JANANUDI.COM NETWORK
ಪುತ್ತೂರು : ಇತಿಹಾಸ ಪ್ರಸಿದ್ದ ಪುತ್ತೂರು ಜಾತ್ರೆಗೂ ಧರ್ಮದ ಹೆಸರಿನಲ್ಲಅಧರ್ಮ ಆಚರಿಸುತ್ತ ಧರ್ಮ ಸಂಘರ್ಷ ಏರ್ಪಡಿಸಲು ಕಿಡಿ ಇದ್ದದ್ದು ಬೆಂಕಿ ಹಬ್ಬಿಸಲು ಎಂಬಂತ್ತೆ ಇದೀಗ ಹಿಜಾಬ್ , ಹಲಾಲ್, ವ್ಯಾಪಾರ ನಿರ್ಬಂಧ ಬೆನ್ನಲ್ಲೇ ಇದೀಗ ಆಟೋ , ಕ್ಯಾಬ್‌ಗಳಿಗೂ ನಿರ್ಬಂಧ ಹೇರಲು ಮುಂದಾಗಿದ್ದು ಮಾನವೀಯತೆ ಸತ್ತ ತರಹ ವರ್ತಿಸುತ್ತಾ ಪುತ್ತೂರು ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮುಸ್ಲಿಂ ಆಟೋ, ಕ್ಯಾಬ್‌ಗಳನ್ನು ಬಳಕೆ ಮಾಡದಂತೆ ಹಿಂದೂ ಆಟೋ ಚಾಲಕ ಸಂಘಟನೆಗಳಿಂದ ಕೇಸರಿ ಧ್ವಜ ನೀಡುವ ಮೂಲಕ ಹೊಸ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಆಟೋ ಚಾಲಕ ಸಂಘಟನೆಗಳಿಂದ ಕೇಸರಿ ಧ್ವಜ ನೀಡುವ ಮೂಲಕ ಹೊಸ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಅಂದರೆ ಈ ಆಟ್ಟೋಗಳಿಗೆ ಯಾವುದೇ ನಿಯಮಗಳಿಲ್ಲವೇ? ಯಾವಾಗ ಬೇಕೆಂದರೆ ಯಾವುದೇ ಧ್ವಜ ಹಾಗಿ ತಿರುಗಾಡ ಬಹುದೇ. ಕೇಸರಿ ಧ್ವಜ ನೀಡುವರಿಗೆಕಾನೂನು ಕ್ರಮಗಳು ಲಾಗೂ ಆಗುವುದಿಲ್ಲವೇ.
ಈ ಬ್ಗಗೆ ಎಲ್ಲೆಡೆ ವ್ಯಾಪಕ ಚರ್ಚೆ ಆಗುತ್ತಿದ್ದು, ಧರ್ಮ ಸಂಘರ್ಷಕ್ಕೆ ಮತ್ತೊಂದು ಕಾರಣ ಹುಡುಕಿ ಧರ್ಮ ಸಂಘರ್ಷವೇ ನಮ್ಮ ಉದ್ದೇಶ ಸಾಬೀತು ಪಡಿಸುವತ್ತೇ ಹೆಜ್ಜೆ ಇಟ್ಟಿದ್ದಾರೆ. ಇದು ಇಲ್ಲಿಗೆ ನಿಲ್ಲದಿದ್ದರೆ ಕರ್ನಾಟಕ ಭಾರತದಲ್ಲಿ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಕೆಟ್ಟು ಹೋಗುವುದರಲ್ಲಿ ಸಂಶಯವಿಲ್ಲ. ಅದಕ್ಕೂ ಮುಂಚೆ ರಾಜ್ಯಾಡಳಿತ ಎಚ್ಚೆತ್ತು ಕೊಳ್ಳಬೇಕು. ಇಲ್ಲದೆ ಇದ್ದಾರೆ ಮಾನವ ವಿರೋಧಿ ಕುಖ್ಯಾತಿ ಪಡೆಯುವುದು ನಿಸಂದೇಹ.