ಶ್ರೀನಿವಾಸಪುರ: ದೇಶದ ಎಲ್ಲಾ ಬಡವರಿಗೆ, ಮಹಿಳೆಯರಿಗೆ, ರೈತರಿಗೆ, ಕಾರ್ಮಿಕರಿಗೆ ಮತ್ತು ಯುವ ಸಮುದಾಯದವರಿಗೆ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳು ಅನುಕೂಲಗಳನ್ನು ಅವಕಾಶಗಳನ್ನು ತಲುಪಿಸುವುದೇ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಉದ್ದೇಶ ಎಂದ ಸಂಸದ ಎಸ್. ಮುನಿಸ್ವಾಮಿ.
ತಾಲ್ಲೂಕಿನ ದಳಸನೂರು, ಮಾಸ್ತೇನಹಳ್ಳಿ ಪಂಚಾಯಿತಿಗಳಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಅಂಚೆ ಇಲಾಖೆ ಗ್ರಾಮೀಣ ಬ್ಯಾಂಕ್ ಹಾಗು ವಿವಿಧÀ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಮುನಿಸ್ವಾಮಿ ಕೇಂದ್ರ ಸರ್ಕಾರ ಗ್ರಾಮೀಣ ಜನತೆ ಅಭಿವೃದ್ದಿ ಹೊಂದಬೇಕು ಎಂಬ ಉದ್ದೇಶದಿಂದ ನರೇಂದ್ರ ಮೋದಿ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದು ರೈತರ ಎಲ್ಲಾ ಸಮುದಾಯದವರ ಮಹಿಳೆಯರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಉಪಯೋಗಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ ಆಯುಷ್ಮಾನ್ ಭಾರತ್, ಕಿಸಾನ್ ಸಮ್ಮಾನ್ ಯೋಜನೆ, ಕೋವಿಡ್ ಲಸಿಕೆ, ಪಡಿತರ ಆಹಾರದಾನ್ಯ, ಉಜ್ವಲಯೋಜನೆ, ಫಸಲ್ ಬೀಮಾಯೋಜನೆ, ವಿಶ್ವಕರ್ಮ, ಇನ್ನೂ ಹಲವು ಯೋಜನೆಗಳು ಸೇರಿದಂತೆ 10 ವರ್ಷಗಳಲ್ಲಿ ಮೋದಿಯವರು ಜಾರಿಗೆ ತಂದ ಕಾರ್ಯಕ್ರಮಗಳಾಗಿದೆ ಎಂದರು.
ಕೇಂದ್ರ ಸರ್ಕಾರ ಜಾರಿಮಾಡಿರುವ ಯೋಜನೆಗಳು ದೇಶದ ಎಲ್ಲಾ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರನ್ನೂ ಒಳಗೊಳ್ಳುವ ಯೋಜನೆಗಳಾಗಿದ್ದು, ಎಲ್ಲರಿಗೂ ತಲುಪಿಸುವ ಮೂಲಕ ಅವರಲ್ಲಿ ಆರ್ಥಿಕ ಬಲ ತುಂಬಲಿದೆ, ಮೋದಿ ಗ್ಯಾರಂಟಿ ಹೆಸರಿನಲ್ಲಿ ವಿಕಸಿತ ಬಾರತ ಸಂಕಲ್ಪಯಾತ್ರೆ ಆರಂಭವಾಗಿದ್ದು ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸುವುದು ಈ ಯಾತ್ರೆಯ ಮುಖ್ಯ ಉದ್ದೇಶವಾಗಿದೆ, ಈವರೆಗೂ ಕೇಂದ್ರದ ಯೋಜನೆಗಳು ತಲುಪದೇ ಇರುವವರಿಗೆ ತಲುಪಿಸುವುದೇ ನಮ್ಮ ಉದ್ದೇಶ,
ಕೋಲಾರ ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ ಎಂದೂ ಕಾಣದಂತಹ ಅಭಿವೃದ್ದಿ ಕಾರ್ಯಕ್ರಮಗಳು ನನ್ನ ಅವದಿಯಲ್ಲಿ ಆಗಿದೆ ಎಂದ ಮುನಿಸ್ವಾಮಿ.
