ಶ್ರೀನಿವಾಸಪುರ : ಈಗಾಗಲೇ ಕೇಂದ್ರ ಸರ್ಕಾರವು ಆಯುಷ್ಮಾನ್ ಯೋಜನೆ, ಭಾರತ್ ಮುದ್ರಾಯೋಜನೆ, ಕಿಸಾನ್ ಸನ್ಮಾನ್ ಯೋಜನೆ, ಪ್ರಧಾನ ಮಂತ್ರಿ ಅವಾಸ್ ಯೋಜನೆ, ಉಜ್ವಲ್ ಯೋಜನೆ , ಸ್ವಚ್ಚ ಭಾರತ್ ಮಿಷನ್ ಯೋಜನೆಗಳನ್ನು ಜಾರಿಗೆ ತಂದಿದ್ದು, ಬಹುತೇಕರು ಇದರ ಸದ್ಭಳಕೆ ಮಾಡಿಕೊಳ್ಳುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯು ಬಹಳಷ್ಟು ಜನರಿಗೆ ಸದುಪಯೋಗ ಪಡಿಸಿಕೊಂಡು ಜೀವಗಳನ್ನು ಉಳಿಸಿಕೊಂಡಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ಮಾಹಿತಿ ನೀಡಿದರು.
ತಾಲೂಕಿನ ಚಲ್ದಿಗಾನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ಶುಕ್ರವಾರ ತಾಲೂಕು ಪಂಚಾಯಿತಿ ವತಿಯಿಂದ ನಡೆದ ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿವುದರ ಮೂಲಕ ಉದ್ಗಾಟಿಸಿ ಮಾತನಾಡಿದರು.
ಸುದ್ದಿಗಾರ ಪ್ರಶ್ನೆಗಳಿಗೆ ಉತ್ತರಿಸಿ ಇತ್ತೀಚಿಗೆ ನೂತನ ಸಂಸತ್ ಭವನದಲ್ಲಿ ಕಿಡಿಗೇಡಿಗಳು ಸಂಸತ್ ಭವನದಲ್ಲಿನ ಗ್ಯಾಲರಿ ಮೂಲಕ ಸಂಸತ್ ಭವನದ ಸಂಸದರ ಇರುವ ಜಾಗಕ್ಕೆ ಹಾರಿ ಬಂದು ಕಲರ್ ಬಾಂಬ್ನ್ನು ಹಾಕಿ ಸಂಸತ್ನ್ನು ಭಯದ ವಾತವಾರಣವನ್ನು ಸೃಷ್ಟಿ ಮಾಡಿದ್ದು, ಈ ಸಮಯದಲ್ಲಿ ನಾನು ಪ್ರತ್ಯಕ್ಷ ದರ್ಶಿಯಾಗಿದ್ದೆ. ಆರೋಪಿಗಳನ್ನು ಹಿಡಿಯಲು, ನಾನು ಹಾಗೂ ಇತರೆ ಸಂಸದರೊಂದಿಗೆ ಆರೋಪಿಯನ್ನು ಹಿಡಿಯವಲ್ಲಿ ಯಶಸ್ವಿಯಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಯಿತು ಎಂದರು.
