ಪಣಜಿ:ಜ.17: ಜನವರಿ 16 ರಂದು ಗೋವಾ ಪಣಜಿಯ ಸರ್ಕಾರಿ ಕನ್ನಡ ರಾಮದಾಸ್ ಪ್ರಾಥಮಿಕ ಶಾಲೆಯಲ್ಲಿ ನೈತಿಕತೆಯನ್ನು ವಿವರಿಸುವ ಇಂಗ್ಲಿಷ್ ಕಥಾ ಶಿಬಿರವನ್ನು ನಡೆಸಲಾಯಿತು, ಇದನ್ನು ಸಾಹಿತಿ ಧರ್ಮಗುರು ವಂ|ಪ್ರತಾಪ್ ನಾಯ್ಕ್SJ ನಡೆಸಿಕೊಟ್ಟರು. ಅವರು ಪಠ್ಯ ಪುಸ್ತಕದಿಂದ ಪಾಠವನ್ನು ಓದುವ ಅಭ್ಯಾಸವನ್ನು ವಿದ್ಯಾರ್ಥಿಗಳಿಗೆ ಬೆಳಸಬೇಕು ಎಂದರು.
ಗೋವಾ ಪಣಜಿಯ ಸರ್ಕಾರಿ ಕನ್ನಡ ರಾಮದಾಸ್ ಪ್ರಾಥಮಿಕ ಶಾಲೆಯು ಕನ್ನಡ ಮಾಧ್ಯಮವಾಗಿರುವುದರಿಂದ ವಿದ್ಯಾರ್ಥಿಗಳು ಇಂಗ್ಲಿಷ್ಗೆ ಒಡ್ಡಿಕೊಳ್ಳುವುದು ಬಹಳ ಕಡಿಮೆ. ಅವರು ಇಂಗ್ಲಿಷ್ನಲ್ಲಿ ಮಾತನಾಡಲು ಅಥವಾ ಓದಲು ಸಾಧ್ಯವಾಗದಿದ್ದರೂ, ಅವರು ಅರ್ಥಮಾಡಿಕೊಳ್ಳುತ್ತಾರೆ. ಪ್ರತಿ ಸೋಮವಾರ ನಾನು ಅವರಿಗೆ ಇಂಗ್ಲಿಷ್ ಕಲಿಸುತ್ತೇನೆ. ಎಂದು ವಂ|ಪ್ರತಾಪ್ ನಾಯ್ಕ್SJ ಹೇಳಿದರು.
ಈ ಮಕ್ಕಳ ವಿದ್ಯಾರ್ಥಿಗಳ ಅಭಿವ್ರದ್ದಿ ಕಾರ್ಯಕ್ಕಾಗಿ ಮತ್ತೊಬ್ಬ ಸ್ವಯಂಸೇವಕ ಶ್ರೀ ಚಂದ್ರಶೇಖರ್, ಐಟಿ ಇಂಜಿನಿಯರ್ ಜೂನ್ ತಿಂಗಳಿನಿಂದ, ಶ್ರೀಮತಿ ಕ್ರಿಸ್ಟಾಬೆಲ್ ಪಿಂಟೋ ಅವರು ಕೂಡ ಮಕ್ಕಳಿಗೆ ಸಹಾಯ ಮಾಡಲು ಸ್ವಯಂಪ್ರೇರಿತರಾಗಿದ್ದಾರೆ. ಮುಂದಿನ ವಾರದಿಂದ ಅವರು ತಂಡವನ್ನು ನಮ್ಮೊಂದಿಗೆ ಸೇರಿಕೊಳ್ಳುತ್ತಾರೆ ಎಂದು ವಂ|ಪ್ರತಾಪ್ ನಾಯ್ಕ್ SJ ತಿಳಿಸಿದರು.
ಹೆಚ್ಚಿನ ಮಕ್ಕಳು ತಾಲೀಗಾವೊದಲ್ಲಿ ವಾಸಿಸುತ್ತಿದ್ದಾರೆ. ಈ ಶಾಲೆಯಲ್ಲಿ ಕರ್ನಾಟಕದಿಂದ ಬಂದಂತಹ ಕೂಲಿ ಕಾರ್ಮಿಕರ ಮಕ್ಕಳು ಕಲಿಯುತಿದ್ದಾರೆ. ಶಾಲಾ ಬಸ್ ಇಲ್ಲದ ಕಾರಣ ಶಾಲೆಗೆ ಬರಲು ಹಾಗೂ ಮನೆಗೆ ತೆರಳಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸಾರಿಗೆ ಸೌಲಭ್ಯವಿದ್ದರೆ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಈ ಕನ್ನಡ ಮಾಧ್ಯಮ ಶಾಲೆಗೆ ಬರುತ್ತಿದ್ದರು. ನಾನು ಶ್ರೀಮಂತ ಅಥವಾ ಪ್ರಭಾವಿ ವ್ಯಕ್ತಿಯಾಗಿದ್ದರೆ, ವಿದ್ಯಾರ್ಥಿಗಳನ್ನು ಅವರ ಪ್ರದೇಶದಿಂದ ಶಾಲೆಗೆ ಕರೆತರಲು ಮತ್ತು ಶಾಲೆಯ ನಂತರ ಅವರನ್ನು ಮರಳಿ ಬಿಡಲು ನಾನು ಮಿನಿ ಬಸ್ ಅನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಿದ್ದೆ ಆದರೆ ಇದು ಅಸಾಧ್ಯವಾಗಿದೆ. ದೇವರ ಇಚ್ಛೆಯಾಗಿದ್ದರೆ, ಈ 3L ವಿದ್ಯಾರ್ಥಿಗಳಿಗೆ ಪವಾಡ ರೀತಿಯಲ್ಲಿ ಸಂಭವಿಸಲು ಬಹುದೆಂದು ವಂ|ಪ್ರತಾಪ್ ನಾಯ್ಕ್ SJ ಆಶಾವದ ವ್ಯಕ್ತಪಡಿಸುತ್ತಾರೆ. (3L ಅಂದರೆ ನಮ್ಮ ದೇಶದ ಕೊನೆಯ, ಕನಿಷ್ಠ, ಕಳೆದುಹೋದ ಬಡ ವಿದ್ಯಾರ್ಥಿಗಳು)
English story camp explaining morals at Government Kannada Ramdas Primary School, Goa Panaji
Panaji:Jan.17: An English story camp on morals was conducted at Government Kannada Ramdas Primary School, Panaji, Goa on January 16, conducted by Literary writer Rev. Pratap Naik SJ He said that the students should be taught the habit of reading the lesson from the text book.
Government Kannada Ramdas Primary School, Goa Panaji is Kannada medium so exposure of students to English is very less. Although they cannot speak or read English, they understand. Every Monday I teach them English. said Rev. Pratap Naik SJ
Another volunteer Mr. Chandrasekhar, IT Engineer since June, Mrs. Christabel Pinto has also volunteered to help the children for the development work of these children students. He will be joining the team from next week,” said Rev. Pratap Naik SJ
Most of the children live in Taleigao. Children of laborers like those from Karnataka study in this school. They are facing a lot of difficulty in coming to school and going home because there is no school bus. If there was transport facility, more students would have come to this Kannada medium school. If I were a rich or influential person, I would have hired a mini bus to bring students from their area to school and drop them back after school but this is impossible. If God wills, a miracle can happen to these 3L students, says Rev. Pratap Naik SJ (3L means last, least, lost poor students of our country)