ಶ್ರೀನಿವಾಸಪುರ : ಕಾಂಗ್ರೆಸ್ ಸರ್ಕಾರ ಶಿಕ್ಷಕ, ಶಿಕ್ಷಣ, ವಿದ್ಯಾರ್ಥಿ ಹಾಗು ಶಿಕ್ಷಣ ಸಂಸ್ಥೆಗಳನ್ನು ಕಂಡರೆ ಅರ್ಲಜಿ. ಹಾಗಾಗಿ ಕಾಂಗ್ರೆಸ್ ಸರ್ಕಾರ ಶಿಕ್ಷಕರ ಪರವಾಗಿ ಯಾವುದೇ ಯೋಜನೆಗಳನ್ನು ತರುವುದಿಲ್ಲ ಎಂದು ಆಗ್ನೇಯ ಪದವಿದರ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಟೀಕಿಸಿದರು.
ಪಟ್ಟಣದ ವೆಂಕಟೇಗೌಡ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಗ್ನೇಯ ಪಧವಿ ದರ ಕ್ಷೇತ್ರದ ಚುನಾವಣೆಯ ಪೂರ್ವಬಾವಿಯಾಗಿ ನಡೆದ ಸಭೆಯ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಯಾವ ಯಾವ ಕಾಲಘಟಕದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಳ್ವಿಕೆಗೆ ಬಂದಿದೆಯೋ ಅಷ್ಟೋ ಬಾರಿ ಶಿಕ್ಷಕರ ಬಗ್ಗೆ ನಿಲ್ಲಲಿಲ್ಲ. ೫ ವೇತನ , ೬ ನೇ ವೇತನವನ್ನು ಜಾರಿಗೆ ತಂದಿದ್ದು, ಅದೇ ರೀತಿಯಾಗಿ ಪ್ರಮೋಷನ್ ಕೊಡಿಸಿದ್ದು, ಬಿಜೆಪಿ ಪಕ್ಷ . ಬಿಜೆಪಿ ಪಕ್ಷವು ಶಿಕ್ಷಕರ ಪರವಾಗಿ ನಿಂತಿದೆ. ೪೪೦೦ ಜೆಒಸಿ ಶಿಕ್ಷಕರನ್ನು , ೧೫೦೦ ಅರೆಕಾಲಿಕ ಶಿಕ್ಷಕರನ್ನು , ೫೨೦೧ ಗುತ್ತಿಗೆ ಆದಾರದ ಮೇಲಿನ ಸಹಶಿಕ್ಷಕರನ್ನ ಖಾಯಂ ಮಾಡಿಸಿದ್ದು ಹಾಗು ಮುರಾರ್ಜಿ ಶಾಲೆಯ ೨೫೦೦ ಶಿಕ್ಷಕರನ್ನ ನೇಮಕ ಮಾದಿದ್ದು ಬಿಜೆಪಿ ನೇತೃತ್ವದ ಸರ್ಕಾರ.
ಶಿಕ್ಷಕರನ್ನು ಎದುರು ಹಾಕಿಕೊಂಡು ಯಾರು ಬದಿಕಿಲ್ಲ. ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರೇ ಶಿಕ್ಷಕರನ್ನು ಎದುರು ಹಾಕಿಕೊಳ್ಳಬೇಡಿ ಎಂದು ಟಾಂಗ್ನೀಡಿದರು. ಶಿಕ್ಷಕರಿಗೆ ನ್ಯಾಯವಾಗಿ ಕೊಡಬೇಕಾದ ಸವಲತ್ತುಗಳನ್ನು ಕೊಡಲಿ ಸಾಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಶಿಕ್ಷಣಕ್ಕೆ ಸಂಬAದಿಸಿದAತೆ ಗೊಂದಲುಗಳು ಸೃಷ್ಟಿಯಾಗುತ್ತಲೇ ಇದೆ.
ಪ್ರೌಡಶಾಲಾ ಸಹ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್, ಖಾಜಾಂಚಿ ಕೆ.ಸಿ.ಶ್ರೀನಿವಾಸ್, ಜಿಲ್ಲಾ ಸಂಘದ ಪ್ರತಿನಿದಿಗಳಾದ ಶ್ರೀನಿವಾಸರೆಡ್ಡಿ, ಜಿ.ಶ್ರೀನಿವಾಸಗೌಡ, ಟಿಪಿಒ ವೆಂಕಟಸ್ವಾಮಿ, ಪ್ರೌಡಶಾಲಾ ಶಿಕ್ಷಕರ ಸಂಘ ತಾಲೂಕು ಅಧ್ಯಕ್ಷ ಆರ್. ಸುಬ್ರಮಣಿ, ಕಾರ್ಯದರ್ಶಿ ಮುರಳಿ ಬಾಬು, ಖಜಾಂಚಿ ಸಿ.ಸುಬ್ರಮಣಿ, ಪದಾಧಿಕಾರಿಗಳಾದ ಎಂ .ಅಶೋಕ್, ಚೆನ್ನಕೇಶವ, ಮಂಜುನಾಥ್, ಎಸ್ಸಿ, ಎಸ್ಟಿ ಸಮನ್ವಯ ಸಮಿತಿ ಅಧ್ಯಕ್ಷ ಎಸ್.ಮುನಿವೆಂಕಟಪ್ಪ, ಪ್ರತಿ ನಿದಿ ಆಂಜಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಬೈಯಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಖಾಚಾಂಜಿ ವೇಣುಗೋಪಾಲ್, ನಿರ್ದೇಶಕರಾದ ವೆಂಕಟರಾಮಿರೆಡ್ಡಿ, ಶಿವಾರೆಡ್ಡಿ, ನೌಕರರ ಸಂಘದ ಉಪಾಧ್ಯಕ್ಷ ಸಿ.ಎಂ.ವೆAಕಟರಮಣ, ನಿರ್ದೇಶಕ ಎಂ.ಬೈರೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಮಾಜಿ ಅಧ್ಯಕ್ಷ ಗೋವಿಂದರೆಡ್ಡಿ, ಶಿಕ್ಷಕರಾದ ಕಲಾಶಂಕರ್, ಪದ್ಮನಾಭ್, ಹೊಗಳಗೆರೆ ನಾಗರಾಜ್, ಮುನಿವೆಂಕಟರೆಡ್ಡಿ, ನಿರ್ಮಲ್ಕುಮಾರ್, ಉಪನ್ಯಾಸಕಾರಾದ ಮಂಜುನಾಥ್, ಗಿರೀಶ್, ನಾಗರಾಜ್, ಶ್ರೀನಾಥ್, ಖಾಸಗಿ ಶಿಕ್ಷಣ ಸಂಸ್ಥೆಗಳ ಸಣಘದ ಮುಖ್ಯಸ್ಥರಾದ ರಾಮಾಂಜಿ, ಮಲ್ಲಿಕಾರ್ಜುನ್ ಇದ್ದರು