ಈ ಹಿಂದೆ ನಿಮ್ದೆ ಸರ್ಕಾರ , ನೀವೆ ಮುಖ್ಯ ಮಂತ್ರಿಗಳು ಆಗಿದ್ದೀರಿ , ಅಂದು ವಿಧಾನ ಸೌದಕ್ಕೆ ಅಪರಿಚಿತರು ನುಗ್ಗಿ ದಾಂದಲೆ ಮಾಡಿದ್ದರು ಅಂದು ನೀವೆನು ಮಾಡುತ್ತಿದ್ದೇರಿ ? ನೀವು ಜವಾಬ್ದಾರಿ ಹೊತ್ತು ಮೊದಲು ರಾಜೀನಾಮೆ ಕೂಡಿ ಎಂದು ಸಿದ್ದರಾಮಯ್ಯರವರಿಗೆ ಟಾಂಗ್ ನೀಡುತ್ತಾ ಮೊದಲು ನೀವು ರಾಜೀನಾಮೆ ಕೊಡಿ ನಂತರ ಪ್ರತಾಪ ಸಿಂಹರವರು ಕೊಡುತ್ತಾರೆ . ಮಗುವನ್ನು ಚಿವುಟಿ, ತೊಟ್ಟಿಲು ತೂಗುವ ಕೆಲಸ ಮಾಡಬೇಡಿ , ಓಟಿನ ರಾಜಕೀಯ ಮಾಡ ಬೇಡಿ. ನಿಮ್ಮ ಬಗ್ಗೆ ನನಗೆ ತುಂಬಾ ಗೌರವವಿದೆ. ಸಂಸತ್ ಪ್ರಕರಣವನ್ನು ರಾಜಕೀಯ ಬಳಸಿಕೊಳ್ಳುವುದು ಬೇಡ ಎಂದರು.
ಇಂಡಿಯಾ ಮೈತ್ರಿಕೋಟಕ್ಕೆ ಸಂಬಂದಿಸಿದಂತೆ ಪ್ರಧಾನ ಮಂತ್ರಿ ಯಾರು ಎಂದು ಬಹಿರಂಗ ಪಡಿಸಲಿ, ಅಥವಾ ರಾಹುಲ್ಗಾಂದಿ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಸಿಸಿ ಚುನಾವಣೆಗೆ ಬರಲಿ ನೋಡಣ ಎಂದು ಟಾಂಗ್ ನೀಡಿದರು.
ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿ ಮೈಸೂರು ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರವು ಟಿಪ್ಪು ಸುಲ್ತಾನ್ ಹೆಸರಿಡುವ ಪ್ರಸ್ತಾವಣೆಗೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾ ಮಾತನಾಡಿ ಟಿಪ್ಪು ಸುಲ್ತಾನ್ ಒಬ್ಬ ಭಾರತ ದೇಶದ ಖಳ ನಾಯಕ . ಟಿಪ್ಪು ಸುಲ್ತಾನ್ ಮೈಸೂರು ಭಾಗದಲ್ಲಿ ಅನೇಕ ಹಿಂದುಗಳನ್ನು ಹಿಂಸೆ ಮಾಡಿ ಮತಾಂತರ ಮಾಡಿದ್ದು, ಹಿಂದೂಸ್ತಾನ್ ಹೆಸರಿರುವ ಬಾರತಕ್ಕೆ ಮತಾಂತರ ಮಾಡಿ ಸಾವಿರಾರು ಜನರನ್ನ ಬಲಿ ಪಡೆದವನು. ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಲು ನಮ್ಮ ವಿರೋಧವಿದೆ. ಕ್ರೂರಿಗಳು , ಕೊಲೆಕಡುಕರ ಹೆಸರಿಟ್ಟರೆ ಬಿಜೆಪಿ ಪಕ್ಷವು ಉಗ್ರಹೋರಾಟ ಮಾಡಲಿದೆ ಎಂದರು.
ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎನ್.ವೇಣುಗೋಪಾಲ್, ಇಒ ಎನ್.ಶಿವಕುಮಾರಿ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ನವೀನ್, ಶ್ರೀನಿವಾಸಪುರ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ವಿಶ್ವನಾಥರೆಡ್ಡಿ, ಗ್ರಾ.ಮ.ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷೆ ನಾಗರತ್ನಮ್ಮ ಸದಸ್ಯರಾದ ಆನಂದ್ಕುಮಾರ್, ಮುಖಂಡರಾದ ಲಕ್ಷ್ಮಣಗೌಡ , ರೋಣೂರು ಚಂದ್ರಶೇಖರ್ , ಪಾಳ್ಯ ಗೋಪಾಲರೆಡ್ಡಿ, ಸಾತಂಡಹಳ್ಳಿ ನಾಗರಾಜ್, ಲಕ್ಷ್ಮಿದೇವಿ, ನಂಜುಂಡೇಗೌಡ ಹಾಗು ಇತರರು ಇದ್ದರು.