ಕೋಲಾರ,ಜ.10: ಇಂದಿನ ಅಧುನಿಕತೆಯ ಸಂಶೋಧನೆಗಳಲ್ಲಿ ಎಷ್ಟೇ ಅವಿಷ್ಕಾರಗಳು ಕಂಡು ಬಂದರೂ ಸಹ ಟೆಕ್ನಲಾಜಿಗಳು ಬದಲಾಗದು. ಇಂದು ರೊಬೊಟಿಕ್ಸ್ ತಂತ್ರಜ್ಞಾನ ಮತ್ತು ಕೃತಕ ಬುದ್ದಿವಂತಿಕೆ ಪರಿಚಯದೊಂದಿಗೆ ಶಸ್ತ್ರ ಚಿಕಿತ್ಸೆ ವಿಧಾನವು ಬದಲಾಗುತ್ತಿದೆ ಇದರಿಂದ ರೋಗಿಗಳಿಗೆ ಮತ್ತು ಶಸ್ತ್ರ ಚಿಕಿತ್ಸಕರಿಗೆ ಹೆಚ್ಚಿನ ಅನುವುಂಟಾಗುತ್ತಿದೆ ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಸ್ಪೈನ್ ಸರ್ಜರಿ ಮತ್ತು ಕನ್ಸಲ್ಟೆಂಟ್-ರೋಬೋಟಿಕ್ ಸ್ಪೈನ್ ಸರ್ಜರಿ ವಿಭಾಗದ ಅಧ್ಯಕ್ಷರು ಹಾಗೂ ಎಚ್.ಓ.ಡಿ. ಡಾ. ಎಸ್. ವಿದ್ಯಾಧರ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಣಿಪಾಲ್ ಆಸ್ಪತ್ರೆಯ ವಿವಿಧ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥರು ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ನಿಖರತೆ, ಸುಧಾರಿತ, ದಕ್ಷತೆ ಮತ್ತು ಕನಿಷ್ಠ ಹಾನಿಯೊಂದಿಗೆ ಕ್ಲಿಷ್ಟಕರ ಶಸ್ತ್ರ ಚಿಕತ್ಸೆಗಳನ್ನು ನಿರ್ವಹಿಸಲು ಶಸ್ತ್ರ ಚಿಕಿತ್ಸಕರಿಗೆ ಪ್ರಯೋಜವಾಗುವ ಎಐ ಮತ್ತು ರೊಬೋಟಿಕ್ ತಂತ್ರಜ್ಞಾನದಲ್ಲಿನ ಗಮನಾರ್ಹ ಪ್ರಗತಿಯನ್ನು ಕಾಣಬಹುದಾಗಿದೆ ಎಂದು ಹೇಳಿದರು.
ಭಾರತದಲ್ಲಿ ರೊಬೊಟಿಕ್ ಮಾರ್ಗದರ್ಶನದ ಶಸ್ತ್ರ ಚಿಕಿತ್ಸೆಗಳು ಶೇ 99.99 ರಷ್ಟು ಯಶಸ್ವಿಯಾಗಿರುವುದು. ಹಿಂದಿನ ಸಂಪ್ರಾದಾಯಿಕ ವಿಧಾನಗಳಿಗೆ ಹೋಲಿಸಿದರೆ ಅಪಾಯದ ಪ್ರಮಾಣವು ಕಡಿಮೆ, ಶಸ್ತ್ರ ಚಿಕಿತ್ಸೆ ಸಮಯವು ಕಡಿಮೆ ಹಾಗೂ ನಿಖರತೆ ಇದೆ ಸುದೀರ್ಘ ಕಾಲಾವಧಿಯವರೆಗೆ ಸಮಸ್ಯೆ ಕಂಡು ಬರುವುದಿಲ್ಲ, ಯಾವೂದೇ ಅನಾಹುತಗಳಿಗೆ ಅವಕಾಶ ಇಲ್ಲದಂತೆ ಅವಶ್ಯಕತೆ ತಕ್ಕಷ್ಟು ಮಾತ್ರ ಕಾರ್ಯ ನಿರ್ವಹಿಸಲು ರೊಬೊಟಿಕ್ ಅನುವು ಮಾಡಿ ಕೊಡಲಾಗುವುದು ಎಂದರು.
ಪ್ರಶ್ನೆಯೊಂದಕ್ಕೆ ವೈದ್ಯರುಗಳಿಗೆ ಯಾವೂದೇ ಸಂಶಕ್ಕೆ ಅವಕಾಶ ಇಲ್ಲದಂತೆ ಮಾರ್ಗದರ್ಶನವನ್ನು ರೊಬೊಟಿಕ್ ನೀಡುತ್ತದೆ. ಸ್ಕ್ರೋ ಅಳವಡಿಸುವಿಕೆ, ಹೆಚ್ಚು ರಕ್ತಸ್ರಾವವಾಗದಂತೆ, ಹೆಚ್ಚು ನೋವಿಲ್ಲದಂತೆ, ಕಡಿಮೆ ಅವಧಿಯಲ್ಲಿ ಶಸ್ತ್ರ ಚಿಕಿತ್ಸೆಯನ್ನು ದೋಷ ಮುಕ್ತವಾಗಿ ಪೂರ್ಣಗೊಳಿಸಲು ಸಲಹೆಗಳನ್ನು ಪಡೆಯಬಹುದಾಗಿದೆ. ಇದರ ವೆಚ್ಚ ಸಾಮಾನ್ಯವಾಗಿ 50 ಸಾವಿರ ರೂಗಳಿಂದ 1.5 ಲಕ್ಷದವರೆಗೆ ಇರುತ್ತದೆ ಎಂದು ತಿಳಿಸಿದರು.
