ಕುಂದಾಪುರ: ಕಥೋಲಿಕ್ ಸಭಾ ಉಡುಪಿ ಪ್ರದೇಶ (ರಿ.), ಕಥೋಲಿಕ್ ಸಭಾ ವಲಯ ಸಮಿತಿ – ಶೆವೊಟ್ ಪ್ರತಿಷ್ಠಾನ್ (ರಿ.) ಕುಂದಾಪುರ, ಹೋಲಿ ರೋಜರಿ ಚರ್ಚ್ ಕುಂದಾಪುರ ಘಟಕದ ವತಿಯಿಂದ ಸೈಂಟ್ ಮೇರಿಸ್ ವಿದ್ಯಾ ಸಂಸ್ಥೆಯ ಮೈದಾನದಲ್ಲಿ ದಿನಾಂಕ 17/12/2023 ಭಾನುವಾರ ಸಂಜೆ ಸೌಹಾರ್ದ ಕ್ರಿಸ್ಮಸ್ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಅತೀ|ವಂ|ಫಾ|ಸ್ಟ್ಯಾನಿ ತಾವ್ರೊ ಹಾಗೂ ವೇದಿಕೆಯ ಮೇಲೆ ಉಪಸ್ಥಿತರಿದ್ದ ಸರ್ವ ಗಣ್ಯರು ಹಣತೆಯನ್ನು ಬೆಳಗುವುದರ ಮುಖಾಂತರ ಈ ಸೌಹಾರ್ದ ಕ್ರಿಸ್ಮಸ್ ಸಂಭ್ರಮದ ಉದ್ಘಾಟನೆ ನೆರವೇರಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅತೀ|ವಂ|ಫಾ|ಸ್ಟ್ಯಾನಿ ತಾವ್ರೊರವರು, ಎರಡು ಸಾವಿರ ವರ್ಷಗಳ ಹಿಂದೆ ಯೇಸು ಕ್ರಿಸ್ತರು ಜನಿಸಿದರು, ಅದುವೆ ಕ್ರಿಸ್ಮಸ್ ಸಂಭ್ರಮ. ಇದನ್ನು ಇತರರೊಂದಿಗೆ ಹಂಚಿಕೊಳ್ಳುವುದು ವಾಡಿಕೆ, ಈ ಆಚರಣೆಯು ಶಾಂತಿ, ಸಮಾಧಾನ, ಹಾಗೂ ಸೌಹಾರ್ದತೆಯನ್ನು ಸಾರುತ್ತದೆ. ಯೇಸು ಕ್ರಿಸ್ತರ ಸಂದೇಶ ಒಂದು ಪ್ರೀತಿ ಹಾಗೂ ಸಮಾಧಾನದ ಸಂದೇಶ. ಎಲ್ಲರೂ ಪ್ರೀತಿಯಿಂದ ಬಾಳಬೇಕು ನಮ್ಮ ವೈರಿಗಳನ್ನು ಕೂಡಾ ಪ್ರೀತಿಸಬೇಕು, ಸಮಾಜದ ಜನರ ನೋವು ನಲಿವುಗಳಿಗೆ ಸ್ಪಂದಿಸಬೇಕು ಅದುವೇ ನಿಜವಾದ ಕ್ರಿಸ್ಮಸ್ ಆಚರಣೆ’ ಎಂದರು.
ಕುಂದಾಪುರ ಘಟಕದ ಸದಸ್ಯರು ಪ್ರಾರ್ಥನಾ ಗೀತೆ ಹಾಡುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸೈಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿಗಳು ಸ್ವಾಗತ ನೃತ್ಯದೊಂದಿಗೆ ಸರ್ವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಬಿ.ಲೀಲಾವತಿ ಕರ್ಕಡ ಮುಖ್ಯೋಪಾಧ್ಯಾಯಿನಿ ಚೈತನ್ಯ ಸ್ಪೆಷಲ್ ಸ್ಕೂಲ್ ಹಾಗೂ ಕಲ್ಪನಾ ಪ್ರಭಾಕರ ಆಶಾ ಕಾರ್ಯಕರ್ತೆ, ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ ಇವರನ್ನು, ಅವರು ಸಮಾಜಕ್ಕೆ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.ಶೆವೊಟ್ ಪ್ರತಿಷ್ಠಾನ್ ಅಧ್ಯಕ್ಷ ಶ್ರೀ ವಿನೋದ್ ಕ್ರಾಸ್ಟೊ ಮತ್ತು ಮಾಜಿ ವಲಯ ಕಥೊಲಿಕ್ ಸಭಾ ಅಧ್ಯಕ್ಷ ಶ್ರೀ ರೋಶನ್ ಬಾರೆಟ್ಟೊ ಸನ್ಮಾನಿತರನ್ನು ಪರಿಚಯಿಸಿದರು
ಕಾರ್ಯಕ್ರಮದ ಸಂಚಾಲಕರಾದ ಶ್ರೀ. ಜೊನ್ಸನ್ ಅಲ್ಮೇಡಾರವರು ಶ್ರೀ. ಸುಜೇಂದ್ರ ಹಂದೆಯವರ ವ್ಯಕ್ತಿ ಪರಿಚಯ ಮಾಡಿ, ಅವರು ಬರೆದ ಕೃತಿಗಳು, ಗಳಿಸಿದ ಪ್ರಶಸ್ತಿಗಳು ಹಾಗೂ ಮಾಡಿದ ಸಾಧನೆಗಳ ವಿವರ ನೀಡಿ, ಅವರಿಗೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳು ಬೇಗನೆ ಸಿಗುವಂತಾ ಗಲಿ ಎಂದು ಹಾರೈಸಿದರು.
