ವಾಲ್ಮೀಕಿ ಸಮುದಾಯವನ್ನು ಕಡೆಗಣಿಸಿದರೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆಯ ಎಚ್ಚರಿಕೆ

ಕೋಲಾರ,ಅ.25: ಕೋಲಾರ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ನಿರ್ಮಿಸುತ್ತಿರುವ ವಾಲ್ಮೀಕಿ ಭವನದ ಒತ್ತುವರಿಯನ್ನು ತೆರವುಗೊಳಿಸಿ ಮತ್ತು ವಾಲ್ಮೀಕಿ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಿ ಉದ್ಘಾಟನೆ ಹಾಗೂ ಭವನದಲ್ಲಿ ಕಾರ್ಯಕ್ರಮ ಮಾಡಲು ಸೂಕ್ತ ಕ್ರಮ ವಹಿಸುವಂತೆ ಆಗ್ರಹಿಸಿ ಕೋಲಾರ ಜಿಲ್ಲಾ ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸಮುದಾಯದ ಮನವಿಯನ್ನು ಕಡೆಗಣಿಸಿದಲ್ಲಿ ಭವನದ ಮುಂದೆ ಕಪ್ಪು ಪಟ್ಟಿ ಧರಿಸಿ ಜಿಲ್ಲಾಡಳಿತದ ವಿರುದ್ದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಉಲ್ಲೇಖ;- 1. ಸರ್ಕಾರದ ಪತ್ರ ಸಂಖ್ಯೆ ಪವಕನಿ; ಸಂವಿ.ಸಿ.ಆರ್-57/2013-14 ದಿನಾಂಕ 21-1023 2. ಪತ್ರದ ಸಂಖ್ಯೆ ಸಕಿಇ/1/ಎಸ್ ಎ ಡಿ/2023 ದಿನಾಂಕ 20-10-23 3. ಕರ್ನಾಟಕ ರಾಜ್ಯ ವಾಲ್ಮೀಕಿ ಅಂಬೇಡ್ಕರ್ ಪ್ರಜಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷರ ಮಾನ್ಯ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ ಬೆಂಗಳೂರು ರವರಿಗೆ ಅರ್ಜಿ. 4. ಘನ ಪ್ರಧಾನ ಸಿವಿಲ್ ನ್ಯಾಯಾಲಯದ ಪ್ರಕರಣ ಸಂಖ್ಯೆ ಒಎಸ್. 31/2019ರ ಆರ್ಡರ್ ಶೀಟ್ ನಕಲು ಮತ್ತು ಒಂದನೇ ಅಪರ ಹಿರಿಯ ಸಿವಿಲ್ ನ್ಯಾಯಾಲಯದ ಪ್ರಕರಣ ಎಮ್ ಎ-
16/2020 ರ ಆದೇಶ ದಿನಾಂಕ 11-12-2020 ಆಗಿರುತ್ತದೆ.
ಕೋಲಾರದ ಘನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣದ ಸಂಖ್ಯೆ ಒಎಸ್- 31/2019 ದಾವೆಯು ಇತ್ಯರ್ಥಕ್ಕೆ ಬಾಕಿ ಇದ್ದು ಸದರಿ ದಾವೆಯಲ್ಲಿ ದಾವಾ ಸ್ವತ್ತಿಗೆ ಸಂಬಂಧಿಸದಂತೆ ಯಥಾಸ್ಥಿತಿ ಕಾಪಾಡುವಂತೆ ಆದೇಶವಿರುತ್ತದೆ ಹಾಗೂ ನಿರ್ದೇಶಕರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು ರವರ ಉಲ್ಲೇಖ ಒಂದರಂತೆ ಗುತ್ತಿಗೆದಾರರಿಗೆ ಇದುವರೆವಿಗೂ ಒಟ್ಟಾರೆ ರೂ 121.50 ಲಕ್ಷಗಳಿಗೆ ಹಣ ಬಳಕೆ ಪ್ರಮಾಣ ಪತ್ರ, ಛಾಯಾ ಚಿತ್ರ ಮತ್ತು ಮೂರನೆಯ ವ್ಯಕ್ತಿಯ ತಪಾಸಣಾ ವರದಿ ಸಲ್ಲಿಸಿರುವುದಿಲ್ಲ. ಹಾಗೂ ಕಾಮಗಾರಿ ಪೂರ್ಣಗೊಳ್ಳುವ ವರೆಗೂ ನಿರ್ಮಾಣ ಹಂತದಲ್ಲಿರುವ ವಾಲ್ಮೀಕಿ ಭವನದ ಉದ್ಘಾಟನೆಯಾಗಲಿ ಅಥವಾ ಆ ಕಟ್ಟಡದಲ್ಲಿ ಕಾರ್ಯಕ್ರಮ ಮಾಡಬಾರದೆಂದು ತಮಗೆ ಮತ್ತು ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಕೋಲಾರ ರವರಿಗೆ ನಿರ್ದೇಶನವನ್ನು ಮಾಡಿರುತ್ತಾರೆ.
