ಶ್ರೀನಿವಾಸಪುರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಏರ್ಪಡಿಸಿದದ ಸುಗ್ಗಿ ಸಂಭ್ರಮ ಹಾಗೂ ಕಾಲೇಜು ಸಂತೆ ಕಾರ್ಯಕ್ರಮವನ್ನು ಸಾಹಿತಿ ಆರ್.ಚೌಡರೆಡ್ಡಿ ಉದ್ಘಾಟಿಸಿದರು.
ವಿದ್ಯಾರ್ಥಿಗಳು ವ್ಯಾವಹಾರಿಕ ಜ್ಞಾನ ಬೆಳೆಸಿಕೊಳ್ಳಬೇಕು
ಶ್ರೀನಿವಾಸಪುರ: ಸುಗ್ಗಿ ಮತ್ತು ಸಂತೆ ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಹಾಸುಹೊಕ್ಕಾಗಿವೆ. ಸುಗ್ಗಿಯ ಹಿಗ್ಗಿನಲ್ಲಿ ಸಂತೆ ಮಾಡುವುದು ಸಂಭ್ರಮದ ಸಂಕೇತವಾಗಿದೆ ಎಂದು ಸಾಹಿತಿ ಆರ್.ಚೌಡರೆಡ್ಡಿ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಸುಗ್ಗಿ ಸಂಭ್ರಮ ಹಾಗೂ ಕಾಲೇಜು ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂತೆ ಸರ್ವ ಜನಾಂಗದ ಭಾವ ಬೆಸೆವ ಕೇಂದ್ರವಾಗಿದೆ ಎಂದು ಹೇಳಿದರು.
ಗ್ರಾಮೀಣ ಜನರ ಆರ್ಥಿಕ ಚಟುವಟಿಕೆ ಗರಿಗೆದರಲು ಸಂತೆ ಪೂರಕವಾಗಿದೆ. ಬದಲಾದ ಪರಿಸ್ಥಿತಿಯಲ್ಲೂ ಸಂತೆಯ ಮಹತ್ವ ಕಡಿಮೆಯಾಗಿಲ್ಲ. ಸಂತೆಯಲ್ಲಿ ಖರೀದಿಸುವುದು ಗ್ರಾಹಕರಿಗೆ ಒಂದು ಪರಂಪರೆಯಾಗಿ ಮುಂದುವರೆದಿದೆ. ವಿದ್ಯಾರ್ಥಿನಿಯರು ಓದಿನೊಂದಿಗೆ ವ್ಯವಹಾರ ಜ್ಞಾನ ಬೆಳೆಸಿಕೊಳ್ಳಬೇಕು. ಅದಕ್ಕೆ ಸಮೀಪದ ಸಂತೆ ಉತ್ತಮ ಅವಕಾಶ ಕಲ್ಪಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಸುಗ್ಗಿ ಹಾಗೂ ಸಂತೆಗೆ ಸಂಬAಧಿಸಿದAತೆ ಜಾನಪದ ಹಾಗೂ ಸಾಹಿತ್ಯದಲ್ಲಿ ಉಲ್ಲೇಖವಿದೆ. ಕತೆ, ಕವಿತೆ, ಒಗಟು, ಗಾದೆ ಹೀಗೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಸಂತೆಯ ಮಹತ್ವ ಬಿಂಬಿತವಾಗಿದೆ. ಆರ್ಥಿಕ ಚಟುವಟಿಕೆಗೆ ಸಂಬAಧಿಸಿದAತೆ ಪ್ರಾಥಮಿಕ ಜ್ಞಾನ ಲಭ್ಯವಾಗುವುದು ಸಂತೆಯಲ್ಲಿ ಮಾತ್ರ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಸಿ.ಆರ್.ಪ್ರಾಣೇಶ್ ಮಾತನಾಡಿ, ಸಂತೆ ಭಾರತೀಯ ಆರ್ಥಿಕತೆಯ ಮೂಲ ದ್ರವ್ಯ. ಸುಗ್ಗಿ ಹಾಗೂ ಸಂತೆಗೆ ಹಿಂದಿನಿAದಲೂ ಅವಿನಾಭಾವ ಸಂಬAಧವಿದೆ. ಕೊಡು ಕೊಳ್ಳುವ ವ್ಯವಹಾರದಲ್ಲಿ ಬುದ್ಧಿವಂತಿಕೆ ಕೆಲಸ ಮಾಡುತ್ತದೆ. ಹಾಗಾಗಿ ವಿದ್ಯಾರ್ಥಿಗಳು ವ್ಯವಹಾರ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ರತ್ನಾಕರಂ ಮಾಧವಿ ಮಾತನಾಡಿ, ಬದಲಾದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿನಿಯರು ಗಳಿಸುವ ಮಾರ್ಗ ಕಂಡುಕೊಳ್ಳಬೇಕು. ಅದಕ್ಕೆ ಅಗತ್ಯವಾದ ವ್ಯಾವಹಾರಿಕ ಜ್ಞಾನ ಪಡೆಯಬೇಕು. ಪ್ರಾಥಮಿಕ ಆರ್ಥಿಕ ಜ್ಞಾನ ಪಡೆಯಲು ಸಂತೆ ಸಹಕಾರಿ. ಸಂತೆಯಲ್ಲಿ ಸುತ್ತಾಡಿ ಖರೀದಿ ಮಾಡಬೇಕು. ಮಾರುವುದಿದ್ದರೆ ಗ್ರಾಹಕರ ವಿಶ್ವಾಸ ಗಳಿಸಿ ಮಾರಾಟ ಮಾಡಬೇಕು ಎಂದು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪಿ.ಎಸ್.ಮಂಜುಳ ಮಾತನಾಡಿ, ಸುಗ್ಗಿ ಹಾಗೂ ಸಂತೆಗೆ ಅವಿನಾಭಾವ ಸಂಬAಧವಿದೆ. ಸಮೃದ್ಧ ಸುಗ್ಗಿ ಸಂತೆ ವ್ಯವಹಾರ ಹೆಚ್ಚಳಕ್ಕೆ ಕಾರಣವಾಗುತ್ತದೆ. ರೈತ ಬೆಳೆದ ಬೆಳೆ ಹಲವು ಅಡ್ಡಿ ಆತಂಕದ ನಡುವೆ ಕೈ ಸೇರಿದಾಗ, ಗ್ರಾಹಕರಿಗೆ ಹೊರೆಯಾಗದ ಬೆಲೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ವ್ಯಾವಹಾರಿಕ ಜ್ಞಾನ ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.
ಸಾಹಿತಿ ಎನ್.ಶಂಕರೇಗೌಡ ಮಾತನಾಡಿ, ವಿದ್ಯಾರ್ಥಿನಿಯರು ಕಾಲೇಜು ಸಂತೆಯಲ್ಲಿ ಬಗೆಬಗೆಯ ತಿಂಡಿ ತಿನಿಸು ಪ್ರದರ್ಶಿಸಿದ್ದಾರೆ. ವಿವಿಧ ವಸ್ತುಗಳ ಮಾರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಗ್ರಾಹಕರನ್ನು ಸೆಳೆಯಲು ತಮ್ಮದೇ ಆದ ತಂತ್ರ ಅನುಸರಿಸುತ್ತಿದ್ದಾರೆ. ನಿಜಕ್ಕೂ ಕಾಲೇಜು ಪರಿಸರ ವಿನೂತನವಾಗಿ ಕಂಡುಬರುತ್ತಿದೆ. ಸಂತೋಷದ ವಾತಾವರಣದಲ್ಲಿ ಆರ್ಥಿಕ ಚಟುವಟಿಕೆ ನಡೆಯುತ್ತಿದೆ. ವ್ಯಾಪಾರಿ ಕೇಂದ್ರಗಳಲ್ಲಿ ಇಂಥ ಪರಿಸರದ ಅಗತ್ಯವಿದೆ ಎಂದು ಹೇಳಿದರು.
ವಿದ್ಯಾರ್ಥಿನಿಯರು ಕಾಲೇಜು ಸಂತೆಯಲ್ಲಿ ಯಾವುದೇ ಭೇದ ಭಾವ ಇಲ್ಲದೆ ತಿಂಡಿ ತಿನಿಸು ಮಾರಿ ಸಂಭ್ರಮಿಸಿದರು. ವಿವಿಧ ಉಪಯುಕ್ತ ವಸ್ತುಗಳನ್ನು ಪ್ರದರ್ಶಿಸಿ ಗ್ರಾಹಕರನ್ನು ಸೆಳೆದರು. ಸಂತೆ ಬಳಿಕ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಉಪನ್ಯಾಸಕಾರಾದ ಎನ್.ವಾಸು, ಮಂಜುನಾಥರೆಡ್ಡಿ, ವೇಣುಗೋಪಾಲ್, ಗೋಪಿನಾಥ್, ಜಿ.ಕೆ.ನಾರಾಯಣಸ್ವಾಮಿ, ಶಿವಾರೆಡ್ಡಿ, ಗಿರೀಶ್, ಉಪನ್ಯಾಸಕಿಯರಾದ ಲತಾ, ಬಿ.ಎನ್.ವೀಣಾ, ಸಿಆರ್ಪಿ ಚಂದ್ರಪ್ಪ, ಉಪಸ್ಥಿತರಿದ್ದರು.