ಶ್ರೀ. ಸುಜೇಂದ್ರ ಹಂದೆಯವರು “ಡಿ. ವಿ. ಜಿ ಯವರ ಮಂಕುತಿಮ್ಮನ ಕಗ್ಗದ ಸಾಲುಗಳನ್ನು ಸುಶ್ರಾವ್ಯವಾಗಿ ಹಾಡುವುದರೊಂದಿಗೆ ಮಾತು ಆರಂಭಿಸಿ, ಇಂತಹ ಸೌಹಾರ್ದ ಕಾರ್ಯಕ್ರಮಗಳನ್ನು ಕೇವಲ ಕ್ರೈಸ್ತರು ಮಾತ್ರವಲ್ಲದೆ ಇತರ ಧರ್ಮದವರೂ ಆಯೋಜಿಸುವಂತಾಗಬೇಕು.ಶಿಕ್ಷಣ ಸಂಸ್ಥೆಗಳು ಹಾಗೂ ಆಸ್ಪತ್ರೆಗಳ ಮೂಲಕ ನಮ್ಮ ಸಮಾಜಕ್ಕೆ ಕ್ರೈಸ್ತರ ಕೊಡುಗೆ ಆಪಾರ, ನಮ್ಮ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿದ ಕೀರ್ತಿ ಕ್ರೈಸ್ತರಿಗೆ ಸಲ್ಲುತ್ತದೆ ಎಂದು ಕಿಟೆಲ್ರವರು ಕನ್ನಡ ಭಾಷೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ತಮ್ಮ ಅದ್ಭುತವಾದ ವಾಕ್ಚಾತುರ್ಯದಿಂದ ನೆರೆದ ಮಕ್ಕಳಿಗೆ ನೀತಿ ಕತೆಗಳನ್ನು ಹೇಳಿ, ಯೇಸು ಕ್ರಿಸ್ತರು ಈ ಭೂಮಿಯ ಮೇಲೆ ಜನಿಸಿ ನಮಗೆ ನೀಡಿದಂತಹ ಪ್ರೀತಿಯ ಹಾಗೂ ಸೌಹಾರ್ದತೆಯ ಸಂದೇಶ ಮನಗಳಿಗೆ ಮುಟ್ಟುವಂತಾಗಬೇಕು ಎಂದು ತಮ್ಮ ಕ್ರಿಸ್ಮಸ್ ಸಂದೇಶದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ. ವಿಲ್ಸನ್ ಅಲ್ಮೇಡಾ ಕಥೋಲಿಕ್ ಸಭಾ ಕುಂದಾಪುರ ವಲಯದ ಎಲ್ಲಾ ಘಟಕಗಳಿಂದ ನೀಡುತ್ತಿರುವ ವಿವಿಧ ಸೇವೆಗಳನ್ನು ವ್ಯಾಖ್ಯಾನಿಸಿ,ಕಥೋಲಿಕ್ ಸಭಾ ಇಂದು ಒಂದು ಬಲಿಷ್ಟ ಸಂಘಟನೆಯಾಗಿ ಬೆಳೆದು ನಿಂತಿದೆ ಎಂದರು. ಕಥೋಲಿಕ್ ಸಭಾ ಕುಂದಾಪುರ ಘಟಕದ ಅಧ್ಯಕ್ಷರಾದ ಶ್ರೀಮತಿ ಶೈಲಾ ಅಲ್ಮೇಡಾ ಸ್ವಾಗತಿಸಿದರು, ವಲಯ ಸಮಿತಿಯ ಕಾರ್ಯದರ್ಶಿ ಶ್ರೀ. ಗ್ರೇವಿನ್ ಪಸನ್ನ ಧನ್ಯವಾದ ಸಮರ್ಪಿಸಿದರು ಮತ್ತು ಡಾ|ಸೋನಿ ಡಿಕೋಸ್ಟಾ ಸಭಾ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ವಲಯ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಶಾಂತಿ ಪಿರೇರಾ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಪಿಯೂಸ್ ನಗರ, ಕುಂದಾಪುರ, ತಲ್ಲೂರು ಹಾಗೂ ಬೈಂದೂರು ಘಟಕಗಳ ವತಿಯಿಂದ ವಿವಿಧ ನೃತ್ಯ, ನಾಟಕ ಹಾಗೂ ಸಾಂಸ್ಕ್ರತಿಕ ಮನೋರಂಜನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕ್ರಿಸ್ಮಸ್ ಕೇಕ್ ಲಕ್ಕಿ ಡ್ರಾ ನಡೆಸಿ ಬಹುಮಾನ ವಿಜೇತರಿಗೆ ಕೇಕ್ ಗಳನ್ನು ವಿತರಿಸಲಾಯಿತು. ಶ್ರೀಮತಿ ಪ್ರೇಮ ಡಿಕುನ್ಹ ಸಾಂಸ್ಕ್ರತಿಕ ಕಾರ್ಯಕ್ರಮದ ನಿರೂಪಿಸಿದರು.
A cordial Christmas celebration by Catholic Sabha Zonal Committee, Shevot Pratisthan: “Not only Christians but also other religions should be organised” – Sujendra Hande
Kundapur: Catholic Sabha Udupi Pradesh (R.), Catholic Sabha Zonal Committee – Shevot Pratishthan (R.) Kundapur, Holy Rosary Church Kundapur unit organized a cordial Christmas celebration on 17/12/2023 Sunday evening at St. Mary’s Vidya Institution grounds.
His Excellency Stani Tavro and all the dignitaries present on the stage inaugurated this cordial Christmas celebration by lighting the lamp. Speaking at the opening of the program, Ati|Vam|Fa|Stani Tavro said that Jesus Christ was born two thousand years ago, and that was Christmas celebration. It is customary to share it with others, a practice that conveys peace, tranquility, and harmony. The message of Jesus Christ is a message of love and peace. Everyone should live with love, we should also love our enemies, we should respond to the pains of the people of the society, that is the real Christmas celebration’, he said.