ರೊಬೊಟಿಕ್ ಮಾರ್ಗದರ್ಶನ ಬಳಕೆಯ ಮೂಲಕ ಸ್ಕೋಲಿಯೋಸಿಸ್ ಕರೆಕ್ಷನ್ಗಳು ಬೆನ್ನಮೊಳೆಯ ಪ್ಲಾಸ್ಟಿಗಳು, ಕೈಪೋಪ್ಲಾಸ್ಟಿಗಳು, ಸರ್ವಿಕಲ್ ಕಾರ್ಪೆಕ್ಟೊಮಿಗಳು ಮತ್ತು ಸರ್ವಿಕಲ್ ಪೆಡಿಕ್ಯೊಲ್ ಸ್ಕ್ರೋ ಫಿಕ್ಸೆಷನ್ಗಳ ತರಹದ ವಿವಿಧ ಸಂದರ್ಭಗಳಲ್ಲಿ ನಾವು ರೊಬೊಟಿಕ್ ನೆರವಿನಿಂದ ನಿಖರತೆಯನ್ನು ಸಾಧಿಸಿ ಸುರಕ್ಷತೆಯನ್ನು ಪಡೆದಿರುವುದಾಗಿ ವಿವರಿಸಿದರು.
ಆರ್ಥೋಪೆಡಿಕ್ಸ್ ಮತ್ತು ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ ಸರ್ಜರಿ ವಿಭಾಗದ ಹಿರಿಯ ತಜ್ಞ ಡಾ. ಸುನಿಲ್ ಜಿ.ಕಿಣಿ ಮಾತನಾಡಿ, ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ಗಳ ಆರೈಕೆ ರೋಗಿಗಳಿಗೆ ಹಲವಾರ ಪ್ರಯೋಜನಗಳಿವೆ ಶಸ್ತ್ರ ಚಿಕಿತ್ಸೆ ನಂತರ ನೋವು ಗುಣಮುಖವಾಗಲಿದೆ. ತೊಡಕು ಅಪಾಯಗಳು ಕಡಿಮೆಯಾಗಿ ರೋಗಿಗಳು ದೀರ್ಘವದಿಯವರೆಗೆ ಆರೋಗ್ಯದ ಪ್ರಯೋಜನಗಳನ್ನು ಪಡೆಯಬಹುದಾಗಿದೆ ರೋಗಿಯು ಚೇತರಿಸಿಕೊಳ್ಳಲು ಅನುವುಂಟಾಗುವುದು ಎಂದ ಅವರು ಮಣಿಪಾಲ್ ಆಸ್ಪತ್ರೆಯಲ್ಲಿರುವ ಮೈಕೋ ರೋಬೋಟ್ ಹೊಂದಿದ್ದು ಇದರಿಂದ ಮೊಣಕಾಲು ಮತ್ತು ಸೊಂಟದ ಬದಲಿಗಳನ್ನು ಅತ್ಯಂತ ನಿಖರತೆಯೊಂದಿಗೆ ನಿರ್ವಹಿಸಲು ನೆರವುಂಟಾಗುವುದು ಎಂದರು.
ರೋಬೋಟಿಕ್ ವ್ಯವಸ್ಥೆಯಿಂದ ರೋಗಿಗಳಿಗೆ ನೈಸರ್ಗಿಕ ಜಾಯಿಂಟ್ ಚಲನೆಯನ್ನು ಪರಿಗಣಿಸುತ್ತದೆ ಮತ್ತು ಅಸ್ಥಿರಜ್ಮುಗಳು ಮತ್ತು ಮೃದು ಅಂಗಾಂಶಗಳ ಮೇಲಿನ ಒತ್ತಡಗಳನ್ನು ಕಡಿಮೆ ಮಾಡುತ್ತದೆ ಶಸ್ತ್ರ ಚಿಕಿತ್ಸೆಯ ಸಂದರ್ಭಗಳಲ್ಲಿ ರೋಗಿಗಳಿಗೆ ಅನುವುಂಟಾಗುವಂತ ಮಾರ್ಗದರ್ಶನಗಳಿಗೆ ಆದ್ಯತೆ ನೀಡುತ್ತದೆ ಎಂದು ಹೇಳಿದರು.
