ಕುಂದಾಪುರ,ನ.27: ಉಡುಪಿ ಧರ್ಮ ಪ್ರಾಂತ್ಯದಲ್ಲೆ ಅಂತ್ಯಂತ ಪುರಾತನವಾದ ಕುಂದಾಪುರದ “ಪವಿತ್ರ ರೋಜರಿ ಮಾತಾ” ಇಗರ್ಜಿಯಲ್ಲಿ ಕ್ರಿಸ್ತ ರಾಜನ ಹಬ್ಬದಂದು, ತೆರಾಲಿ ಹಬ್ಬದ ಅಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ನೆಡೆಯುವ “ಕೊಂಪ್ರಿ ಆಯ್ತಾರ್” ಭ್ರಾತತ್ವ ಬಾಂಧವ್ಯ ದಿನವನ್ನು “ಪ್ರಭು ಯೇಸುವಿನ ದಯೆ ನಮಗೆಲ್ಲರಿಗೂ ಪ್ರೇರಣೆ” ಎಂಬ ಧ್ಯೇಯದೊಂದಿಗೆ, ಪವಿತ್ರ ಬಲಿದಾನ ಮತ್ತು ಪರಮ ಪ್ರಸಾದದ ಆರಾಧನೆ ನ.26 ರಂದು ನೆಡೆಯಿತು.
ಪವಿತ್ರ ರೋಜರಿ ಮಾತಾ ದೇವಾಲಯಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿದ ತರುವಾಯ ಅಪಾರ ಭಕ್ತಾದಿ ಜನ ಮತ್ತು ಅನೇಕ ಧರ್ಮ ಭಗಿನಿಯರೊಡನೆ ಬೆಳೆಗಿಸಿದ ಬಣ್ಣದ ಮೇಣದ ಬತ್ತಿಗಳನ್ನು ಹಿಡಿದುಕೊಂಡು ಭಕ್ತಿ ಗಾಯನ, ಸಂಗೀತ, ಬ್ಯಾಂಡು, ಬಣ್ಣ ಬಣ್ಣದ ಕೊಡೆಗಳ ಜೊತೆ, ಗಾಯನ ಮಂಡಳಿಯೊಡನೆ ವಿದ್ಯುತ್ ದೀಪಗಳ ಅಲಕ್ರಂತದೊಂದಿಗೆ ಪರಮ ಪ್ರಸಾದದ ಪುರ ಮೆರವಣಿಗೆಯನ್ನು ಕುಂದಾಪುರದ ಮುಖ್ಯ ರಸ್ತೆಗಳಲ್ಲಿ ವೈಭವದ ಜೊತೆ ಭಕ್ತಿ ಮತ್ತು ಶಿಸ್ತಿನಿಂದ ನೆಡೆಸಲಾಯಿತು.
ನಂತರ ಸಂತ ಮೇರಿಸ್ ವಿಧ್ಯಾ ಸಂಸ್ಥೆಯ ಮೈದಾನದಲ್ಲಿ ಪರಮಪ್ರಸಾದದ ಆರಾಧನೆ ಕನ್ನಡದಲ್ಲಿ ನೆಡೆಯಿತು. ಈ ಧಾರ್ಮಿಕ ವಿಧಿಯನ್ನು ಕಂಡ್ಲೂರು ಚರ್ಚಿನ ಧರ್ಮಗುರು ವಂ|ಕೆನ್ಯೂಟ್ ಬಾರ್ಬೊಜಾ ನಡೆಸಿಕೊಟ್ಟು “ಇವತ್ತಿನ ದೇವರ ವಾಕ್ಯದಲ್ಲಿ ಹೀಗೆ ಹೇಳಿದೆ. ಹಸಿದವನಿಗೆ ಉಣ್ಣಲು ಕೊಟ್ಟರೆ, ನಿರ್ಗತಿಕನಿಗೆ ಆಶ್ರಯ ನೀಡಿದರೆ, ಬಟ್ಟೆ ಇಲ್ಲದವನಿಗೆ ಬಟ್ಟೆ ನೀಡಿದರೆ, ಬಾಯಾರಿದವರಿಗೆ ಕುಡಿಯಲು ಕೊಟ್ಟರೆ, ಇದನ್ನು ನನಗೆ, ಅಂದರೆ ದೇವರಿಗೆನೇ ಮಾಡಿದ ಹಾಗೆ. ಅದರ ಪ್ರತಿಫಲ ನಿಮಗೆ ಸ್ವರ್ಗರಾಜ್ಯದಲ್ಲಿ ಯೆಚೆಥ್ಥವಾಗಿ ಸಿಗುವುದೆಂದು” ಹೇಳಿದ್ದಾರೆ. ಹಾಗೇ ನಾವು ಸತ್ಯದಲ್ಲಿ ಬದುಕಬೇಕು, ಜೀವನವಿಡಿ ಸತ್ಯದ ಜೀವನ ನಡೆಸಬೇಕು, ಸತ್ಯತೇಯ ಜೀವನ ಅಂದರೆ ಸ್ವರ್ಗಿಯ ಸೌಭಾಗ್ಯ, ಸತ್ಯವನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ ಸೌಹಾರ್ದತೆ ವಾತವರಣ ಉಂಟಾಗುತ್ತದೆ. ಸತ್ಯವನ್ನು ಆಯ್ಕೆ ಮಾಡಿಕೊಂಡವರಿಗೆ, ನೋವು ಕಶ್ಟದ ಜೀವನ ಅದು ಒಂದು ರೀತಿಯ ದೇವರ ಆಳವಾದ ಅನುಭವದ ಸಂಭ್ರಮ. ಸತ್ಯ ನುಡಿವರಿಗೆ ಭಯವೇ ಇರುವುದಿಲ್ಲ. ಸುಳ್ಳು ಇದ್ದ ಕಡೆ ಜಗಳ, ಮೋಸ, ವಂಚನೆ ಕೊಲೆ ಹಿಂಸಾಚಾರ, ಯುದ್ದಗಳು ನಡೆಯುತ್ತವೆ, ಇವುಗಳಿಗೆಲ್ಲ ಸೋಲು ಉಂಟಾಗುತ್ತದೆ. ಸತ್ಯದಲ್ಲಿ ನಡೆಯುವರಿಗೆ ಸ್ವರ್ಗಿಯ ಜೀವನ ಲಭಿಸುವುದು. ಯೇಸು ಸ್ವಾಮಿ ಹೇಳಿದ್ದಾರೆ ಸತ್ಯಕ್ಕೆ ಸಾವಿಲ್ಲ, ನಾನೇ ಸತ್ಯ ನನ್ನನ್ನು ಹಿಂಬಾಲಿಸಿರಿ ಎಂದು, ನಾವು ಅದರಂತೆ ನಡೆಯೋಣ”ಎಂದು ಸಂದೇಶ ನೀಡಿದ ಅವರು ಪರಮ ಪ್ರಸಾದದ ಮೂಲಕ ಆಶಿರ್ವಾದವನ್ನು ನೀಡಿದರು.
ಈ ಧಾರ್ಮಿಕ ವಿಧಿಯು ಕುಂದಾಪುರ ರೋಜರಿ ಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ಅ|ವ|ಸ್ಟ್ಯಾನಿ ತಾವ್ರೊ ಮಾರ್ಗದರ್ಶನದಲ್ಲಿ ನಡೆದಿದ್ದು ಅವರು ಎಲ್ಲರನ್ನು ವಂದಿಸಿದರು. ಕಾರ್ಯಕ್ರಮಗಳ ಸಹ ಉಸ್ತುವಾರಿಯನ್ನು ವಹಿಸಿಕೊಂಡ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ, ಇವರ ಜನ್ಮದಿನದ ಪ್ರಯುಕ್ತ ಕೇಕ್ ಕತ್ತರಿಸಿ ಶುಭಾಶಯ ಕೋರಲಾಯ್ತು. ವೇದಿಕೆ ಕಾರ್ಯಕ್ರಮದ ಮಹತ್ವವನ್ನು ಭಗಿನಿ ಪ್ರೇಮಿಕಾ ತಿಳಿಸಿದರು.ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸುಪ್ರಿಯಾ, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಅಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಧರ್ಮಭಗಿನಿಯರು, ವಾಳೆಯ ಗುರಿಕಾರರು ಪಾಲನ ಮಂಡಳಿ ಸದಸ್ಯರು, ಇಗರ್ಜಿಯ ಹಲವು ಸಂಘ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಹಾಗೂ ಸಹಸ್ರಾರು ಭಕ್ತರು ಪಾಲ್ಗೊಂಡರು.