ಶ್ರೀನಿವಾಸಪುರ: ಮಕ್ಕಳಿಗೆ ಬರಿ ಶಿಕ್ಷಣ ಇದ್ದರೆ ಸಾಲದು. ದೈಹಿಕ ಮಾನಸಿಕ ಒತ್ತಡಗಳು ನಿಗ್ರಹಿಸಿ ಶಿಸ್ತು ಬದ್ದ ಪ್ರಜೆಗಳಾಗಿ ರೂಪುಗೊಳ್ಳಲು ಯೋಗ ವಿದ್ಯೆ ಪ್ರತಿಯೊಬ್ಬರು ಕಲಿತು ಜೀವನ ಸಾರ್ಥಕ ಪಡಿಸಿಕೊಳ್ಳಬೇಕೆಂದು ಜಿಲ್ಲಾ ಶಿಕ್ಷಣ ಪ್ರಮುಖ ಕೆ.ಎಂ.ಚೌಡಪ್ಪ ಹೇಳಿದರು.
ಪಟ್ಟಣದ ತ್ಯಾಗಜರಾಜ ಬಡಾವಣೆಯ ಯೋಗ ಮಂದಿರದಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಶ್ರೀನಿವಾಸಪುರ ಶಾಖೆಯಿಂದ ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ಮತ್ತು ಯೋಗಾಭ್ಯಾಸ 30 ದಿನಗಳ ವಸಂತ ಶಿಭಿರ ಉದ್ಘಾಟಿಸಿ ಮಾತನಾಡಿದರು.
ಪೋಷಕರು ಹೆಚ್ಚು ಹಣ ಕೊಟ್ಟು ಮಕ್ಕಳ ಆಡಂಬರ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಜೀನವ ಪದ್ದತಿಗಳು ಅವರಿಗೆ ಅರಿವಾಗಲು ಶ್ರದ್ದೆ ಭಕ್ತಿಯಿಂದ ಯೊಗ ಕಲಿಸಿ ಜೀವನದಲ್ಲಿ ಹೆತ್ತವರನ್ನು ಗೌರವಿಸುವ ಗುಣವಂತರಾಗುತ್ತಾರೆ. ನಿರಂತರ ಯೋಗಾಭ್ಯಾಸ ತೊಡಗಿಸಿಕೊಂಡಲ್ಲಿ ಶ್ರಮದ ಜೀನವ ತಿಳಿದು ಮಕ್ಕಳಿಗೆ ಒತ್ತಡ ತಡೆಯವ ದೈಹಿಕ ಮಾನಸಿಕ ಶಕ್ತಿ ಬರುತ್ತದೆ. ನಾವು ಇಲ್ಲಿಗೆ ಬಾರದಿದ್ದರೂ ನಿತ್ಯ ಚೆಟುವಟಿಕೆಗಳಲ್ಲಿ ಯೋಗ ನಡೆಯಿತ್ತಿದೆ. ಅವುಗಳಿಂದ ನಾವು ಕಲಿಯುವುದು ಬಹಳಷ್ಟಿದೆ. ಶಿಸ್ತು ಇದ್ದರೆ ಸಾಧನೆಗೆ ದಾರಿಯಾಗಿ ಗುರು ಹಿರಿಯರನ್ನು ಗೌರವಿಸುವ ಗುಣ ಬರುತ್ತದೆÉ. ಇಂದು ಜನರು ಮಾನಸಿಕವಾಗಿ ದೈಹಿಕವಾಗಿ ಕೌಟುಂಬಿಕವಾಗಿ ಶೈಕ್ಷಣಿಕವಾಗಿ ಭೌತಿಕವಾಗಿ ಬೇಳೆದರೆ ಮಾತ್ರ ಕುಟುಂಬಗಳಲ್ಲಿ ನೆಮ್ಮದಿ ಸಾಮರಸ್ಯ ಸಂಬಂದಗಳು ಉಳಿಯುತ್ತವೆ ಎಂದು ಹೇಳಿದರು.
