ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಗುಜರಿ ಮಾರಾಟದಲ್ಲಿ 14 ಕೋಟಿಗೂ ಮಿಕ್ಕಿವಂಚನೆ:ತನಿಖೆಗೆ ಆಡಿಷಲ್ ಸಿವಿಲ್ ನ್ಯಾಯಾಲಯ ಆದೇಶ

ಅವಿಭಜಿತ ದ.ಕ. ಜಿಲ್ಲೆಯ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆಯಾದ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ 14 ಕೋಟಿಗೂ ಮಿಕ್ಕಿ ಭಾರೀ ವಂಚನೆ ಮಾಡಿರುವ ಬಿಜೆಪಿ ಬೆಂಬಲಿತ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ವಿರುದ್ಧ ತನಿಖೆ ನೆಡೆಸುವಂತೆ ಉಡುಪಿ ಜಿಲ್ಲಾ ರೈತ ಸಂಘ ಖಾಸಗಿ ದೂರನ್ನು ಆಡಿಷಲ್ ಸಿವಿಲ್ ಜಡ್ಜ್ ಉಡುಪಿಯಲ್ಲಿ ದಾಖಲು ಮಾಡಿದ್ದು, ಇದೀಗ ಈ ದೂರನ್ನು ವಿಚಾರಣೆ ನಡೆಸಿದ ನ್ಯಾಯಧೀಶರು ಬೃಹತ್ ವಂಚನೆ ಕುರಿತು ಸೂಕ್ತ ತನಿಖೆ ಮಾಡಿ 12/12/2023ರ ಒಳಗೆ ನ್ಯಾಯಾಲಯಕ್ಕೆ ವರದಿ ನೀಡಲು ಬ್ರಹ್ಮವಾರ ಪೊಲೀಸ್ ಠಾಣೆಗೆ ಆದೇಶ ಮಾಡಿದ್ದಾರೆ.

ಇತ್ತೀಚಿಗೆ ಬ್ರಹ್ಮಾವರದಲ್ಲಿ ಕಾಂಗ್ರೆಸ್ ನೇತ್ರತ್ವದಲ್ಲಿ ಮತ್ತು ರೈತ ಸಂಘಟನೆಯ ಬೃಹತ್ ಮಟ್ಟದ ಪ್ರತಿಭಟನೆ ನಡೆಸಿತ್ತು.
ಕಾಂಗ್ರೆಸ್ ಮುಖಂಡ ಕರಾವಳಿ ಮಲೆನಾಡು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಮುರೊಳ್ಳಿ ತೀವ್ರವಾಗಿ ಖಂಡಿಸಿ ಮಾತಾನಾಡಿ ತನಿಖೆ ನಡೆಸಲು ಆಗ್ರಹಿಸಿದ್ದರು.