

ಕುಂದಾಪುರ: ಬಾವಿಗೆ ಹಾರಿ 13 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಣಿಯಲ್ಲಿ ನಡೆದಿದೆ. ರಿಷಿತಾ(13) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ರಿಷಿತಾ 2023ರ ಸೆಪ್ಟೆಂಬರ್ ತಿಂಗಳಿನಿಸಿದ ಮಾನಸಿಕ ಖಿನ್ನತೆಗೆ ಒಳಗಾಗಿ ಕುಂದಾಪುರ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಳು ಎನ್ನಲಾಗಿದೆ.
ಬುಧವಾರ ಸಂಜೆ ಶಾಲೆಯಿಂದ ಬಂದವಳು ಮನೆಯ ಸಮೀಪದ ಬೊಬ್ಬರ್ಯ ದೇವಸ್ಥಾನದ ಬಳಿ ಹೋಗಿದ್ದಾಳೆ. ಬಳಿಕ ಮನೆಗೆ ಬಾರದ್ದನ್ನು ಕಂಡು ಮನೆಯವರು ಹುಡುಕಾಡಿದಾಗ, ರಿಷಿತಾ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.