The program started with the members of the Kundapur unit singing a prayer song. The students of St. Mary’s School welcomed the server with a welcome dance. On this occasion, B. Lilavati Karkada Headmistress Chaitanya Special School and Kalpana Prabhakar Asha Worker, Primary Health Center Gangolli were felicitated in recognition of their considerable service rendered to the society.Shevot Pratishthan President Mr. Vinod Krasto and former Zonal Catholic Sabha President Mr. Roshan Barretto introduced the honorees.
The organizer of the program Mr. Mr. Johnson Almeida. He introduced the person of Sujendra Hande, gave the details of his works, awards and achievements and wished him to get state and national awards soon.
Mr. Sujendra Hande started his speech by singing the lines of Mankuthimma by D.V.G melodiously, such friendly programs should be organized not only by Christians but also by other religions. Christian’s contribution to our society through educational institutes and hospitals, Christians are credited with saving and developing our Kannada language. In his Christmas message, he remembered the gift he gave.He told righteous stories to the children gathered with his wonderful eloquence and told us in his Christmas message that the message of love and friendship given to us by Jesus Christ should be born on this earth.
Speaking on this occasion Mr. Explaining the various services offered by all units of the Catholic Sabha Kundapur zone, Wilson Almeida said that the Catholic Sabha has grown into a strong organization today. Ms. Shaila Almeida, President of Catholic Sabha Kundapur Unit welcomed, Secretary of Zonal Committee Mr. Grevin gave the vote of thanks and Dr. Sonny DeCosta moderated the program. Mrs. Shanti Perera, Immediate Past President of the Zonal Committee was present on this occasion.
After the sabha program, various dance, drama and cultural entertainment programs were organized by Piyush Nagar, Kundapur, Tallur and Byndur units. On this occasion, a Christmas cake lucky draw was conducted and cakes were distributed to the prize winners. Mrs. Prema Dikunha narrated the cultural program.