ಪ್ರಯಾಣಿಕರ ಗಮನಕ್ಕೆ ಡಿ. 14ರಿಂದ 18 ರವರೆಗೆ 2 ಗಂಟೆಯಿಂದ ರಾತ್ರಿ 8ರ ಸಮಯದಲ್ಲಿ ಓಡಾಡುವ ಬೆಂಗಳೂರು-ಮಂಗಳೂರು ರೈಲು ಸೇರಿದಂತೆ ಕೆಲವು ರೈಲುಗಳ ಸಂಚಾರ ತಾತ್ಕಾಲಿಕವಾಗಿ ರದ್ದು

ಬೆಂಗಳೂರು: ಮಂಗಳೂರು- ಬೆಂಗಳೂರು ನಡುವೆ ಕಾರ್ಯಾಚರಿಸುತ್ತಿರುವ ರೈಲುಗಳ ಪೈಕಿ ಕೆಲವು ರೈಲುಗಳ ಸಂಚಾರವನ್ನು ಡಿಸೆಂಬರ್‌ 14 ರಿಂದ ಡಿಸೆಂಬರ್‌ 22 ರ ವರೆಗೆ ರದ್ದು ಪಡಿಸಲಾಗಿದೆ.

ಹಾಸನ ಜಂಕ್ಷನ್ ರೈಲು ನಿಲ್ದಾಣದಲ್ಲಿ ಯಾರ್ಡ್ ಮರು ನಿರ್ಮಾಣಕ್ಕೆ ಅನುಕೂಲವಾಗುವಂತೆ ಡಿ. 14ರಿಂದ 18 ರವರೆಗೆ ಇಂಟರ್ ಲಾಕಿಂಗ್ ಹಾಗೂ ಡಿ. 19 ರಿಂದ 22 ರವರೆಗೆ ಪುನರ್ ನಿರ್ಮಾಣ ಕಾಮಗಾರಿಯನ್ನು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಹಮ್ಮಿಕೊಂಡಿದ್ದು, ಹಾಗಾಗಿ ಈ ಸಮಯದಲ್ಲಿ ಓಡಾಡುವ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಪ್ರಕಟನೆ ತಿಳಿಸಿದೆ. ಬೆಂಗಳೂರು-ಕಣ್ಣೂರು-ಬೆಂಗಳೂರು ಪಂಚಗಂಗಾ ಎಕ್ಸ್‌ ಪ್ರೆಸ್ ಮತ್ತು ಬೆಂಗಳೂರು-ಕಾರವಾರ-ಬೆಂಗಳೂರು ಪಂಚಗಂಗಾ ಎಕ್ಸ್‌ ಪ್ರೆಸ್ ರೈಲನ್ನು ಡಿ. 16 ರಿಂದ 20 ರ ವರೆಗೆ, ಯಶವಂತಪುರ- ಮಂಗಳೂರು ಜಂಕ್ಷನ್ ಗೋಮಟೇಶ್ವರ ತ್ರಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲನ್ನು ಡಿ.14, 17, 19 ಮತ್ತು 21 ರಂದು ರದ್ದು ಪಡಿಸಲಾಗಿದೆ. ಹಾಗೆಯೇ ಯಶವಂತಪುರ-ಕಾರವಾರ ತ್ರಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲನ್ನು ಡಿ.15, 18, 20 ಮತ್ತು 22 ರಂದು, ಯಶವಂತಪುರ- ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲನ್ನು ಡಿ.16 ರಂದು, ಮಂಗಳೂರು ಜಂಕ್ಷನ್- ಯಶವಂತಪುರ ಸಾಪ್ತಾಹಿಕ ಎಕ್ಸ್ ಪ್ರೆಸ್ಸ್ ರೈಲನ್ನು ಡಿ.17 ರಂದು ರದ್ದು ಮಾಡಲಾಗಿದೆ. ಈ ಅವಧಿಯಲ್ಲಿ ಬೆಂಗಳೂರು- ಮಂಗಳೂರು ಸಂಪರ್ಕಿಸುವ ಏಕೈಕ ರೈಲು ಸಂಖ್ಯೆ 16585/16586 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್- ಬೆಂಗಳೂರು- ಮುರುಡೇಶ್ವರ ರೈಲು ಡಿ.14 ರಿಂದ 16 ರವರೆಗೆ ಯಶವಂತಪುರ ಬೈಪಾಸ್, ನೆಲಮಂಗಲ, ಶ್ರವಣಬೆಳಗೊಳ ಮತ್ತು ಹಾಸನ ಮೂಲಕ ಬೆಂಗಳೂರು ನಗರ, ಮಂಡ್ಯ ಮತ್ತು ಮೈಸೂರು ಮೂಲಕ ಚಲಿಸಲಿದೆ. ಡಿ.17 ರಿಂದ 22 ರವರೆಗೆ ಮೈಸೂರು ಮಾರ್ಗವನ್ನು ಹೊರತುಪಡಿಸಿ ಯಶವಂತಪುರ ಬೈಪಾಸ್, ತುಮಕೂರು, ಅರಸೀಕೆರೆ ಮತ್ತು ಹಾಸನ ಮೂಲಕ ರೈಲು ಸಂಚಾರ ನಡೆಸಲಿದೆ ಎಂದು ಪ್ರಕಟನೆ ವಿವರಿಸಿದೆ.