

ಕುಂದಾಪುರ,ಜ.21 ಕೊಟೇಶ್ವರ ಕಟ್ಕರೆಯ ಬಾಲ ಯೇಸುವಿನ ಕಾರ್ಮೆಲ್ ಮಠಾಶ್ರಮದಲ್ಲಿ ಬಾಲಾಯೇಸುವಿನ ವಾರ್ಷಿಕ ಮಹೊತ್ಸೋವವು ಜನವರಿ 20 ಶನಿವಾರದಂದು ಸಂಜೆ ಶ್ರದ್ದಾ ಭಕ್ತಿಯ ಬಲಿದಾನ ಅರ್ಪಿಸುವ ಮೂಲಕ ಜರುಗಿತು,
ವಂ|ಧರ್ಮಗುರು ಉಡುಪಿ ಧರ್ಮ ಪ್ರಾಂತ್ಯದ ಛಾನ್ಸಲರ್ ಡಾ|ರೋಶನ್ ಡಿಸೋಜಾ ಇವರು ಉತ್ಸವದ ಪ್ರಧಾನ ಯಾಜಕರಾಗಿ ದಿವ್ಯ ಬಲಿಪೂಜೆಯನ್ನು ಅರ್ಪಿಸಿ ದಿನ ನಿತ್ಯವೂ ಸರ್ವೇಶ್ವರನ ಮುಖವನ್ನು ಹುಡುಕೋಣ” ಎಂಬ ಧ್ಯೇಯವಾಕ್ಯವನ್ನು ಓತ್ತಿ ಹೇಳಿದರು. ಸರ್ವೇಶ್ವರನು ನಮ್ಮ ಪ್ರಾರ್ಥನೆಗಳಿಗೆ ಕಿವಿ ಕೊಟ್ಟಿದ್ದಾನೆ. ನಾವು “ನನ್ನ ಜೀವವು ಸರ್ವೇಶ್ವರನಿಗಾಗಿ ಸ್ಥುತಿಗಾಯನ ಮಾಡುತ್ತಿದೆ, ಏಕೆಂದರೆ ನನ್ನ ಜೀವನದಲ್ಲಿ ಅದ್ಬುತ ಕಾರ್ಯಗಳನ್ನು ಮಾಡಿದೆ” ಯೇಸು ಕ್ರಿಸ್ತರ ಮಾತೆ ಮೇರಿ ಹೇಳಿದಂತೆ ನಾವೂ ಸರ್ವೇಶ್ವರ ಸ್ಥುತಿಗಾಯನ ಮಡುವ’ ಎಂದು ಹೇಳುತ್ತಾ “ನಾವು ಈ ಪ್ರಪಂಚದಲ್ಲಿ ಜೀವಿಸುವಾಗ ನಮಗೆ ಕಶ್ಟ ಕಾರ್ಪಣ್ಯಗಳು, ರೋಗ ರೂಜಿನಗಳು ಬರುತ್ತವೆ, ಏಷ್ಟು ಐಶ್ವರ್ಯ ಇದ್ದರೂ ಕೆಲವೊಂದು ಸಲ ಪ್ರಯೋಜನ ಆಗುವುದಿಲ್ಲ, ಅದು ದೇವನಿಗೆ ಮಾತ್ರ ಗುಣಪಡಿಸಲು ಸಾಧ್ಯ. ಆತನು ಎಲ್ಲಾ ಸಮಸ್ಯೆಗಳಿಗೆ ಪರಿಹಾರ, ಅದಕ್ಕಾಗಿ ನಾವು ದೇವರನ್ನು ಹುಡುಕಬೇಕು. ದೇವರು ನಮಗೆ ಶಾಂತಿ ಸಮಾಧಾನ ನೀಡುತ್ತಾನೆ. ನಾವು ದೇವರನ್ನು ಹುಡುಕತೊಡಗಿದರೆ ಆತನು ನಮ್ಮನ್ನು ಬಿಟ್ಟು ಹಾಕುವುದಿಲ್ಲಾ, ಯಾಕೆಂದರೆ ಆತ ನಮ್ಮನ್ನು ಬಹಳ ಪ್ರೀತಿಸುತ್ತಾನೆ, ನಮ್ಮ ದೇವರು ಪ್ರೀತಿಸುವ ದೇವರು” ಎಂದು ಸಂದೇಶ ನೀಡಿದರು.
