ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆನಗಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು, ಆನಗಳ್ಳಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಉಡುಪಿ ಜಿಲ್ಲಾ ಕೆಡಿಪಿ ಸದಸ್ಯರಾದ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕ ಗಂಗಾಧರ ಶೆಟ್ಟಿಯವರು ಶುಕ್ರವಾರ ರಾತ್ರಿ ನಿಧನರಾಗಿರುತ್ತಾರೆ. ಕುಂದಾಪುರದಲ್ಲಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರರಾಗಿದ್ದು. ಕಾಂಗ್ರೆಸಿನ ಸಭೆ ಹೋರಾಟದಲ್ಲಿ ಮಂಚೂಣಿಯಲ್ಲಿ ಇರುತ್ತಿತ್ತು. ಅದೆಷ್ಟೋ ನಾಯಕರು ಮತ್ತು ಕಾರ್ಯಕರ್ತರು ಗೆಲುವಿನ ಬೆನ್ನು ಹತ್ತಿ ಬೇರೆ ಪಕ್ಷದಲ್ಲಿ ತಮ್ಮ ಭವಿಷ್ಯವನ್ನು ಕಂಡುಕೊಂಡರು. ಆದರೆ ಗಂಗಾಧರರವರು ಪಕ್ಷನಿಷ್ಠೆಯಿಂದ ಕಾಂಗ್ರೆಸ್ ಪಕ್ಷದಲ್ಲೇ ಉಳಿದರು. ಮುಂಚೂಣಿ ನಾಯಕರಲ್ಲಿ ಹೇರಿಕುದ್ರು ಗಂಗಾಧರ ಶೆಟ್ಟಿಯವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ.
ಸದಾ ಜನಪರವಾಗಿ ಕೆಲಸ ಮಾಡುತ್ತಾ, ತನ್ನ ದುಡುಮೆಯೇ ಜನರಿಗಾಗಿ ಹೋರಾಡಿದ ಜನರ ನಾಯಕ ನಮ್ಮ ಗಂಗಣ್ಣ ಎಂದೆ ಖ್ಯಾತರಾಗಿದ್ದರು. ಜಾತಿ ಮತ ಬೇತ ಇಲ್ಲದೆ ಇವರ ಸೇವೆ ಅಮೂಲ್ಯ ಎಂದು ಜನ ಆಡಿಕೊಳ್ಳುತ್ತಾರೆ. ಸಮಾಜ ಸೇವೆಗಾಗಿ ತಾನು ಮದುವೆಯಾಗದೇ , ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಉತ್ತುಂಗಕ್ಕೆ ಏರಿಸಿದವರು ಗಂಗಣ್ಣ. ಯಾವ ಚುನಾವಣೆಯಲ್ಲಿಯೂ ಇವರ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷವೇ ಲೀಡ್ ಆಗುವಂತೆ ದುಡಿಯುತಿದ್ದರು. ಇವರ ಸೇವೆ ಗುರುತಿಸಿ ಕಾಂಗ್ರೆಸ್ ಪಕ್ಷವು ಅವರಿಗೆ ಮೊನ್ನೆತಾನೇ ಉಡುಪಿ ಜಿಲ್ಲಾ ಕೆಡಿಪಿಗೆ ನಾಮನಿರ್ದೇಶನ ಮಾಡಿತ್ತು.
ಆನಗಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಳಿಕವೂ ಅವರು ತಮ್ಮ ಗ್ರಾಮದ ಸೇವೆಯಲ್ಲಿ ಮಂಚೂಣಿಯಲ್ಲಿ ಇರುತಿದ್ದರು. ಇಅರ ಸಾವು ಕುಂದಾಪುರ ಕಾಂಗ್ರೆಸ್ ಪಕ್ಷಕ್ಕೆ, ಆನಗಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯ ಜನರಿಗೆ ತುಂಬಲಾರದ ನಷ್ಟವಾಗಿದೆ, ಇವರು ತಮ್ಮ ಜೀವನವನ್ನು ಕಾಂಗ್ರೆಸ್ ಪಕ್ಷಕ್ಕೆ ಮತ್ತು ಜನರ ಸೇವೆಗೆ ಮಿಗಿಲಾಗಿಸಿದ್ದರು ಅಂದರೆ ತಪ್ಪಲಾಗಾದು. ಇವರ ಅಂತೀಮ ದರ್ಶನವನ್ನು ಅನೇಕ ರಾಜಕೀಯ ಮುಖಂಡರು, ಧಾರ್ಮಿಕ ಮುಖಂಡರು ಭಾಗವಹಿಸಿ ಶ್ರದ್ದಾಂಜಲಿ ಅರ್ಪಿಸಿದ್ದಾರೆ.