ಮಂಗಳೂರು: ಜೆಪ್ಪುವಿನ ಸೇಂಟ್ ಜೋಸೆಫ್ ಚರ್ಚ್ ನಲ್ಲಿ ಚರ್ಚ್‌ನ ಮಕ್ಕಳು ನವೆಂಬರ್ 11 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಿ ಮಕ್ಕಳೆಲ್ಲಒಗ್ಗೂಡ ಸಂತೋಷದಿಂದ ಸಮಯ ಕಳೆದರು. 6 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗಾಗಿ ಕಾರ್ಯಕ್ರಮವನ್ನು ಸೃಜನಾತ್ಮಕ ಮತ್ತು ವಿನೂತನ ರೀತಿಯಲ್ಲಿ ಆಯೋಜಿಸಲಾಗಿತ್ತು.
ಚರ್ಚಿನ ಎಲ್ಲಾ ಮಕ್ಕಳಿಗಾಗಿ ಬೈಬಲ್ ಆಟಗಳನ್ನು ಏರ್ಪಡಿಸಲಾಗಿತ್ತು. ಎಲ್ಲಾ ಮಕ್ಕಳು ಉತ್ಸಾಹದಿಂದ ಇದರಲ್ಲಿ ಪಾಲ್ಗೊಂಡರು. ಚಟುವಟಿಕೆಗಳು ಮತ್ತು ಆಟಗಳ ಮೂಲಕ ಮಕ್ಕಳಿಗೆ ಬೈಬಲ್ ಜ್ನಾನವನ್ನು ಕಲಿಸಲು, ಒಂದು ನವೀನ ಮತ್ತು ಪ್ರಾಯೋಗಿಕ ವಿಧಾನದ.
ಬೈಬಲ್ ಹೌಸಿ ಹೌಸಿ (ಫಾ| ಮ್ಯಾಕ್ಸಿಮ್ ಡಿಸೋಜಾ ಅವರ ನಾವೀನ್ಯತೆ), ಬೈಬಲ್ ರಸಪ್ರಶ್ನೆ ಮತ್ತು ಇತರ ಅನೇಕ ಬೈಬಲ್ ಆಟಗಳನ್ನು ಒಳಗೊಂಡಿದ್ದವು.. ಬ್ರದರ್ಸ್ಗಳು ನಡೆಸಿದ ಬೈಬಲ್ ಗೇಮ್ಸ್‌ನಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸುವುದನ್ನು ನೋಡುವುದು ಅದ್ಭುತ ಅನುಭವ ಆಗಿದ್ದು, ಬ್ರ. ಲೋಹಿತ್ ಅಜಯ್ ಮಸ್ಕರೇನಸ್, ಬ್ರ. ಗ್ಲಾಡ್ವಿನ್ ಫೆರ್ನಾಂಡಿಸ್ ಮತ್ತು ಶ್ರೀ ರಾಬಿನ್ ವಾಸ್, ಬೈಬಲ್ ಆಟಗಳನ್ನು ಬಹಳ ಪರಿಣಾಮಕಾರಿಯಾಗಿ ನಡೆಸಿಕೊಟ್ಟರು. ಈ ಉದ್ದೇಶಕ್ಕಾಗಿ 35 ಬೈಬಲ್ನ ಆಟಗಳನ್ನು ರಚಿಸಲಾಗಿದೆ. ಕ್ರೈಸ್ತ ಶಿಕ್ಷಣದ ಶಿಕ್ಷಕಿಯರು ರುಚಿಕರವಾದ ಊಟವನ್ನು ತಯಾರಿಸಿದ್ದರು. ಚರ್ಚಿನ ಜನತೆ ಇದಕ್ಕೆ ಸಂಪೂರ್ಣ ಸಹಕಾರ ನೀಡಿದ್ದು, ಈ ರೀತಿಯ ಮಕ್ಕಳ ದಿನಾಚರಣೆಯನ್ನು ಮಕ್ಕಳಿಗೆ ಸ್ಮರಣೀಯವನ್ನಾಗಿಸಿತು. ಈ ಸಭೆಯ ಉದ್ದೇಶವು ಮಕ್ಕಳ ದಿನಾಚರಣೆಯನ್ನು ಆಚರಿಸುವುದು ಮಾತ್ರವಲ್ಲದೆ ಮಕ್ಕಳಿಗೆ ಬೈಬಲ್‌ನೊಂದಿಗೆ ಹೆಚ್ಚು ಪರಿಚಿತರಾಗುವಂತೆ ಮಾಡುವುದು ಮತ್ತು ಸೃಜನಶೀಲ ಮತ್ತು ಪರಿಣಾಮಕಾರಿ ರೀತಿಯಲ್ಲಿ ಬೈಬಲ್‌ನ ಮೌಲ್ಯಗಳನ್ನು ಅವರಲ್ಲಿ ಅಳವಡಿಸುವುದು ಉದ್ದೇಶವಾಗಿದ್ದು, ಒಂದು ದಿನದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಚರ್ಚಿನ ಯಾಜಕರು. ಕ್ರೈಸ್ತ ಶಿಕ್ಷಣದ ಶಿಕ್ಷಕಿಯರು ಮತ್ತು ಪಾಲನ ಮಂಡಳಿ ಆಯೋಜಿಸಿತ್ತು.