JANANUDI.COM NETWORK
ಬೆಂಗಳೂರು: ಬರೇ 16 ವರ್ಷದ ಬಾಲಕನನ್ನು ಮನೆ ಮುಂದೆ ನಿಲ್ಲಿಸಿರುವ ಆಟೋಗಳನ್ನು ಕಳವು ಮಾಡುತ್ತಿದ್ದ ಆರೋಪದ ಮೇಲೆ ಕೆಂಗೇರಿ ಠಾಣಾ ಪೊಲೀಸರು ಬಂಧಿಸಿರುವ ಘಟನೆ ಬಗ್ಗೆ ವರದಿಯಾಗಿದೆ.
ಬಂಧಿತ ಆರೋಪಿಯ ವಿರುದ್ಧ ಕೆಂಗೇರಿ, ಕಾಮಾಕ್ಷಿಪಾಳ್ಯ, ಚಂದ್ರಲೇಔಟ್, ಕುಂಬಳಗೋಡು ಹಾಗೂ ಶೇಷಾದ್ರಿಪುರಂ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಆರೋಪಿಯು ಮನೆ ಮುಂದೆ ನಿಲ್ಲಿಸಿದ ಆಟೋಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಮನೆ ಮುಂದೆ ನಿಲ್ಲಿಸಿದ್ದ ಆಟೋಗಳ ವಯರ್ ಕಿತ್ತು, ಡೈರೆಕ್ಟ್ ಮಾಡಿ ಸ್ಟಾರ್ಟ್ ಮಾಡಿಕೊಂಡು ಪರಾರಿಯಾಗುತ್ತಿದ್ದ.
ಇಷ್ಟು ಸಣ್ಣ ಪ್ರಾಯ್ದಲ್ಲೇ ಇಲ್ಲಿವರೆಗೂ 6 ಆಟೋಗಳನ್ನು ಕಳ್ಳತನ ಮಾಡಿದ್ದು, ಈತ 18 ವರ್ಷದ ಒಳಗಿನ ಬಾಲಕನಾಗಿದ್ದು ನಟೋರಿಯಸ್ ಕಳ್ಳನಾಗಿ ಕುಖ್ಯಾತಿ ಪಡೆದಿದ್ದಾನೆ. ಈ ಬಗ್ಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಹಿನ್ನಲೆಯಲ್ಲಿ ಪೊಲೀಸರು ಕಾರ್ಯ ಪ್ರರ್ವತ್ತರಾದಾಗ ಸಿಸಿಟಿವಿ ದೃಶ್ಯ ಆಧರಿಸಿ ಬಾಲಕನನ್ನು ವಶಕ್ಕೆ ಪಡೆದ ಬಳಿಕ ಅಸಲಿ ಸತ್ಯ ಬಯಲಿಗೆ ಬಂದಿದೆ.
ಬಂಧಿತ ಆರೋಪಿಯಿಂದ ವಶಕ್ಕೆ ಪಡೆಯಲಾದ 6 ಆಟೋಗಳ ಒಟ್ಟ್ಟು ಮೌಲ್ಯ 15 ಲಕ್ಷ ರೂಪಾಯಿಗಳಾಗಿವೆ.