ಶ್ರೀನಿವಾಸಪುರ : ಸಮಾಜವನ್ನು ತಿದ್ದಲು ಹಾಗೂ ಸಮಾಜಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕೇವಲ ಸರ್ಕಾರವನ್ನೇ ಅವಲಂಭಿಸುವುದನ್ನು ಬಿಟ್ಟು ಸಮಾಜಕ್ಕೆ ಬೇಕಾದದುನ್ನ ಸಂಘ, ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಹೇಳಿದರು.
ಪುರಸಭೆ ಕಛೇರಿಯಲ್ಲಿ ಶನಿವಾರ ಶ್ರೀನಿವಾಸಪುರ ನೇತಾಜಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಪಟ್ಟಣದ ಪುರಸಭೆ ಕಛೇರಿಯಲ್ಲಿ ಶುದ್ದ ಕುಡಿಯುವ ನೀರಿನ ಮಡಿಕೆ ಘಟಕವನ್ನು ಉದ್ಗಾಟಿಸಿ ಮಾತನಾಡಿದರು.
ಪಟ್ಟಣ ವ್ಯಾಪ್ತಿಯಲ್ಲಿನ ಸಾರ್ವಜನಿಕ ಆಸ್ಪತ್ರೆ ಆವರಣ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ , ಹಾಗು ಅಧಿಕ ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ ನೇತಾಜಿ ಚಾರುಟಬಲ್ ಟ್ರಸ್ಟ್ ವತಿಯಿಂದ ಉಚಿತವಾಗಿ ನೀರಿನ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ಎಂದರು.
ನೇತಾಜಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಎಸ್.ಆರ್.ನಾಗೇಂದ್ರರಾವ್, ಉಪಾಧ್ಯಕ್ಷ ಎಂ.ಇಂದ್ರಪ್ರಕಾಶ್ರೆಡ್ಡಿ, ಕಾರ್ಯದರ್ಶಿ ಎಸ್.ಸುನಿಲ್, ಖಜಾಂಚಿ ವಿ.ಕೃಷ್ಣಾರೆಡ್ಡಿ, ಸದಸ್ಯರಾದ ಡಾ||ರಮಾನಂದ್, ಡಾ||ವೆಂಕಟೇಶ್, ವಿ.ಶುಭಾಶ್, ಎ.ಆನಂದ್ಬಾಬು, ಕುರುಕುರೆ ಮಂಜುನಾಥ್, ಎಂ.ಪ್ರಭಾಕರರೆಡ್ಡಿ, ಎಸ್.ಮಂಜುನಾಥ್, ಪುರಸಭೆ ವ್ಯವಸ್ಥಾಪಕ ನವೀನ್ಚಂದ್ರ, ಕಂದಾಯ ಅಧಿಕಾರಿ ವಿ.ನಾಗರಾಜ್, ಆರೋಗ್ಯ ಅಧಿಕಾರಿ ಕೆ.ಜೆ.ರಮೇಶ್, ಕಂದಾಯ ನೀರಿಕ್ಷಕ ಶಂಕರ್, ಸಿಬ್ಬಂದಿಗಳಾದ ಸಂತೋಷ್,ಸುರೇಶ್ ಇದ್ದರು.