ಬರಹ: ಬರ್ನಾಡ್ ಡಿಕೋಸ್ತಾ, ಕುಂದಾಪುರ (ನಾಟಕಗಾರರು ಸಾಹಿತಿಗಳು)
ಮಾ.5: ಮಾರ್ಚ್ 3 ರಂದು ರೋಜರಿ ಚರ್ಚ್ ಮೈದಾನದಲ್ಲಿ ನಡೆದ “ಎಮ್ಮಾವ್ಸ್” ಕೊಂಕಣಿ ನಾಟಕ ಯಶಸ್ವಿಯಾಗಿ ಪ್ರದರ್ಶನ ಗೊಂಡಿತು.
ಈ ನಾಟಕವು ಜೀವನದಲ್ಲಿ ಜಿಗುಪ್ಸೆಯಾಗಿರುವರಿಗೆ, ತಾನು ಜೀವನದಲ್ಲಿ ಪುನಹ ಆಸಕ್ತಿ ಹೊಂದಬೇಕು, ಯಾವುದೆ ಕಾರಣಕ್ಕೂ ಆತ್ಮಹತ್ಯೆ ಪರಿಹಾರ ಅಲ್ಲಾ, ಜನ್ಮ ನೀಡಿತ ಸ್ರಸ್ಠಿಕರ್ತನು ಯಾವನೊಬ್ಬನೂ ಆತ್ಮಹತ್ಯೆ ಮಾಡಿಕೊಳ್ಳುವುದು ಒಪ್ಪುವುದಿಲ್ಲ. ಮನುಷ್ಯ ಸಹನೆಯಿಂದ ಆದುದುದೆನೆಲ್ಲವನ್ನು ತಾಳ್ಮೆಯಿಂದ ಸಹಿಸಿಕೊಂಡು, ಜೀವಿಸಬೇಕು, ಮುಂದೆ ಜೀವನದಲ್ಲಿ ಸಮಸ್ಯೆ ಪರಿಹಾರ ಆಗುವುದು ಎಂಬ ಸಂದೇಶ ಈ ನಾಟಕದಲ್ಲಿ ಇದೆ.
ಬರೆ ಎರಡೇ ಕಲಾವಿದರು ಇರುವ ಈ ನಾಟಕದಲ್ಲಿ, ಜೀವನದಲ್ಲಿ ವಿಧ್ಯೆ, ಪದವಿಗಳು ಮುಖ್ಯವಲ್ಲ, ತಿಳುವಳಿಕೆ, ಒದಿ ಜ್ಞಾನ ಸಂಪಾದಿಸುವುದು, ಅನುಭವ ಇದೇ ಮುಖ್ಯ ಎಂಬುದನ್ನು ಮನದಟ್ಟು ಮಾಡುತ್ತದೆ. ಕಲಿತವರಾದರೂ ತಾಳ್ಮೆ, ಸಹನೆ, ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಅಸಫಲತೆ ಕಾಣುತ್ತಾರೆ, ತಾಳ್ಮೆ ಸಮಾಧಾನ ದೇವರಲ್ಲಿ ಅಚಲ ನಂಬಿಕೆ, ಪವಿತ್ರ ಗ್ರಂಥಗಳನ್ನು ಒದುವ ಮೂಲಕ ಜೀವನದಲ್ಲಿ ಹೊಸ ಪ್ರೇರಣೆ ನೀಡುತ್ತದೆ ಎಂದು ನಾಟಕದಲ್ಲಿ ಪೂರ್ಣ ಸಾಂರಂಶವಾಗಿದೆ.
