ಪ್ರಿಯಾಂಕಾ ಗಾಂಧಿಯವರು ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದ್ದರು;ಬಿಸಿಯೂಟ ನೌಕರರಿಗೆ 6000 ವೇತನಕ್ಕೆ ಒತ್ತಾಯಿಸಿ ಪ್ರತಿಭಟನೆ

ಕೋಲಾರ ಅಕ್ಟೋಬರ್ 7 : ಪ್ರಜಾ ಸೇವಾ ಸಮಿತಿ ಸಂಯೋಜಿತ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಕ್ಷೇಮಾಭಿವೃದ್ಧಿ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಕಲ್ವಮಂಜಲಿ ಸಿ ಶಿವಣ್ಣ ರವರ ನೇತೃತ್ವದಲ್ಲಿ ತಾಲೂಕು ಪಂಚಾಯಿತಿ ಆವರಣದಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು. ಕೋಲಾರ ತಾಲೂಕು ಪಂಚಾಯಿತಿ ಕಾರ್ಯನಿವಾರಣಾಧಿಕಾರಿಗಳಾದ ಮುನಿಯಪ್ಪ ರವರ ಮುಖಾಂತರ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ರವರಿಗೆ ಅಕ್ಷರ ದಾಸೋಹ ನೌಕರರ ಬೇಡಿಕೆಗಳ ಮನವಿ ಪತ್ರವನ್ನು ರವಾನೆ ಮಾಡಲಾಯಿತು
ಸಂಸ್ಥಾಪಕ ಅಧ್ಯಕ್ಷರಾದ ಕಲ್ವಮಂಜಲಿ ಸಿ ಶಿವಣ್ಣ ಮಾತನಾಡಿ ಕಾಂಗ್ರೆಸ್ ವರಿಷ್ಠರಾದ ಪ್ರಿಯಾಂಕಾ ಗಾಂಧಿ ರವರು ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಅಕ್ಷರ ದಾಸೋಹ ನೌಕರರಿಗೆ 6000 ವೇತನವನ್ನು ಹೆಚ್ಚಳ ಮಾಡಲಾಗುವುದೆಂದು ಘೋಷಣೆ ಮಾಡಿದ್ದರು. ಈಗ ಅವರದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಈಗ ಬಿಸಿಊಟ ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಲಾಯಿತು.
ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಎಲ್‍ಕೆಜಿ ಯುಕೆಜಿಯನ್ನ ಪ್ರಾರಂಭ ಮಾಡಲು ಸರ್ಕಾರ ಕ್ರಮ ವಹಿಸಬೇಕು ಸರ್ಕಾರಿ ನೌಕರರ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸುವ ಕಾನೂನನ್ನು ಸರ್ಕಾರ ರೂಪಿಸಬೇಕು. ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಕೆಲಸಗಳಲ್ಲಿ ಮೊದಲ ಆಧ್ಯತೆ ನೀಡಬೇಕು. ಶಾಲಾ ಮುಖ್ಯ ಶಿಕ್ಷಕರಿಗೆ ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರಿಗೆ ಸಿಜಿ ಬಿಲ್‍ನ್ನು ಸಹಿಯನ್ನು ಮಾಡುವುದನ್ನು ಹಿಂಪಡೆದು ಈ ಹಿಂದೆ ಇದ್ದ ರೀತಿ ಶಾಲಾ ಮುಖ್ಯ ಶಿಕ್ಷಕರಿಗೆ ಹಾಗೂ ಶಾಲೆಯ ಮುಖ್ಯ ಅಡಿಗೆಯವರಿಗೆ ಸಿಜಿ ಬಿಲ್ಲಿನ ಸಹಿ ಮಾಡುವ ಅಧಿಕಾರವನ್ನು ನೀಡಬೇಕು. ಅಕ್ಷರ ದಾಸೋಹ ನೌಕರರು ಅಡುಗೆ ಮಾಡುವ ಸಂದರ್ಭದಲ್ಲಿ ಗ್ಯಾಸ್ ಮತ್ತು ಕುಕ್ಕರ್ ಇಂದ ಏನಾದರೂ ಅನಾಹುತ ಸಂಭವಿಸಿದಲ್ಲಿ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಸಂಪೂರ್ಣವಾಗಿ ವಹಿಸಿಕೊಂಡು ಹೆಣ್ಣು ಮಕ್ಕಳು ಪರವಾಗಿ ನಿಲ್ಲಬೇಕು. ಬಿಸಿಯೂಟ ನೌಕರರಿಗೆ ಕೆಲವು ಕಡೆ ಎಸ್‍ಡಿಎಂಸಿ ಮತ್ತು ಕೆಲವು ಶಾಲಾ ಶಿಕ್ಷಕರುಗಳ ಕಡೆಯಿಂದ ತೊಂದರೆ ಆಗುತ್ತಿದ್ದು, ಅದನ್ನ ಸರಿಪಡಿಸಲು ಜಿಲ್ಲಾ ಮಟ್ಟದ ವಿಶೇಷ ತಂಡವನ್ನು ರಚನೆ ಮಾಡಬೇಕು ಎಂಬ ಒತ್ತಾಯಗಳನ್ನ ಸಲ್ಲಿಸಲಾಯಿತು.
