ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರ್ ಶಾಲಾ ರಸಪ್ರಶ್ನೆ ಸ್ಪರ್ಧೆ


ಕುಂದಾಪುರ : ‘ಮಗುವಿನ ಕೈಯಲ್ಲಿ ಗಡಿಯಾರ ನೀಡಿದಾಗ ಅದು ಮೊದಲು ತೆರೆದು ಅದರಲ್ಲಿರುವ ಮುಳ್ಳು ಹೇಗೆ ತಿರುಗುತ್ತದೆ ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಎಂದು ಆಶ್ಚರ್ಯದಿಂದ ನೋಡುತ್ತದೆ ಈ ಆಶ್ಚರ್ಯದಿಂದ ನೋಡುವುದನ್ನು ಎಲ್ಲಾ ಅವಿಷ್ಕಾರದ ತಾಯಿ ಹಾಗೂ ತಾವೂ ಆ ಕಾರ್ಯವನ್ನು ಮಾಡಿ ಅವಿಷ್ಕಾರ ಮಾಡಿ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕೆಂದು’ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳು ಹಾಗೂ ಹೋಲಿ ರೋಜರಿ ಶಾಲೆಯ ಸಂಚಾಲಕರಾಗಿರುವ ಅತೀ ವಂದನೀಯ ಗುರು ಸ್ಟ್ಯಾನಿ ತಾವ್ರೊ ಹೇಳಿದರು.

ಅವರು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಇಲ್ಲಿ ಅಂತರ್ ಶಾಲಾ ರಸಪ್ರಶ್ನೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಕ್ಷೇತ್ರ ಸಂಪನ್ಮೂಲ್ ಕಛೇರಿಯ ಸಂಪನ್ಮೂಲ ವ್ಯಕ್ತಿಗಳಾಗಿರುವ ಅಶೋಕ್ ನಾಯ್ಕರವರು ರಸ ಪ್ರಶ್ನೆ ಸ್ಪರ್ಧೆಯಲ್ಲಿ ಜಯಗಳಿಸಿದ ತಂಡಗಳಿಗೆ ಬಹುಮಾನವನ್ನು ವಿತರಿಸಿ ವಿದ್ಯಾರ್ಥಿಗಳಿಗೆ ಅವಕಾಶವನ್ನು ಬಳಸಿಕೊಳ್ಳಬೇಕು ಹಾಗೂ ಈ ರಸಪ್ರಶ್ನೆ ಸ್ಪರ್ಧೆ ಅತ್ಯುತ್ತಮವಾಗಿ ಅಯೋಜನೆಗೊಂಡು ಭಾಗವಹಿಸಿದ ವಿದ್ಯಾರ್ಥಿಗಳಿಗಲ್ಲದೆ ಇತರ ವಿದ್ಯಾರ್ಥಿಗಳಿಗೂ ಕೂಡ ಸ್ಪೂರ್ತಿಯನ್ನು ನೀಡಿತೆಂಬುದಾಗಿ ತಿಳಿಸಿ ಈ ರೀತಿಯ ಸ್ಪರ್ಧೆಗಳು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ನಡೆಸುವಂತಾಗಲಿ ಎಂದು ಹಾರೈಸಿದರು. ಸಹ ಶಿಕ್ಷಕಿ ಮಮತಾ ಸ್ವಾಗತಿಸಿದರು, ಸಹ ಶಿಕ್ಷಕಿ ಅಂಕಿತಾ ಧನ್ಯವಾದ ಸಮರ್ಪಿಸಿದರು, ಸಹ ಶಿಕ್ಷಕಿ ನಿಖಿತಾ ಕಾರ್ಯಕ್ರಮ ನಿರೂಪಿಸಿದರು.