ಈ ಲೋಕಸಭಾ ಕ್ಷೇತ್ರದ ಅಭಿವೃದ್ದಿಗೆ ನಾನು ಸಂಸದನಾಗಿ ಆಯ್ಕೆ ಆದಮೇಲೆ ಸಾವಿರಾರು ಕೋಟಿ ರೂಗಳ ಅನುದಾನಗಳನ್ನು ತಂದು ಅಭಿವೃದ್ದಿ ಪಡಿಸಿದ್ದೇನೆ 176 ಕಿ.ಮೀಟರ್ ಗ್ರಾಮೀಣ ರಸ್ತೆಗಳು, 2 ಲಕ್ಷ ಶೌಚಾಲಯಗಳು, 15 ನೇ ಹಣಕಾಸು ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚು ಅನುದಾನ, ಚನೈ ಕಾರಿಡಾರ್ ಯೋಜನೆಗೆ 380 ಕೋಟಿ ಜಲಜೀವನ್ ಮಿಷನ್ ಯೋಜನೆಗೆ 1880 ಕೋಟಿ, ಅಮೃತ್ ಸರೋವರ ಯೋಜನೆ ಅಡಿಯಲ್ಲಿ ಜಿಲ್ಲೆಯ ಕೆರೆಗಳ ಅಭಿವೃದ್ದಿಗೆ 1 ಕೋಟಿ 80 ಲಕ್ಷ, ಶ್ರೀನಿವಾಸಪುರ ಪಟ್ಟಣ ಸುತ್ತಾ ರಿಂಗ್ ರಸ್ಥೆಗೆ 10 ಕೋಟಿ ಹೀಗೆ ಹತ್ತು ಹಲವು ಯೋಜನೆಗಳು ತರುವ ಮುಖಾಂತರ ಈ ಜಿಲ್ಲೆಗಾಗಿ ಶ್ರಮಿಸಿದ್ದೇನೆ ಮತ್ತಷ್ಟು ಅಭಿವೃದ್ದಿಯಾಗಲು ದೇಶದಲ್ಲಿ ಮತ್ತೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದರು.
ಇದೇ ಕಾರ್ಯಕ್ರಮದಲ್ಲಿ ವಿವಿದ ಇಲಾಖೆ ಅಧಿಕಾರಿಗಳು ಕೇಂದ್ರ ಸರ್ಕಾರದ ಯೋಜನೆಗಳನ್ನು ಸಂಪೂರ್ಣವಾಗಿ ಜನರಿಗೆ ತಿಳಿಸಿದರು.
ಈ ಸಮಯದಲ್ಲಿ ಬಿಜೆಪಿ ಜಿಲ್ಲಾದ್ಯಕ್ಷ ಡಾ|| ವೇಣುಗೋಪಾಲ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುದೀರ್, ಐ.ಎ.ಎಸ್ ಅಧಿಕಾರಿ ಸಮೀರ್ ಶುಕ್ಲ, ಗ್ರಾಮ ಪಂಚಾಯಿತಿ ಅದ್ಯಕ್ಷ ಶ್ರೀನಿವಾಸ, ಉಪಾದ್ಯಕ್ಷ ಉಮಾದೇವಿ, ಪಿಡಿಓ ಸಿ.ಎಲ್ ಚಿನ್ನಪ್ಪ, ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ರಾಮಚಂದ್ರ, ಮುಖಂಡರಾದ ರೋಣೂರು ಚಂದ್ರ ಶೇಖರ್, ವಕೀಲ ಬಂಗವಾದಿ ನಾಗರಾಜ್, ಪಾಳ್ಯ ಗೋಪಾಲರೆಡ್ಡಿ, ಮಾಸ್ತೇನ ಹಳ್ಳಿ ರಾಜಣ್ಣ, ಕಾಡುದೇವಂಡಹಳ್ಳಿ ನಾಗೇಶ್, ಬಿಸನಹಳ್ಳಿ ಬೈಚೇಗೌಡ, ಲP್ಪ್ಷ್ಮಣ್ಗೌಡ, ಅಪ್ಪಿ ನಾರಾಯಣಸ್ವಾಮಿ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಆರ್ಥಿಕ ಸಾಕ್ಷರತಾ ಕೇಂದ್ರದ ಸಂಯೋಜಕ ಜಿ.ವೆಂಕಟೇಶ್, ಪಿ. ರಾಮಚಂದ್ರ ಇನ್ನೂ ಹಲವರು ಉಪಸ್ಥಿತರಿದ್ದರು.
ಸುದ್ದಿ- 2
ಶ್ರೀನಿವಾಸಪುರ: ಗ್ರಾಮ ಸಭೆಗಳಿಂದ ಜನರ ಸಮಸ್ಯೆಗೆ ಪರಿಹಾರ ಸಿಗುತ್ತದೆ ಸಾರ್ವಜನಿಕರು ಸದುಪಯೋಗ ಪಡಿಸಿಕೊಂಡು ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಹೊದಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲರೆಡ್ಡಿ ತಿಳಿಸಿದರು.
ತಾಲ್ಲೂಕಿನ ಹೊದಲಿ ಗ್ರಾಮ ಪಂಚಾಯಿತಿಯ ಅವರಣದಲ್ಲಿ ನಡೆದ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡಿಕೊಂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಹಳ್ಳಿಗಳ ಅಭಿವೃದ್ದಿಯನ್ನು ಪಕ್ಷಾತೀತವಾಗಿ ಮಾಡಿಕೊಂಡು ಬರುತ್ತಿದ್ದೇವೆ ಎಂದರು.
ಗ್ರಾಮ ಸಭೆಯಲ್ಲಿ ವಿವಿದ ಸಮಸ್ಯಗಳು ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗ್ರಾಮಗಳ ಶ್ರಯಾಭಿವೃದ್ದಿಗಾಗಿ ಅಗತ್ಯವಿರುವ ಕಾರ್ಯಗಳು ಕುರಿತು ಚೆರ್ಚಿಸಲಾಯಿತು. ನರೇಗಾ ಕ್ರಿಯಾಯೋಜನೆ, ಸಮಗ್ರ ಸಹಭಾಗಿತ್ವ 2024-25ನೇ ಸಾಲಿನ ಕ್ರಿಯಾಯೋಜನೆ, ವಸತಿ ಯೋಜನೆ, ಸ್ವಚ್ಚಭಾರತ್ ಮಿಷನ್, ನರೇಗಾ ಯೋಜನೆಗಳು ಸೇರಿದಂತೆ ಇತರೆ ವಿಷಯಗಳು ಕುರಿತು ಚೆರ್ಚಿಸಲಾಯಿತು.
ನೋಡಲ್ ಅಧಿಕಾರಿ ಹಾಗೂ ಸಿಡಿಪಿಓ ಇಲಾಖೆಯ ನವೀನ್ ಮಾತನಾಡಿ ಗ್ರಾಮಾಂತರ ಜನರು ನರೇಗಾ ಯೋಜನೆಯಡಿಯಲ್ಲಿ ಉದ್ಯೋಗವನ್ನು ಪಡೆದು ನಗರಗಳಿಗೆ ವಲಸೆ ಹೋಗುವದನ್ನು ತಪ್ಪಿಸಬಹುದು. ಉದ್ಯೋಗ ಖಾತರಿ ಮೂಲಕ ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡುವ ಮಹತ್ವದ ಯೋಜನೆಯಾಗಿದೆ. ಗ್ರಾಮಾಂತರ ಜನತೆ ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡುತ್ತಾ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಯಾರಿಗೆ ಹಣ ಬಂದಿಲ್ಲವೋ ಅಂತಹವರು ನಮ್ಮ ಇಲಾಖೆಗೆ ಬಂದು ಸಂಪರ್ಕಿಸಿ, ತಮ್ಮ ಖಾತೆ ಇರುವ ಬ್ಯಾಂಕ್ ಗಳಲ್ಲಿ ಕೆ.ವೈ.ಸಿ ಯನ್ನು ಕಡ್ಡಾಯವಾಗಿ ಮಾಡಿಸಿ ಎಂದರು.
