ಕುಂದಾಪುರದಲ್ಲಿ “ಸಕಲ ಆತ್ಮಗಳ ಸ್ಮರಣೆಯ ದಿನ” ವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು


ಕುಂದಾಪುರ,ನ.2. ಉಡುಪಿ ಧರ್ಮಪ್ರಾಂತ್ಯದ ಹಿರಿಯ ಇಗರ್ಜಿಯಾದ ಹೋಲಿ ರೋಜರಿ ಚರ್ಚಿನಲ್ಲಿ ಮ್ರತಪಟ್ಟು ನಮ್ಮನ್ನು ಅಗಲಿದ “ಸಕಲಆತ್ಮಗಳ ಸ್ಮರಣೆಯ ದಿನ” ವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು. ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ ಬಲಿದಾನವನ್ನು ಅರ್ಪಿಸಿದರು. ಪ್ರಧಾನ ಧರ್ಮಗುರು ಅ| ವಂ|ಸ್ಟ್ಯಾನಿ ತಾವ್ರೊ ಮತ್ತು ಕುಂದಾಪುರದವರೇ ಆದ ವಂ|ಧರ್ಮಗುರು ವಂ|ವೆನಿಲ್ ಡಿಸೋಜಾ ಸಹಬಲಿದಾನವನ್ನು ಅರ್ಪಿಸಿದರು.

ಬಲಿದಾನದ ಬಳಿಕ ಸಮಾಧಿಗೆ ತೆರಳಿ, ಅಗಲಿದ ಎಲ್ಲಾ ಆತ್ಮಗಳಿಗೆ ವಿಶೇಷ ಪ್ರಾರ್ಥನೆ ನೆಡೆಸಿಕೊಟ್ಟು ಪವಿತ್ರ ಜಲದಿಂದ ಸಮಾಧಿ ಭೂಮಿಯಲ್ಲಿರುವ ಸಮಾಧಿಗಳನ್ನು ಆಶಿರ್ವದಿಸಲಾಯಿತು. ಕಥೊಲಿಕ್ ಪವಿತ್ರ ಸಭೆಯು, ಪಾಪ ವಿಮೋಚನೆಯಿಂದ ಬಿಡುಗಡೆಯಾಗದೆ ಇರುವ ಆತ್ಮಗಳಿಗೆ, ಬಿಡುಗಡೆಯಾಗಿ ಸ್ವರ್ಗ ಸೇರಲು ನಮ್ಮ ಪ್ರಾರ್ಥನೆಯ ಅಗತ್ಯ ಇದೆಯೆಂದು ತಿಳಿಸುತ್ತದೆ. ಅದಕ್ಕಾಗಿ ಪವಿತ್ರಸಭೆಯ ನಿರ್ಣಯದಂತೆ, ಈ ದಿನವನ್ನು ಪ್ರಪಂಚದ ಎಲ್ಲೆಡೆ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಭಕ್ತಾಧಿಗಳು ಅಗಲಿದ ತಮ್ಮವರ ಸಮಾಧಿಗಳ ಮೇಲೆ ಮೇಣದ ಬತ್ತಿಗಳನ್ನು ಉರಿಸಿ ಪುಷ್ಪಗಳಿಂದ ಶ್ರಂಗಾರ ಮಾಡಲಾಗಿತ್ತು.