ಕುಂದಾಪುರ ಮಾ.4: ಕುಂದಾಪುರ ಹೋಲಿ ರೋಜರಿ ಇಗರ್ಜಿಯ ಸಭಾಭವನದಲ್ಲಿ ಕ್ರೈಸ್ತ ಶಿಕ್ಷಣ ದಿನಾಚರಣೆ ಮಾ 3 ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ
ಅಶ್ವಿನ್ ಆರಾನ್ನ “ನೀತಿ ಶಿಕ್ಷಣವು ಮೊದಲು ಮನೆಯಿಂದ, ಮಗುವಿನ ತಂದೆ ತಾಯಿಂದ ಆರಂಭವಾಗುವುದು, ಮಕ್ಕಳಿಗೆ ಭಯಭಕ್ತಿ, ವಿಶ್ವಾಸ, ಪ್ರಾರ್ಥನೇಯ ಅಭ್ಯಾಸವನ್ನು ಮನೆಯಲ್ಲೇ ಕಲಿಸಬೇಕು. ನಾವು ನೀಡುವ ಭೋಧನೆಗಳು ಗಾಳಿಗೆ ತೂರಿದರೆ ಏನು ಪ್ರಯೋಜನವಿಲ್ಲಾ, ನಮ್ಮ ಭೋಧನೆಗಳು ಕೆಲವರಿಗೆ ಹ್ರದಯಕ್ಕೆ ನಾಟುವುದಿಲ್ಲಾ, ಅದಕ್ಕೆ ನಮ್ಮ ನೀತಿ ಶಿಕ್ಷಣವು ಹ್ರದಯಕ್ಕೆ ನಾಟಿದರೆ ಮಾತ್ರ ಅದು ಶಾಸ್ವತವಾಗಿ ಉಳಿಯುತ್ತದೆ. ನೀತಿ ಶಿಕ್ಷಣವನ್ನು ಆರಗಿಸಿಕೊಂಡು ಬಾಳಿದರೆ, ದೇವರ ಸಾಮ್ರಾಜ್ಯಕ್ಕೆ ನಾವು ಹತ್ತಿರ ಆಗುತ್ತೇವೆ” ಎಂದು ತಿಳಿಸಿದರು
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರೋಜರಿ ಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮಾತನಾಡಿ ನಮ್ಮಲ್ಲಿ ಉತ್ತಮ ನೀತಿ ಶಿಕ್ಷಣ ಸಿಗುತ್ತದೆ, ಯಾಕೆಂದೆರೆ ನಮ್ಮಲ್ಲಿ ನೀತಿ ಶಿಕ್ಷಣ ನೀಡುವ ಶಿಕ್ಷಕರು, ಸಿಸ್ಟರ್ಗಳು ಉತ್ತಮ ನೀತಿ ಶಿಕ್ಷಣ ನೀಡುತ್ತಾರೆ, ನಮ್ಮ ಚರ್ಚಿನಲ್ಲಿ ಹೆಚ್ಚಿನ ಮಕ್ಕಳು ನೀತಿ ಶಿಕ್ಷಣಕ್ಕೆ ಹಾಜರಾಗುವುದು ತಂಬ ಸಂತೋಷದ ಸಂಗತಿ. ಇದಕ್ಕೆ ತಂದೆ ತಾಯಿಗಳು ಅಭಿನಂದನಾರ್ಹರು ಎಂದು ಶುಭ ಕೋರಿದರು. ಸಭಾ ಕಾರ್ಯ ಕ್ರಮದ ಮೊದಲು ಅವರು ಚರ್ಚಿನಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿ ಸಂದೇಶ ನೀಡಿದರು.
ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಪಾಲನಾ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ಇದ್ದು ನೀತಿ ಶಿಕ್ಷಣದಲ್ಲಿ ಸಾಧನೆ ಮಾಡಿದವರಿಗೆ ಮತ್ತು ಚರ್ಚಿನ ಪತ್ರಿಕೆಯಾದ “ರೋಜಾರಿಯುಮ್” ಏರ್ಪಡಿಸಿದ ಚಿತ್ರಕಲಾ ಸ್ಪರ್ಧೆಯ ವೀಜೆತರಿಗೆ ಬಹುಮಾನವನ್ನು ವಿತರಣೆ ಮಾಡಿದರು. ಬಹುಮಾನ ವಿತರಣಾ ಕಾರ್ಯಕ್ರಮವನ್ನು ವಿನಯಾ ಡಿಕೋಸ್ತಾ ಮತ್ತು ಸಿಲ್ವಿಯಾ ಡಿಸೋಜಾ ನಡೆಸಿಕೊಟ್ಟರು. ನೀತಿ ಶಿಕ್ಷಣದ ಬಗ್ಗೆ ವಿದ್ಯಾರ್ಥಿಗಳ ಪರವಾಗಿ ವಿಯೋನ್ನಾ ಡಿಸೋಜಾ ಮತ್ತು ಶಿಕ್ಷರ ಪರವಾಗಿ ಮಾರ್ಕೊಸ್ ಡಿಆಲ್ಮೇಡಾ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದರು.
ಮಕ್ಕಳಿಂದ ನ್ರತ್ಯ, ಪ್ರಹಸನ, ಸಂತರ ವೇಷಭೂಶಣಗಳ ಪ್ರದರ್ಶನ ಕಾರ್ಯಕ್ರಮಗಳು ನಡೆದವು. ನೀತಿ ಶಿಕ್ಷಣ ಶಿಕ್ಷರ ಸಂಚಾಲಕಿ ವೀಣಾ ಡಿಸೋಜಾ ವರದಿಯನ್ನು ವಾಚಿಸಿದರು. ವಿದ್ಯಾರ್ಥಿನಿ ಪರ್ಲ್ಸ್ ಬರೆಟ್ಟೊ ಸ್ವಾಗತಿಸಿದಳು. ಸುಮಿತ್ ಡಿಸಿಲ್ವಾ ಮತ್ತು ಕ್ರಿಷಾ ಮಹಿಮಾ ಡಿಸಿಲ್ವಾ ನಿರೂಪಿಸಿದರು. ಶಿಕ್ಷಕಿ ಮೇಲಿಷಾ ಬರೆಟ್ಟೊ ವಂದಿಸಿದರು.