ಲೋಕಸಭೆ ಚುನಾವಣೆ ಎದುರಿಸಲು 25 ಗ್ಯಾರಂಟಿ ಸಾರಿದ ಕಾಂಗ್ರೆಸ್ -ಗ್ಯಾರಂಟಿಗಳ ವಿವರ ಹೀಗಿದೆ !!

  • ಶಿಕ್ಷಣ ಪಡೆದ ಯುವಜನತೆಗೆ ವಾರ್ಷಿಕ 1 ಲಕ್ಷ ರೂ. ಅಪ್ರೆಂಟಿಸ್‌ಶಿಪ್‌
  • 30 ಲಕ್ಷ ಉದ್ಯೋಗ ಸೃಷ್ಟಿ
  • ಪ್ರಶ್ನೆಪತ್ರಿಕೆ ತಡೆಗೆ ಎಲ್ಲ ರೀತಿಯ ಕ್ರಮ
  • ಗುತ್ತಿಗೆ ಆಧಾರಿತ ಉದ್ಯೋಗಿಗಳ ರಕ್ಷಣೆ
  • ಯುವಕರಿಗೆ 5 ಸಾವಿರ ರೂ. ಸ್ಟಾರ್ಟಪ್‌ ಫಂಡ್(Fund).
  • ಬಡಕುಟುಂಬದ ಒಬ್ಬ ಮಹಿಳೆಗೆ ವಾರ್ಷಿಕ 1 ಲಕ್ಷ ರೂ. ನೆರವು
  • ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಸ್ತ್ರೀಯರಿಗೆ ಶೇ.50ರಷ್ಟು ಮೀಸಲಾತಿ
  • ಆಶಾ, ಬಿಸಿಯೂಟ ಕಾರ್ಯಕರ್ತೆಯರ ಸಂಬಳ ದ್ವಿಗುಣ
  • ಗ್ರಾಮೀಣ ಭಾಗದ ಮಹಿಳಾ ಕಾರ್ಮಿಕರಿಗೆ ಕಾನೂನು ನೆರವು
  • ಮಹಿಳಾ ಕಾರ್ಮಿಕರ ಹಾಸ್ಟೆಲ್‌ಗಳನ್ನು ಎರಡು ಪಟ್ಟು ಹೆಚ್ಚಿಸುವುದು.
  • ಎಂ.ಎಸ್.ಸ್ವಾಮಿನಾಥನ್‌ ಆಯೋಗದ ಶಿಫಾರಿಸನಂತೆ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು
  • ರೈತರ ಸಾಲ ಮನ್ನಾ ಮಾಡಲು ಶಾಶ್ವತ ಆಯೋಗ ರಚನೆ
  • ಬೆಳೆ ವಿಮೆ ಹಣವನ್ನು 30 ದಿನಗಳಲ್ಲಿ ನೇರವಾಗಿ ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗುವುದು
  • ರೈತರ ಸ್ನೇಹಿಯಾಗಿ ಕೃಷಿ ರಫ್ತು ನೀತಿ ರೂಪಿಸುವುದು
  • ಕೃಷಿ ಸಲಕರಣೆಗಳಿಗೆ ಜಿಎಸ್‌ಟಿಯಿಂದ ಮುಕ್ತಿ.
  • ನರೇಗಾ ದಿನಗೂಲಿ ಕಾರ್ಮಕರ ದಿನಗೂಲಿ 400 ರೂ.ಗೆ ಏರಿಕೆ
  • ಪ್ರತಿಯೊಬ್ಬರಿಗೂ 25 ಲಕ್ಷ ರೂ.ವರೆಗೆ ಆರೋಗ್ಯ ವಿಮೆ
  • ನರೇಗಾ ರೀತಿ ನಗರಗಳಲ್ಲೂ ಉದ್ಯೋಗ ಖಾತ್ರಿ ಯೋಜನೆ
  • ಅಸಂಘಟಿತ ಕಾರ್ಮಿಕರಿಗೆ ಜೀವ ವಿಮೆ
  • ಸರ್ಕಾರಿ ನೌಕರರಿಗೆ ರಕ್ಷಣೆ, ಪಾರದರ್ಶಕತೆಗೆ ಆದ್ಯತೆ.
  • ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಗಾಗಿ ದೇಶಾದ್ಯಂತ ಜಾತಿ ಗಣತಿ
  • ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯ ಶೇ.50ರ ಮತಿ ತೆಗೆದುಹಾಕಲಾಗುವುದು
  • ಎಸ್‌ಸಿ, ಎಸ್‌ಟಿಯವರಿಗೆ ವಿಶೇಷ ಬಜೆಟ್‌ ಮಂಡನೆ
  • ಅರಣ್ಯ ಹಕ್ಕುಗಳ ಕಾಯ್ದೆಯ ವ್ಯಾಜ್ಯಗಳನ್ನು 1 ವರ್ಷದಲ್ಲಿ ವಿಲೇವಾರಿ ಮಾಡಲಾಗುವುದು
  • ಎಸ್‌ಟಿ ಸಮುದಾಯದವರು ಜಾಸ್ತಿ ಇರುವ ಕಡೆ ಪಂಚಾಯತ್‌ ಎಕ್ಸ್‌ಟೆನ್ಶನ್‌ ಟು ಶೆಡ್ಯೂಲ್ಡ್‌ ಏರಿಯಾಸ್‌ ಆಕ್ಟ್‌ (PESA) ವಿಸ್ತರಣೆ.