ಕುಂದಾಪುರ,ಮಾ.11: ಚಿಕ್ಕನಸಾಲ್ ರಸ್ತೆಯ ಸಂಗಮ್ ಸಮೀಪ ಕೋಸ್ತಾ ಕೊಂಪ್ಲೆಕ್ಸ್ ಹಿಂದಿನ ಒಣಿಯಲ್ಲಿ ಇಂದು ಬೆಳಿಗ್ಗೆ 10 ಅಡಿ ಉದ್ದದ ಹೆಬ್ಬಾವು ಒಣಿಯ ದಾರಿಯಲ್ಲಿ ಕಂಡು ಬಂತು. ಇಂದು ಇಲ್ಲಿಯೆ ಮಳೆ ನೀರಿನ ತೋಡನ್ನು ಸರಿಪಡಿಸಲು ಅಗೆತ ಮಾಡಿದ್ದು. ಕೆಲ ಗಂಟೆಗಳ ನಂತರ ಈ ಹೆಬ್ಬಾವು ಕಂಡು ಬಂತು.
ಈ ವಿಷಯವನ್ನು ಇಲ್ಲಿನ ಅರಣ್ಯ ಅಧಿಕಾರಿಗಳಿಗೆ ತಿಳಿಸಲಾಗಿ, ಬೀಟ್ ಫಾರೆಸ್ಟ್ ಗಾರ್ಡ್ ರಂಜೀತ್ ಬಂದು ಹೆಬ್ಬಾವನ್ನು ಹಿಡಿಯುವ ಕಾರ್ಯಚರಣೆ ಆರಂಭಿಸಿದರು. ಆದರೆ ಹೆಬ್ಬಾವು ತಪ್ಪಿಸಿಕೊಂಡು ಮನೆಯೊಂದರ ನೀರು ಹರಿಯುವ ಅಂಗಳದ ಅಡಿಯಿರುವ ಚೆನಲ್ ಒಳಗೆ ನುಗ್ಗಿ ಹೊರಗೆ ಬಾರದಾಯ್ತು. ಗಾರ್ಡ್ ರಂಜೀತ್ ಜೊತೆ ಹಲವಾರು ಯುವಕರು ಸೇರಿ ಹೆಬ್ಬಾವನ್ನು ಹೊರಗೆ ತೆಗೆಯುವ ಪ್ರಯತ್ನ ಮಾಡಲಾಯಿತು. ಸುಮಾರು ಒಂದು ಗಂಟೆಗೂ ಹೆಚ್ಚಿನ ಪ್ರಯತ್ನದ ನಂತರ ಹೆಬ್ಬಾವನ್ನು ಸೆರೆ ಹಿಡಿಯಲು ಯಶಸ್ವಿಯಾದರು.
ಬೀಟ್ ಫಾರೆಸ್ಟ್ ಗಾರ್ಡ್ ರಂಜೀತ್ ನಿನ್ನೆಯೆ ಕುಂದಾಪುರದ ಸೇವೆ ಕೊನೆ ದಿವಸವಾಗಿದ್ದು, ಬೈಂದೂರಿಗೆ ವರ್ಗಾವಣೆಯಾಗಿದ್ದು, ಕೊನೆ ಗಳಿಗೆಯಲ್ಲಿ ಹೆಬ್ಬಾವನ್ನು ಹಿಡಿದು ಅರಣ್ಯಕ್ಕೆ ಕೊಂಡಯ್ಯದಿದ್ದಾರೆ.
ಹೆಬ್ಬಾವನ್ನು ಸೆರೆ ಹಿಡಿಯಲು ಪ್ರವೀಣ್ ಡಿಮೆಲ್ಲೊ, ಮೆಕ್ವಿಲ್ ಡಿಸೋಜಾ, ಅಂತೋನಿ ಡಿಸೋಜಾ, ಬಾಜಿಲ್ ಡಿಸೋಜಾ, ಗಣೇಶ, ರಿಚ್ಚಾ, ಹನುಮಂತ, ಸೋಮು, ವಿಲ್ಸನ್ ಇನ್ನಿತರರು ಸಹಕರಿಸಿದ್ದಾರೆ.