿ , ವಿಜಯ ಪುತ್ರನ್ ಕಾವ್ರಾಡಿ, ಸರ್ವೋತ್ತಮ ಶೆಟ್ಟಿ ಇಡೂರು ಕುಂಜ್ಞಾಡಿ, ಮೇರ್ಡಿ ಸದಾನಂದ ಹೆಗ್ಡೆ, ಅಶೋಕ್ ಕುಮಾರ್ ಶೆಟ್ಟಿ ಕಾಸಾಡಿ ಉಪಸ್ಥಿತರಿದ್ದರು.