ಎಸ್ಪಿವೈಎಸ್ಸೆಸ್ ಶಿಕ್ಷಕಿ ಎನ್.ಜಿ.ವರಲಕ್ಷ್ಮಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಸ್ಕಾರ ಸಂಘಟನೆ ಸೇವೆ ಎಂಬ ದ್ಯೇಯದಿಂದ ಬೇಸಿಗೆಯಲ್ಲಿ 10 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ಕಲಿಸುವ ಯೋಗಾಭ್ಯಾಸ, ಪ್ರಾಣಾಯಾಮ ಮತ್ತು ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ವ್ಯಕ್ತಿತ್ವ ವಿಕಸವಾಗಿ ಶೈಕ್ಷಣಿಕ ಜ್ಞಾನ ವೃದ್ಧಿಯಾಗುತ್ತದೆ. ಬೇಸಿಗೆಯಲ್ಲಿ ಉಚಿತವಾಗಿ ಕಲಿಸುವ ಯೋಗ ಶಿಬಿರವನ್ನು ಸದ್ಬಳಕೆ ಮಾಡಿಕೊಂಡು ಆರೋಗ್ಯವಂತರಾಗಿ. ಯೋಗ ವಿಶ್ವವ್ಯಾಪಿಯಾಗಿ ನಮ್ಮ ಸಂಸ್ಕøತಿ ಎಲ್ಲರು ಕಲಿತು ಪ್ರಬುದ್ದರಾಗಿ.
ಡಿಎಡ್ ಕಾಲೇಜ್ ಪ್ರಿನ್ಸಿಪಾಲ್ ಎಚ್.ವಿ.ಬಾಬು ಮಾತನಾಡಿ ಸಮಾಜದಲ್ಲಿ ಮನೆ ದೊಡ್ಡದು, ಕುಟುಂಬ ಚಿಕ್ಕದಾಗಿ ಮನಸುಗಳ ಮದ್ಯೆ ಕಂದರ ಉಂಟಾಗುತ್ತಿದೆ. ಶ್ರಮ ಇಲ್ಲದ ಮನುಷ್ಯರಿಗೆ ಆರೋಗ್ಯ ಮತ್ತು ಮನಃಶಾಂತಿ ಇಲ್ಲದೆ ದೈಹಿಕ ತೊಂದರೆಗಳು ಬರುತ್ತಿವೆ. ಸುಖದ ಜೀವನ ರೂಪಿಸಿಕೊಂಡು ದುಡಿಮೆ ಇಲ್ಲದೆ ಆರೋಗ್ಯ ಕುಂಟಿತಗೊಳ್ಳುತ್ತಿದೆ. ಮಕ್ಕಳನ್ನು ಸುಸಂಸ್ಕøತರಾಗಿ ಬೆಳೆಸಿ ಜೀವನದಲ್ಲಿ ಯೋಗ್ಯರನ್ನಾಗಿ ಬೆಳೆಸಲು ರಜೆ ದಿನಗಳಲ್ಲಿ ಮಕ್ಕಳ ದೇಹ ದಂಡನೆಗೆ ಪೋಷಕರು ಒತ್ತು ನೀಡಿ. ಯೋಗಾಬ್ಯಾಸಕ್ಕೆ ಕಲಿಸಿ ವಿವಿದ ಕರಕುಶಲ ಕಲಾಕೃತಿಗಳು ರಚಿಸಿ ಅವರಲ್ಲಿರುವ ಪ್ರತಿಭೆಯನ್ನು ಪೋಶಿಸುವ ಬೇಸಿಗೆ ಶಿಬಿರದ ಪ್ರಯೋಜನ ಪಡೆದುಕೊಮಡು ಸಮಾಜಿಕ ಆದ್ಯಾತ್ಮಿಕ ಭಾವನಾತ್ಮಕ ಸಂಬಂದಗಳು ಕಲಿಯುತ್ತಾರೆಂದರು. ವೆಂಕಟರತ್ನಮ್ಮ ಪ್ರಾರ್ಥಿಸಿದರು, ಲಕ್ಷ್ಮಿ ಬಾಬು ಸ್ವಾಗತಿಸಿ, ಎಂ.ಕೆ.ವೆಂಕಟರವಣಿ ನಿರೂಪಿಸಿ, ಅನುರಾಧಾ ವಂದಿಸಿದರು.