ಈ ಉತ್ಸವದ ತಯಾರಿಗಾಗಿ ಆಶ್ರಮದಲ್ಲಿ 3 ದಿನಗಳ ಧ್ಯಾನ ಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ಈ ಧ್ಯಾನ ಕೂಟವನ್ನು ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಗುರು ವಂ|ಪಿಯುಸ್ ಡಿಸೋಜಾ, ಸಹೋದರ ಮುಂಬಯಿಯ ಬೆಂಡ್ರಾದ ಪ್ರಕಾಶ್ ಡಿಸೋಜಾ ನೆಡೆಸಿಕೊಟ್ಟರು. ಕಾರ್ಮೆಲ್ ಸಂಸ್ಥೆಯ ಸಲಹಗಾರರಾದ ವಂ|ಧರ್ಮಗುರು ಆರ್ಚಿಬಾಲ್ಡ್ ಗೊನ್ಸಾಲ್ವಿಸ್ ಮತ್ತೋರ್ವ ಸಲಹೆಗಾರರಾದ ವಂ|ಧರ್ಮಗುರು ಆಲ್ಫೋನ್ಸ್ ಬ್ರಿಟ್ಟೊ ಕಟ್ಕೆರೆ ಮಠಾಶ್ರಮದ ಕಾರ್ಮೆಲ್ ಸಂಸ್ಥೆಯ ವಂ|ಧರ್ಮಗುರು ಜ್ಯೋ ತಾವ್ರೊ, ವಂ|ಧರ್ಮಗುರು ಜೊಸ್ಸಿ ಡಿ ಸೋಜಾ, ವಂ|ಧರ್ಮಗುರು ಜೋನ್ ಸಿಕ್ವೇರಾ, ಉಜ್ವಾಡ್ ಕೊಂಕಣಿ ಪತ್ರದ ಸಂಪಾದಕರಾದ ವಂ|ಕಾರ್ಮೆಲ್ ಧರ್ಮಗುರು ಆಲ್ವಿನ್ ಸಿಕ್ವೇರಾ, ಅತಿಥಿ ಧರ್ಮಗುರುಗಳಾದ ಕಾರ್ಮೆಲ್ ಸಂಸ್ಥೆಯ ಹಲವಾರು ಧರ್ಮಗುರುಗಳು, ಕುಂದಾಪುರದ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ, ಕೆರೆಕಟ್ಟೆ ಸಂತ ಅಂತೋನಿ ಆಶ್ರಮದ ರೆಕ್ಟರ್ ವಂ|ಸುನೀಲ್ ವೇಗಸ್ ಮತ್ತು ಕುಂದಾಪುರ ವಲಯದ ಹಲವಾರು ಧರ್ಮಗುರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೆರೆಕಟ್ಟೆ ಬಾಲಾಯೇಸು ಮಠಾಶ್ರಮದ ರೆಕ್ಟರ್ ಕಾರ್ಮೆಲ್ ಧರ್ಮಗುರು ವಂ|ಪ್ರವೀಣ್ ಪಿಂಟೊ ಹಬ್ಬದ ಶುಭಾಶಯಗಳನ್ನು ಅರ್ಪಿಸಿ, ಧನ್ಯವಾದಗಳನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಭಕ್ತಾಧಿಗಳಿಗೆ ಭೋಜನದ ವ್ಯವಸ್ಥೆ ಮಾಡಲಾಗಿದ್ದು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.



















































































