ಪಿಡಿಓ ಕೆ.ಪಿ. ಶ್ರೀನಿವಾಸರೆಡ್ಡಿ ಮಾತನಾಡಿ ಹಳ್ಳಿಗಳ ಅಭಿವೃದ್ದಿಗೆ ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಇದರ ಅಡಿಯಲ್ಲಿ ಬೀದಿ ದೀಪಗಳು, ಶೌಚಾಲಯ, ಪೌಷ್ಠಿಕ ಕೈತೋಟ, ಸ್ಮಶಾನಾಭಿವೃದ್ದಿ, ಕೆರೆಕುಂಟೆ ಅಭಿವೃದ್ದಿ, ಕುರಿಶೆಡ್, ಧನದ ಶೆಡ್, ನೀರಿನ ತೊಟ್ಟಿ, ನಮ್ಮ ಹೊಲ ನಮ್ಮದಾರಿ ಮುಂತಾದ ಕಾಮಗಾರಿಗಳನ್ನು ಮಾಡಿಕೊಳ್ಳಬಹುದು ಮುಖ್ಯವಾಗಿ ಬೂದಿನೀರು ಹಿಂಗುವ ಗುಂಡಿಯನ್ನು ಮಾಡುವ ಯೋಜನೆ ಜಾರಿಯಲ್ಲಿದ್ದು ಇದಕ್ಕೆ 1.20 ಸಾವಿರ ಅನುದಾನವನ್ನು ಒದಗಿಸಲಾಗುವುದು ಯಾರಾದರೂ ಮಾಡಬೇಕಾದಲ್ಲಿ ಪಟ್ಟಿಯಲ್ಲಿ ಸೇರಿಸಿ ಹಾಗು ಬಿಟ್ಟಿರುವ ಕಾಮಗಾರಿಗಳನ್ನು ಎರಡು ದಿನಗಳ ಒಳಗೆ ಸೇರಿಸಿ ಎಂದರು.
ರೋಣೂರು ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ರಘುಮಾತನಾಡಿ ರೈತರಿಗೆ ಅಟಲ್ ಭೂ ಯೋಜನೆ ಅಡಿಯಲ್ಲಿ ಹನಿ ನೀರಾವರಿ ಪದ್ದತಿಗೆ ಸಹಾಯಧನ ನೀಡಲಾಗುವುದು ಹಾಗೆಯೇ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ವರ್ಷಕ್ಕೆ 6 ಸಾವಿರ ರೂಗಳು ರೈತರಿಗೆ ಬರಲಿದೆ ಹಾಗೆಯೇ ಕಡ್ಡಾಯವಾಗಿ ಇಕೆವೈಸಿ ಯನ್ನು ಮಾಡಿಸಬೇಕು, ಕೃಷಿ ಇಲಾಖೆಯಿಂದ ಸಿಗುವ ಇನ್ನೂ ಅನೇಕ ಸೌಲಬ್ಯಗಳಬಗ್ಗೆ ಸಂಪೂರ್ಣವಾಗಿ ತಿಳಿಸಿದರು.
ಈ ಸಮಯದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅದ್ಯಕ್ಷ ಶೋಭಮ್ಮ, ಸದಸ್ಯರಾದ ದೇವಲಪಲ್ಲಿ ಶ್ರೀನಿವಾಸ್, ಅಶೋಕ್, ಆಂಜಮ್ಮ, ಗೋಪಾಲಪುರ ಕಳಾವತಿ, ದಾಸರತಿಮ್ಮನಹಳ್ಳಿ ಆಂಜನೇಯರೆಡ್ಡಿ, ಮುನಿಶಾಮಿ, ಕೃಷ್ಣೇಗೌಡ, ಮುಖಂಡರಾದ ಇಮರಕುಂಟೆ ಮಂಜುನಾಥ್ ರೆಡ್ಡಿ, ಕರ ವಸೂಲಿಗಾರ ಅಶೋಕ್, ಗ್ರಂಥಾಲಯ ಮೇಲ್ವಿಚಾರಕ ನಾರಾಯಣಸ್ವಾಮಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತಿರಿದ್ದರು.