ರಾಷ್ಟೀಯ ಹಬ್ಬಗಳನ್ನ ಎಲ್ಲಾ ಇಲಾಖಾಧಿಕಾರಿಗಳು ಅದ್ದೂರಿಯಾಗಿ ನಡೆಸಲು ತಹಶೀಲ್ದಾರ್ ಶರೀನ್‍ತಾಜ್ ಇಲಾಖಾಧಿಕಾರಿಗಳಿಗೆ ಸೂಚನೆ

ಶ್ರೀನಿವಾಸಪುರ 2 : ರಾಷ್ಟೀಯ ಹಬ್ಬಗಳನ್ನ ಎಲ್ಲಾ ಇಲಾಖಾಧಿಕಾರಿಗಳು ಅದ್ದೂರಿಯಾಗಿ ನಡೆಸುವಂತೆ ತಹಶೀಲ್ದಾರ್ ಶರೀನ್‍ತಾಜ್ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ತಹಶೀಲ್ದಾರ್ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಸಮಿತಿವತಿಯಿಂದ ವಾಲ್ಮೀಕಿ ಜಯಂತಿ, ಕನ್ನಡ ರಾಜ್ಯೋತ್ಸವ, ಕನಕ ಜಯಂತಿ, ಒನಿಕೆ ಓಬವ್ವ ಜಯಂತಿ, ಕಿತ್ತೂರುರಾಣಿ ಚನ್ನಮ್ಮ ಜಯಂತಿ ಅಂಗವಾಗಿ ನಡೆದ ಪೂರ್ವಾಭಾವಿ ಸಭೆಯಲ್ಲಿ ಮಾತನಾಡಿದರು.
ವಾಲ್ಮೀಕಿ ಜಯಂತಿ ಅಂಗವಾಗಿ ಎಲ್ಲಾ ಗ್ರಾಮಪಂಚಾಯಿತಿಗಳಿಂದಲೂ ಸ್ತಬ್ದ ಚಿತ್ರಗಳನ್ನು ಮೆರವಣಿಗೆ ಮೂಲಕ ತಾಲೂಕು ಕೇಂದ್ರಕ್ಕೆ ತರುವಂತೆ ಸೂಚಿಸಲಾಯಿತು.
ಎಲ್ಲಾ ಇಲಾಖೆಗಳ ಕಛೇರಿಯ ಕಟ್ಟಡಗಳಿಗೆ ವಿದ್ಯುತ್‍ದೀಪಾ ಅಲಂಕಾರಗಳನ್ನು ಮಾಡಿ, ತಮ್ಮತಮ್ಮ ಕಛೇರಿಗಳಲ್ಲಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ , ತಮ್ಮ ಇಲಾಖೆಗಳಿಗೆ ಸಂಬಂದಿಸಿದ ಸ್ತಬ್ದಚಿತ್ರಗಳನ್ನು ಮೆರವಣಿಗಾಗಿ ಸಿಂಗರಿಸುವಂತೆ ಸೂಚನೆ ನೀಡಿದರು.
ನವಂಬರ್ 1ರ ಕನ್ನಡರಾಜ್ಯೋತ್ಸವ ಕಾರ್ಯಕ್ರಮವು ಪಟ್ಟಣದ ಬಾಲಕೀಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿದ್ದು, ಅಂದು ಕನ್ನಡ ದ್ವಜ, ರಾಷ್ಟ್ರದ್ವಜಾರೋಹಣ ನಡೆಸಲಾಗುವುದು, ಎಲ್ಲಾ ಇಲಾಖೆಗಳಿಗೆ ಸಂಬಂದಿಸಿದ ಸ್ತಬ್ದಚಿತ್ರಗಳ ಹಾಗು ಕಲಾತಂಡಗಳೊಂದಿಗೆ ಮೆರವಣಿಗೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಸಲಾಗುವುದು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಾಗುವುದು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು.
ಇಒ ಶಿವಕುಮಾರಿ, ಪುರಸಭೆ ಮುಖ್ಯಾಧಿಕಾರಿ ವೈ,ಎನ್.ಸತ್ಯನಾರಾಯಣ್, ಕೃಷಿ ಅಧಿಕಾರಿ ಕೆ.ಸಿ.ಮಂಜುನಾಥ್, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ರಾಜೇಶ್, ಮುಖಂಡರಾದ ಹೊಗಳಗರೆ ಆಂಜನೇಯಪ್ಪ, ಗೌನಿಪಲ್ಲಿ ರಾಮಮೋಹನ್, ನರಸಿಂಹಪ್ಪ, ವ್ಯಾಪಲಪಲ್ಲಿ ನರೇಶ್, ಯಮ್ಮನೂರು ನಾಗರಾಜ್, ರಾಮಾಂಜನಮ್ಮ, ವೆಂಕಟೇಶ್, ಪೆದ್ದಪಲ್ಲಿ ಈರಪ್ಪ ಇದ್ದರು.