ಸರ್ಜಿಕಲ್ ಆಂಕೋಲಾಜಿ ಮತ್ತು ರೋಬೋಟಿಕ್ ಸರ್ಜರಿ ಕನ್ಸಲ್ವೆಂಟ್ ಡಾ. ಹೇಮಂತ್ ಜಿ.ಎನ್ ಮಾತನಾಡಿ, ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಯಲ್ಲಿ ರೊಬೋಟಿಕ್ ಬಹುಪಾತ್ರದ ನೆರವನ್ನು ಪಡೆಯಬಹುದಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ರೊಬೋಟಿಕ್ ಸಹಾಯದಿಂದ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಯು ಗಮನಾರ್ಹ ಬದಲಾವಣೆಗಳನ್ನು ಕಾಣಬಹುದಾಗಿದೆ. ಈ ಹಿಂದೆ ಕ್ಯಾನ್ಸರ್ ಶಸ್ತ್ರಚಿಕ್ಸಿತ್ಸೆಯು ದೊಡ್ಡ ಗಾಯದ ಗುರುತುಗಳು, ದೀರ್ಘಕಾಲದ ಆಸ್ಪತ್ರೆಯಲ್ಲಿ ಚಿಕ್ಸಿತ್ಸೆ ಪಡೆಯ ಬೇಕಾಗಿತ್ತು, ರೋಗಿಗಳಲ್ಲಿ ಚೇತರಿಕೆಯು ಅಪರೂಪವಾಗಿದ್ದು ಭಯವುಂಟು ಮಾಡುವ ದಿನಗಳಾಗಿತ್ತು, ಅದರೆ ಇವುಗಳನ್ನು ರೋಬೋಟಿಕ್ ಮಾರ್ಗದರ್ಶನದಲ್ಲಿ ವಿವಿಧ ಕ್ಲಿನಿಕಲ್ ಪ್ರಯೋಗಳ ಮೂಲಕ ಸಂಪ್ರಾದಯಿಕ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಿಂತ ಸುಧಾರಿತ,ಗುಣಮಟ್ಟದ, ತೃಪ್ತಿಕರವಾದ ಶಸ್ತ್ರಚಿಕಿತ್ಸೆಯನ್ನು ರೊಬೋಟಿಕ್ ನೆರವಿನಿಂದ ಪಡೆಯ ಬಹುದಾಗಿದೆ ಎಂದು ಹೇಳಿದರು.
ಕ್ಯಾನ್ಸರ್ನಲ್ಲಿ ಹಲವಾರು ವಿಧಗಳಿವೆ, 3ನೇ ಹಂತದವರೆಗೆ ಚಿಕಿತ್ಸೆಯನ್ನು ರೊಬೋಟಿಕ್ ನೆರವಿನಿಂದ ನೀಡಲು ಸಾಧ್ಯ, ಹೃದಯ ಶಸ್ತ್ರ ಚಿಕಿತ್ಸೆಗಳಲ್ಲೂ ಇತ್ತೀಚೆಗೆ ರೋಬೋಟಿಕ್ ನೆರವು ಪಡೆಯಲಾಗುತ್ತಿದೆ. ಹೊಟ್ಟೆ, ಕತ್ತು ಮುಂತಾದ ಶಸ್ತ್ರ ಚಿಕಿತ್ಸೆಗಳಲ್ಲಿ ರೊಬೋಟಿಕ್ ಪಾತ್ರವನ್ನು ಪ್ರಧಾನವನ್ನಾಗಿಸಿ ಕೊಂಡಲ್ಲಿ ಯಾವೂದೇ ಸಮಸ್ಯೆಗಳಿದ್ದರೂ ಬಗೆಹರಿಸಬಹುದಾದ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಪ್ರಶ್ನೆಯೊಂದಕ್ಕೆ ನಿಸ್ಸಂದೇಹವಾಗಿ ಹೇಳುವುದಾದರೆ ಕೃತಕ ಬುದ್ದಿಮತ್ತೆಯ ಕ್ಷೇತ್ರದಲ್ಲಿ ತ್ವರಿತ ಪ್ರಗತಿ ಮತ್ತು ಆರೋಗ್ಯ ರಕ್ಷಣೆಯಲ್ಲಿ ವರ್ಧಿತ ಬೆಳವಣಿಗೆಯಿಂದಾಗಿ ಮುಂದಿನ ದಿನಗಳಲ್ಲಿ ಸಂಕೀರ್ಣ ಶಸ್ತ್ರಚಿಕಿತ್ಸಾ ಪರಿಸ್ಥಿತಿಗಳನ್ನು ನಿರ್ವಹಿಸಲು ರೋಬೋಟಿಕ್ ಶಸ್ತ್ರಚಿಕಿತ್ಸೆಯು ಪ್ರಾಥಮಿಕ ಅಧ್ಯತೆಯಾಗಲಿದೆ ಎಂದು ಪ್ರತಿಪಾದಿಸಿದರು.
ಇದೇ ಸಂದರ್ಭದಲ್ಲಿ ಪ್ರಾತ್ಯಕ್ಷತೆಯೊಂದಿಗೆ ರೋಬೋಟಿಕ್ ತಂತ್ರಜ್ಞಾನದ ವಿಧಾನಗಳನ್ನು ಪ್ರದರ್ಶಿಸಲಾಯಿತು.