JANANUDI NEWS NETWORK (EDITOR : BERNARD D’COSTA)

ಕುಂದಾಪುರ: ಕಲ್ಯಾಣಪುರ ಸಮೀಪ ಉಪ್ಪುರಿನಲ್ಲಿ 5 ವರ್ಷದ ಬಾಲಕ ಕೆರೆಯಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ನಿನ್ನೆ ಸಂಜೆ ನಡೆದಿದೆ.
ಕುವೈಟ್ ನ ನಿವಾಸಿಗಳಾದ ನಾರ್ಮನ್ ಹಾಗೂ ಸಿಲ್ವಿಯಾ ಲುವೀಸ್ ದಂಪತಿಗಳ ಪುತ್ರ 5 ವರ್ಷದ ಲಾರೆನ್
ಲುವೀಸ್ ಮೃತಪಟ್ಟ ಬಾಲಕ.
ನಿನ್ನೆ ಮನೆಯಲ್ಲಿ ಬಾಲಕ ಕಾಣದಿದ್ದ ಹಿನ್ನೆಲೆಯಲ್ಲಿ ಮನೆ ಮಂದಿ ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ
ಬಾಲಕನ ಪತ್ತೆಯಾಗಿರಲಿಲ್ಲ. ಬಳಿಕ ಮನೆಯ ಹಿಂಬದಿ ಇರುವ ತೋಟದ ಸಮೀಪದ ಕೆರೆಯಲ್ಲಿ ಬಾಲಕನ ಮೃತದೇಹ ತೇಲುತ್ತಿರುವುದು ಕಂಡು ಬಂದಿದೆ. ನಾರ್ಮನ್ ಅವರ ಕುಟುಂಬ ಇತ್ತೀಚೆಗೆ ಕುವೈತ್ ನಿಂದ ರಜೆ ಹಿನ್ನೆಲೆಯಲ್ಲಿ ಊರಿಗೆ ಆಗಮಿಸಿತ್ತು. ಬಾಲಕ ಜು.4 ರಂದು ಹುಟ್ಟು ಹಬ್ಬ ಆಚರಿಸಿಕೊಂಡಿದ್ದ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