ಆದ್ದರಿಂದ ದಯಾಮಯರಾದ ತಾವಂದರು ದಿನಾಂಕ 28-10-2023ರ ವಾಲ್ಮೀಕಿ ಜಯಂತಿಯಂದು ನಿರ್ಮಾಣ ಹಂತದಲ್ಲಿರುವ ಜಿಲ್ಲಾ ಕೇಂದ್ರದ ವಾಲ್ಮೀಕಿ ಭವನದಲ್ಲಿ ಉದ್ಘಾಟನೆ ಅಥವಾ ಕಾರ್ಯಕ್ರಮ ಮಾಡಬಾರದು, ಉದ್ಘಾಟನೆಯು ಸಮುದಾಯದ ಪೂಜ್ಯ ವಾಲ್ಮೀಕಿ ಗುರುಪೀಠದ ಶ್ರೀಗಳು ಹಾಗೂ ಸಮುದಾಯದ ಹಾಲಿ ಮತ್ತು ಮಾಜಿ ಸಚಿವರ ಸ್ಮಮುಖದಲ್ಲಿ ನೆರವೇರಬೇಕೆಂಬುದು ಸಮುದಾಯದ ಬೇಡಿಕೆಯಾಗಿರುತ್ತದೆ.
ಒಂದು ವೇಳೆ ಮೇಲ್ಕಂಡ ನ್ಯಾಯಾಲಯದ ಆದೇಶ ಮತ್ತು ಸರ್ಕಾರದ ನಿರ್ದೇಶನಗಳನ್ನು ಉಲ್ಲಂಘನೆ ಮಾಡಿ ಒತ್ತಡಗಳಿಗೆ ಮಣಿದು ವಾಲ್ಮೀಕಿ ನಾಯಕ ಜನಾಂಗದ ಹಿತಾಸಕ್ತಿಗೆ ವಿರುದ್ಧವಾಗಿ ಉದ್ಘಾಟನೆ ಮಾಡಲು ಮುಂದಾದಲ್ಲಿ ನಾವುಗಳು ವಾಲ್ಮೀಕಿ ನಾಯಕ ಜನಾಂಗದ ಬಹುಸಂಖ್ಯಾತರ ಪರವಾಗಿ ಕಪ್ಪು ಪಟ್ಟಿ ಪ್ರದರ್ಶಿಸಿ ಕಾರ್ಯಕ್ರಮವನ್ನು ಭಹಿಷ್ಕರಿಸಲು ಸರ್ವಾನುಮತದಿಂದ ತೀರ್ಮಾನಿಸಿದ್ದೇವೆಂದು ತಮಗೆ ತಿಳಿಸುತ್ತಾ ಆ ದಿನದ ಮುಂದಿನ ಪರಿಣಾಮಗಳಿಗೆ ಜಿಲ್ಲಾಡಳಿತವೇ ಜವಾಬ್ದಾರಿಯಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ.
ನಿಯೋಗದಲ್ಲಿ ಕೋಲಾರ ಜಿಲ್ಲಾ ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟದ ಮುಖಂಡರುಗಳಾದ ನರಸಿಂಹಯ್ಯ, ಎಂ.ಬಾಲಗೋವಿಂದ, ವಾಲ್ಮೀಕಿ ಮಾದೇಶ್, ವಕೀಲರಾದ ಸುಗಟೂರು ನಾಗರಾಜ್, ಕೆ.ಆನಂದಕುಮಾರ್, ರಮೇಶ್‍ನಾಯಕ್, ಕೋಟೆ ಮಧುಸೂದನ್, ಶ್ಯಾಮ್‍ನಾಯಕ್, ಐತರಾಸನಹಳ್ಳಿ ನರಸಿಂಹಪ್ಪ, ಮಂಗಸಂದ್ರ ತಿಮ್ಮಣ್ಣ, ಪ್ರಸನ್ನ, ಖಾದ್ರಿಪುರ ನವೀನ್, ಕುರಗಲ್ ಗಿರೀಶ್, ಬೆಳ್ಳೂರು ತಿರುಮಲೇಶ್, ಸುಗಟೂರು ವೇಣು, ಮೈಲಾಂಡಹಳ್ಳಿ ಚಿರಂಜೀವಿ, ಮೇಡಿಹಾಳ ಮುನಿರಾಜು, ಕುಡುವನಹಳ್ಳಿ ರಂಗನಾಥ್, ಸುರೇಶ್, ಅಮ್ಮೇರಹಳ್ಳಿ ಚಲಪತಿ, ಗಲ್‍ಪೇಟೆ ಲಕ್ಷ್ಮಣ್, ನರಸಾಪುರ ನಾಗರಾಜ್, ಗರುಡನಹಳ್ಳಿ ಬಾಬು, ಮಡೇರಹಳ್ಳಿ ಸೋಮು, ಕೆ.ಎಸ್.ಆರ್.ಟಿ.ಸಿ.ಮುನಿಯಪ್ಪ, ಮೇಡಿಹಾಳ ತಿರುಮಲೇಶ್, ಬೈರಂಡಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ನಾಗೇಶ್, ಗುಟ್ಟಹಳ್ಳಿ ಚಿದಾನಂದ್, ಬಾರಂಡಹಳ್ಳಿ ನಾರಾಯಣಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.