ನಾಟಕವು ಏಕಾಂಕ ದ್ರಶ್ಯದ ನಾಟಕದವಾಗಿದು, ನಾಟಕದಲ್ಲಿ ಇಬ್ಬರು ಮಾತ್ರ ಪಾತ್ರದಾರಿಯಾಗಿದ್ದು. ಕಲಾವಿದರಾದ ಕ್ಲ್ಯಾನ್ವಿನ್ ಆನಿ ಸ್ವೀಡಲ್ ಉತ್ತಮ ನಟನೆ ಮಾಡಿದ್ದಾರೆ. ಉತ್ತಮ ಸಂಭಾಷಣೆಯ ಮೂಲಕ ಪ್ರೇಕ್ಷಕರನ್ನು ಆಕರ್ಶಣೆಗೆ ಒಳಪಡಿಸಿದ್ದಾರೆ. ತರುಣಿ ಪಾತ್ರದ ಸ್ವೀಡಲ್ ಅವರ ಮುಖಭಾವದಲ್ಲಿ ಸನ್ನಿವೇಷಕ್ಕೆ ತಕ್ಕಂತೆ ಆಗುವ ಬದಲಾವಣೆ ನಿರೀಕ್ಷೆಗೆ ತಕ್ಕಿದನಾಗಿದ್ದು, ಹಾವಭಾವ ತಕ್ಕದನಾಗಿತ್ತು. ಪ್ರಾಯದವನಾಗಿ ನಟಿಸಿದ ಕ್ಲ್ಯಾನ್ವಿನ್ ನಟನೆ ಶ್ಲಾಘನೆಗೆ ಒಳಪಟ್ಟಿತು. ನಾಟಕದ ಕೊನೆ ತನಕ ಆ ಪಾತ್ರದ ನಡೆತೆ ಒಂದೇ ಥರಹದ ರೀತಿಯಲ್ಲಿ ನಟಿಸಿಕೊಂಡೇ ಆ ಪಾತ್ರಕ್ಕೆ ಜೀವ ನೀಡಿದ್ದಾರೆ. ಆದರೆ ಆ ಪಾತ್ರ ಪ್ರಾಯದವರಾಗಿದ್ದು, ಕೈ ಕಾಲು, ಪ್ರಯಾದವರಿಗಾಗುವ ಕಂಪನದ ನಟನೆ ಉತ್ತಮ ರೀತಿಯಲ್ಲಿ ಮಾಡಿದ್ದಾರೆ. ಆದರೆ ಆ ಪಾತ್ರ ನಿರ್ವಹಿಸುವ ಕ್ಲ್ಯಾನ್ವಿನ್ ತರುಣಾನಾಗಿದ್ದು, ತಲೆ ಕೂದುಲು ಗಡ್ಡಕ್ಕೆ ಬಿಳಿ ಬಣ್ಣ ಹಚ್ಚಿಕೊಂಡರೂ, ಆತನ ದೇಹ ಕಟ್ಟುಮಸ್ತ್ ಆಗಿದ್ದು ಆತ ತರುಣನಂತೆ ಕಂಡು ಬರುವುದು, ಒಂದು ಕುಂದು ಎಂದು ನನ್ನ ಭಾವನೆ.
ಬೆಳಕು ನಾಟಕಕ್ಕೆ ತಕ್ಕನಾಗಿದ್ದು, ಸಂಗೀತ ಹೀತಕಾರಿ ಸೌಮ್ಯವಾಗಿದ್ದು ಕೇಳುಗರಿಗೆ ಮೆಚ್ಚುಗೆಯಾಗುವಂತಿದ್ದು. ನಾಟಕದ ಅಂತ್ಯ ನಿಗೂಡ ಮತ್ತು ಸುಖಮಯವಾಗಿತ್ತು
ಈ ನಾಟಕವನ್ನು ಧರ್ಮಗುರು ಆಲ್ವಿನ್ ಸೆರಾಂವ್ ರಚನೆ ಮಾಡಿದ್ದಾರೆ. ಇದು ಹಲವಾರು ಕಡೆ ಪ್ರದರ್ಶನ ನಡೆದು. ಇದು 37ನೇಯ ಪ್ರದರ್ಶನವಾಗಿದೆ. ಸಂಗೀತ್ ನಿರ್ವಹಣೆ ಆ್ಯನ್ಸಿಟಿನ್ ಮಚಾದೊ ಮಾಡಿದ್ದಾರೆ, ರಂಗ ಸಜ್ಜಿಕೆ ಕ್ರಿಸ್ಟನ್, ಯಶಸ್ವಿನ್, ಚಿನ್ಮಯಿ, ಕೇತನ್ ಕ್ಯಾಸ್ತಲಿನೊ, ತಾಂತ್ರಿಕತೆ ಆಹಾಯರ್ಂ, ವಿನ್ಯಾಸ ಮತ್ತು ನಿರ್ದೇಶನ ಕ್ರಿಸ್ಟಿ ನೀನಾಸಮ್ ನಾಟಕದ ಪ್ರದರ್ಶನದ ಜವಾಬ್ದಾರಿಯನ್ನು ಜೊಯೆಲ್ ವಹಿಸಿಕೊಂಡಿದ್ದು, ಅವರನ್ನು ಎಲ್ಲಾ ಕಲಾವಿದರ ಪರವಾಗಿ, ರೋಜರಿ ಚರ್ಚಿನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಕುಂದಾಪುರದ ನಾಗರಿಕರ ಪರವಾಗಿ ಸನ್ಮಾನಿಸಿದರು.
ನಾಟಕವನ್ನು ವೀಕ್ಷಿಸಲು ವಿವಿಧ ಚರ್ಚುಗಳ ಧರ್ಮಗುರುಗಳು ಮತ್ತು ನಾಗರಿಕರು ಆಗಮಿಸಿದ್ದರು. ಅ|ವಂ|ಸ್ಟ್ಯಾನಿ ತಾವ್ರೊ ಸ್ವಾಗತಿಸಿ, ನಾಟಕಕ್ಕೆ ಸಹಾಯ ಧನ್ ನೀಡಿದವರಿಗೆ ಗೌರವಿಸಿದರು. ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ ಮತ್ತು ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದರು.