ಕುಂದಾಪುರ, ಮಾ.17: ಕುಂದಾಪುರ ರೋಜರಿ ಚರ್ಚಿನಲ್ಲಿ ಈಸ್ಟರ್ ಹಬ್ಬದ ಪ್ರಯುಕ್ತ ಮಾ.16 ರಂದು ಒಂದು ದಿನದ ದ್ಯಾನಕೂಟ ನಡೆಯಿತು.
ಈ ದ್ಯಾನ ಕೂಟವನ್ನು ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರದ ರೆಕ್ಟರ್ ವಂ|ಸುನೀಲ್ ವೇಗಸ್ ನಡೆಸಿಕೊಟ್ಟರು. ಈ ದ್ಯಾನಕೂಟದಲ್ಲಿ ವಂ|ಸುನೀಲ್ ವೇಗಸ್ ಇವರು ಪವಿತ್ರ ಪುಸ್ತಕದ ವಿಚಾರಗಳ ಮೇಲೆ ಚಿಂತನ ಮಂಥನ ಮಾಡಿ, ದೇವರ ವಾಕ್ಯಗಳ ಮೇಲೆ ಬೆಳಕು ಚೆಲ್ಲಿದರು. ದಾವಿದ ರಾಜನು ಸಿಂಹಾಸನದ ಮೇಲೆ ಕುಳಿತುಕೊಂಡರೆ, ಯೇಸು ಕ್ರಿಸ್ತರು ತನಗೆ ಕೊಟ್ಟ ಯೋಜನೆಯನ್ನು ಪೂರ್ಣಗೊಳಿಸಿ, ಶಿಲುಭೆ ಎಂಬ ಸಿಂಹಾಸನವನ್ನು ತನ್ನದಾಗಿಸಿಕೊಂಡು, ಮರಣವನ್ನು ಜಯಿಸಿ, ಪಿತನ ದೇವಲೋಕದ ಸಿಹಾಂಸನದಲ್ಲಿ ಪಕ್ಕದ ಸ್ಥಾನ ಗಳಿಸಿಕೊಂಡರು. ಆ್ಯಡಮ್ ನಮ್ಮನ್ನು ಪಾಪಕ್ಕೆ ತಳ್ಳಿದರೆ, ಎರಡನೇ ಆ್ಯಡಮ್ ಆದ ಯೇಸು ನಮ್ಮನ್ನು ಪಾಪದಿಂದ ವೀಮೊಚನೆ ಮಾಡಿದರು. ಯೇಸುವಿಗೆ ಕೂಡ ಆತ್ಮಿಯ ವ್ರಂದ ಇತ್ತು ಪೀಟರ್, ಜಾಕೊಬ್, ಜೋನ್ ಆತ್ಮಿಯರಾಗಿದ್ದರು, ಕೊನೆ ಗಳಿಗೆಯಲ್ಲಿ ಇವರೆಲ್ಲ ಯೇಸುವನ್ನು ಬಿಟ್ಟು ಪಲಾಯನ ಮಾಡಿದರು, ಆದರೆ ದೇವರಾದ ಪಿತನು ಆತನ ಸಂಗಡ ಇದ್ದಿದ್ದರು. ನಮ್ಮ ಜೀವನದಲ್ಲಿ ಕೂಡ ಹಾಗೆ ಯಾರೂ ಇಲ್ಲದಿದ್ದರೂ ಆ ಯೇಸು ನಮ್ಮ ಸಂಗಡ ಇರುವನು ಎಂದು ಅರಿತುಕೊಳ್ಳಬೇಕು. ಹಾಗೇ ಕೊನೆಗೆ ನಾವು ಮಾಡಿದ ಪಾಪ ಪುಣ್ಯಗಳಂತ್ತೆ ನಮಗೆ ಪ್ರತಿಫಲ ಸಿಗುತ್ತದೆ” ಎಂದು ಅಧ್ಯಾತ್ಮಿಕ ಜ್ಞಾನವನ್ನು ನೀಡಿದರು.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದ್ಯಾನಕೂಟದ ಪ್ರಯೋಜನವನ್ನು ಪಡೆದರು. ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ ಉಪಸ್ಥಿತರಿದ್ದು, ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಸ್ವಾಗತಿಸಿ ವಂದಿಸಿದರು.