

ಶ್ರೀನಿವಾಸಪುರ : ತಾಲೂಕಿನ ರೋಣುರು ಹಾಗು ತಿಮ್ಮಸಂದ್ರ ರಸ್ತೆಯಲ್ಲಿನ ಮಾವಿನ ತೋಪು ಒಂದರಲ್ಲ್ಲಿ ಕೋಳಿ ಪಂದ್ಯಗಳನ್ನು ಆಡುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಹಿನ್ನೆಲೆಯಲ್ಲಿ ಮಂಗಳವಾರ ಶ್ರೀನಿವಾಸಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ ನೇತೃತ್ವದಲ್ಲಿ ಕೋಳಿ ಪಂದ್ಯ ಅಡ್ಡೆಯ ಮೇಲೆ ದಾಳಿ ನಡೆಸಿ 9 ಬೈಕುಗಳು ಹಾಗು ಒಂದು ಕೋಳಿಯನ್ನ ವಶಪಡಿಸಿಕೊಂಡು ಕೇಸು ದಾಖಲಿಸಿಕೊಂಡಿದ್ದಾರೆ.
ಪಿಎಸ್ಐ ಶಿವಪ್ಪ, ಸಿಬ್ಬಂದಿಗಳಾದ ಆನಂದ್, ಪತ್ರಿಬಸಪ್ಪ, ಸಂಪತ್, ಶ್ರೀನಾಥ್ , ಸಂತೋಷ್, ಅಂಬರೀಶ್, ಗಣೇಶ್, ಮಂಜುನಾಥ್, ರಮೇಶ್ ದಾಳಿಯಲ್ಲಿ ಪಾಲ್ಗುಂಡಿದ್ದರು.