ತಾಲೂಕು ಪಂಚಾಯಿತಿ ಕಾರ್ಯನಿವಾರಣಅಧಿಕಾರಿ ಮುನಿಯಪ್ಪ ಅಕ್ಷರ್ ದಾಸೋಹ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಸುಬ್ರಮಣಿ ಮನವಿ ಪತ್ರವನ್ನು ಸ್ವೀಕರಿಸಿದರು ಹಾಗೂ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ತಾಲೂಕು ಪಂಚಾಯಿತಿ ಕಾರ್ಯನಿವಾರಣಾಧಿಕಾರಿಗಳಾದ ಮುನಿಯಪ್ಪ ರವರು ಬಿಸಿಯೂಟ ನೌಕರರಿಗೆ ಸರಕಾರದಿಂದ ಬರುವ ಯೋಜನೆಗಳನ್ನು ಸಕಾಲಕ್ಕೆ ಅಡುಗೆಯವರಿಗೆ ತಲುಪಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು ಹಾಗೂ ಶಾಲೆಗಳಲ್ಲಿ ಏನಾದರೂ ಅಡುಗೆ ನೌಕರರಿಗೆ ಸಮಸ್ಯೆಯಾದಲ್ಲಿ ತಕ್ಷಣ ತಮ್ಮ ಗಮನಕ್ಕೆ ತರಲು ಅಡುಗೆ ನೌಕರರಿಗೆ ತಿಳಿಸಿದರು. ತಾಲೂಕು ಪಂಚಾಯಿತಿ ಹಂತದಲ್ಲಿ ಆಗಬೇಕಾದ ಕೆಲಸಗಳನ್ನ ಅಡುಗೆ ನೌಕರರಿಗೆ ಮಾಡಿಕೊಡುವುದಾಗಿ ಭರವಸೆ ನೀಡಿದರು
ಈ ಸಂದರ್ಭದಲ್ಲಿ ಕಲ್ವಮಂಜಲಿ ರಾಮುಶಿವಣ್ಣ ಕೋಲಾರ, ಜಿ ನಾರಾಯಣಸ್ವಾಮಿ, ಮಮತಾ, ಚಲ್ದಿಗಾನಹಳ್ಳಿ ಮಂಜುಳಮ್ಮ, ವಕ್ಕಲೇರಿ ನಾಗವೇಣಮ್ಮ, ಸುಗುಟೂರು ಶೋಭಾ, ಆರತಿ, ಗಿರಿಜಾ, ಅಂಜನಮ್ಮ, ಮಂಜುಳಾ, ಲಕ್ಷ್ಮಮ್ಮ, ರತ್ನಮ್ಮ, ಸುನಂದಮ್ಮ, ನಾರಾಯಣಮ್ಮ, ಮೀನಾಕ್ಷಿ, ಗೌರಮ್ಮ, ಶೈಲಮ್ಮ, ಅಂಬಿಕಾ, ಮುನಿರತ್ನಮ್ಮ, ಶೋಭಾ, ಅಖಿಲ, ಮಂಜುಳಮ್ಮ, ಸಾವಿತ್ರಮ್ಮ, ಕೋಕಿಲಮ್ಮ, ಆಶಾ, ಜಯಂತಿ, ಪಲ್ಲವಿ, ವರಲಕ್ಷ್ಮಿ, ಗೌರಮ್ಮ, ಶೈಲಮ್ಮ, ಮುನಿರತ್ನ, ಅನಿತಾ, ರಾಧಮ್ಮ, ಮುನಿಯಮ್ಮ, ಪ್ರಮೀಳಮ್ಮ, ಕನ್ಯಮ್ಮ, ಜರೀನಾ ಆಯುμï ಜಬೀನ ಫಾರಸ ಬೇಗಂ, ಕೀರ್ತಿ, ಗಿರಿಜಮ್ಮ, ಮಾಲಾಶ್ರೀ ಇನ್ನು ಮುಂತಾದ ನೌಕರರು ಹೋರಾಟದಲ್ಲಿ ಪಾಲ್ಗೊಂಡಿದ್ದರು.