ಕುಂದಾಪುರ, ಫೆ.11: ಲೂರ್ದ್ ಮಾತೆಯ ಹಬ್ಬದಂದು ಫೆಬ್ರವರಿ 11 ರಂದು ಬೆಳಿಗ್ಗೆ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಇವರ ನೇತ್ರತ್ವದಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಲಾಯಿತು. ಸಂಜೆ ಹೋಲಿ ರೋಜರಿ ದೇವಾಲಯದ ವಠಾರದಲ್ಲಿರುವ ಲೂರ್ದ್ ಮಾತೆಯ ಗ್ರೊಟ್ಟೊ ಎದುರುಗಡೆ ಲೂರ್ದ್ ಮಾತೆಯ ಹಬ್ಬದ ಪ್ರಯುಕ್ತ ಭಕ್ತಿಭಾವದ ಜಪಮಾಲ ಭಕ್ತಿಯನ್ನು ಆಚರಿಸಲಾಯಿತು.ರೋಜರಿ ಚರ್ಚಿನ ಭಕ್ತರು ಜಪಮಾಲಾ ಭಕ್ತಿಯಲ್ಲಿ ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡರು. “ರೋಜರಿ ಮಾತೆಯು ಫ್ರಾನ್ಸ್ ದೇಶದ ಲೌರ್ಡೆಸ್ ಎಂಬಲ್ಲಿ ಬರ್ನಾಡೇಟ್ ಸೌಬಿರಸ್ ಎಂಬ 14 ವರ್ಷದ ಹೆಣ್ಣು ಮಗಳಿಗೆ 1858 ರಲ್ಲಿ, 18 ಭಾರಿ ದರ್ಶನ ನೀಡಿದಳು, ನಂತರ ನೀನು ನಿಂತ ಜಾಗದಲ್ಲಿ ನಿನ್ನ ಬೆರಳುಗಳಿಂದ ಮಣ್ಣನ್ನು ಕೆದುಕು ಅಂತಾ ರೋಜರಿ ಮಾತೆ ಹೇಳಿದಾಗ, ಅದರಂತೆ ಬರ್ನಾಡೇಟ್ ಮಣ್ಣು ಕೆದಕಿದಾಗ, ಅಲ್ಲಿನ ಬೆಟ್ಟದ ಭೂಮಿಯಲ್ಲಿ ನೀರು ಪುಟಿದೇಳುತ್ತದೆ, ನಂತರ ಅಲ್ಲಿ ದೊಡ್ಡ ಕೆರೆಯಾಗುತ್ತೆ, ನಂತರ ಆ ಕೆರೆಯಲ್ಲಿ ಮಿಂದು ಎದ್ದ ರೋಗಿಗಳು ಗುಣವಾಗ ತೊಡಗಿದರು. ಈಗ ಅದು ವಿಶ್ವದ ಅತೀ ಹೆಸರುವಾಸಿಯಾದ ಪವಾಡದ ಪುಣ್ಯಕ್ಷೇತ್ರವೆಂದು ಪ್ರಸಿದ್ದಿ ಗೊಂಡಿದೆ.
ಸಂಜೆ ನೆಡೆದ ಜಪಮಾಲಾ ಭಕ್ತಿಯ ಕಾರ್ಯಕ್ರಮದಲ್ಲಿ ಕಂಡ್ಲೂರು ಇಗರ್ಜಿಯ ಧರ್ಮಗುರು ವಂ|ಕೆನ್ಯೂಟ್ ಬಾರ್ಬೊಜಾ ದೇವರ ವಾಕ್ಯವನ್ನು ಮುರಿದು “ಅಂದು ಯೇಸು ಕ್ರಿಸ್ತರ ಕಾಲದಲ್ಲಿ ಕುಶ್ಟ ರೋಗವೆಂಬುದು ಮಹಾಮಾರಿ ರೋಗವಾಗಿತ್ತು, ಆ ಕಾಲದಲ್ಲಿ ಆ ರೋಗ ಗುಣಪಡಿಸಿದ ದಾಖಲೆಯೇ ಇಲ್ಲ. ಅದನ್ನು ಯೇಸು ಕ್ರಿಸ್ತರು ತಮ್ಮ ಆಶಿರ್ವಾದದಿಂದ ಅಂಗಾಂಗಗಳನ್ನು ಕೊಳೆತು ಹೋದವರನ್ನು ಸಂಪೂರ್ಣವಾಗಿ ಗುಣಪಡಿಸಿದ್ದರು, ಈ ಕುಶ್ಟ ರೋಗ ಮಾನವನ ಅತ್ಯಂತ ಪೀಡಕ ಮಹಾರೋಗ, ಇತ್ತಿಚೆಗೆ ಕಳೆದ ಶತಮಾನದಲ್ಲಿಯಷ್ಟೇ, ಈ ರೋಗಕ್ಕೆ ಗುಣ ಪಡಿಸುವ ಓಷಧಿ ಕಂಡು ಹುಡುಕಲಾಯಿತು, ಆದರೂ ಇಂದು ಕೂಡ ಈ ರೋಗದಿಂದ ಕೈ ಕಾಲು ಬೆರಳುಗಳು ಕೊಳೆತು ಹೋದದ್ದನು ಸರಿಪಡಿಸಲಾಗುತ್ತಿಲ್ಲ. ಕುಶ್ಟ ರೋಗ ಅಂಟಿದವರಿಗೆ ರೋಗವನ್ನು ನಿಯಂತ್ರಿಸುವುಕ್ಕೆ, ಉಲ್ಬಣಗೊಳ್ಳದಂತೆ ಮಾಡಲು ಆಗುತ್ತದೆ. ಆದರೆ ಇಂದಿನ ಪರಿಸ್ಥಿತೆಯೆ ಬೇರೆ, ಸಾಮಾಜಿಕ ಅಶ್ವಸ್ಥ ಕಳೆದಕೊಂಡವರು, ಪಾಪ ಪ್ರಜ್ನೆಯಲ್ಲಿ ಬದುಕುವ ರೋಗಿಗಳು ನಮ್ಮನ್ನು ಗುಣವಾಗುವುದು ಮುಖ್ಯವಾಗಿದೆ. ಈ ಸಮಸ್ಯೆ ಪರಿಹರಿಸಲು ನಾವು ಲೂರ್ದ್ ಮಾತೆಯ ಸಹಕಾರದಿಂದ ಯೇಸು ಕ್ರಿಸ್ತರಲ್ಲಿ ನಾವು ಕೇಳಿಕೊಳ್ಳಬೇಕು, ಲೂರ್ದ ನಗರದಲ್ಲಿ ರೋಜರಿ ಮಾತೆ ದ್ರಷ್ಟಿಗೆ ಬಿದ್ದ ಲೂರ್ದ್ ನಗರವು ಇಂದು ಲೂರ್ದ್ ಮಾತೆ ಎಂದು ಪ್ರಸಿದ್ದಿ ಪಡೆದಿದ್ದಾಳೆ, ಅವಳು ಹೇಳುವ ಪ್ರಕಾರ ನಾವು ಪಾಪ ಕ್ರತ್ಯಗಳಿಂದ ದೂರವಾಗಬೇಕು, ಜಪಮಾಲೆ ಪಠಿಸಿರಿ, ಯೇಸು ಕ್ರಿಸ್ತರು ಹೇಳಿದಂತೆ ಸತ್ಯ ಮಾರ್ಗದಲ್ಲಿ ನೆಡೆದುಕೊಳ್ಳಬೇಕು” ಎಂದು ಅವರು ತಮ್ಮ ಪ್ರವಚನದಲ್ಲಿ ತಿಳಿಸಿದರು.
ಲೂರ್ದ್ ಮಾತೆಯ ಪ್ರತಿಮೆಯನ್ನು ಬಣ್ಣದ ಮೇಣದ ಬತ್ತಿಗಳ ಮೂಲಕ ಮೆರವಣಿಗೆ ಮಾಡಿ, ಭಕ್ತಾಧಿಗಳಿಗೆ ಉತ್ತಮ ಆರೋಗ್ಯ, ರೋಗ ಋಜೀನಗಳನ್ನು ಗುಣ ಆಗುವಂತೆ ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ನ ಆಶಿರ್ವದಿಸಿದರು.
ಜಪಮಾಲ ಭಕ್ತಿಯನ್ನು ಲೂರ್ದ್ ವಾಳೆಯವರು ನೇರವೆರಿಸಿದರು. ವಾಳೆಯ ಪಾಲನ ಮಂಡಳಿ ಸದಸ್ಯೆ ಶಾಂತಿ ಬರೆಟ್ಟೊ ನಿರೂಪಣೆ ಮಾಡಿದರು, ಪಾಲನ ಮಂಡಳಿ ಸದಸ್ಯ ಎಲ್.ಜೆ. ಫೆರ್ನಾಂಡಿಸ್ ವಂದಿಸಿದರು.