ಕುಂದಾಪುರ ಕಥೊಲಿಕ್ ಸಭಾ ಘಟಕದಿಂದ ಗಾಂಧಿ ಜಯಂತಿ


ಕುಂದಾಪುರ, ಅ.2: “ನಾವು ಗಾಂಧಿಜಿಯ ಚಿಂತನೆ ತತ್ವಗಳನ್ನು ಕೇವಲ ನೆನಪು ಮಾಡಿಕೊಳ್ಳುತ್ತೇವೆ. ಆದರೆ ಅವುಗಳನ್ನು ಪಾಲಿಸಿಸುವುದಿಲ್ಲಾ, ಗಾಂಧಿಜಿ ಶಾಂತಿ ಪ್ರಿಯರು, ಹಾಗೇ ಆದರೆ ಅವರೊಂದು ಶಕ್ತಿ. ನಾವು ಅವರ ಮತ್ತೊಂದು ಮುಖವನ್ನು ಕಾಣಬೇಕು. ಹೊರ ದೇಶದಲ್ಲಿ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಗಳನ್ನು ಸ್ಥಾಪಿಸುತ್ತಾರೆ, ಆದರೆ ಜಗತ್ತಿನಲ್ಲಿ ಗಾಂಧಿಜಿಯನ್ನು ಆದರ್ಶವನ್ನಾಗಿಟ್ಟುಕೊಂಡು ಸಾಕಾಸ್ಟು ನಾಯಕರು ಜಗತ್ಪ್ರಸಿದ್ದಾರಾಗಿದ್ದಾರೆ. ಆದರೆ ಭಾರತದಲ್ಲಿ ಕೆಲವರು ಗಾಂಧಿಜಿಯವರ ಬಗ್ಗೆ ಕೊಂಕು ಮಾತುಗಳನ್ನು ಆಡುತ್ತಾರೆ, ಎಂದು ನ್ಯಾಯ್ವಾದಿ ಸಚ್ಚಿದಾಂದ ಎಮ್.ಎಲ್.ಅವರು ಹೇಳಿದರು. ಅವರು ಸಂತ ಜೋಸೆಫ್ ಕಾನ್ವೆಂಟಿನಲ್ಲಿ ಹೋಲಿ ರೋಸರಿ ಚರ್ಚಿನ ಕುಂದಾಪುರ ಕಥೊಲಿಕ್ ಸಭಾ ಘಟಕದಿಂದ ಗಾಂಧಿ ಜಯಂತಿಯ ಆಚರಣೆ ಕಾರ್ಯಕ್ರಮದ ವೇಳೆ ಹೇಳಿದರು.
ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ಮಾತನಾಡಿ ‘ಗಾಂಧಿಜೀಯವರು ನಿಜವಾಗಿಯೂ ಮಹಾತ್ಮರು, ಸುಮಾರು 300 ವರ್ಷಗಳಿಂದ ಗುಲಾಮಗಿರಿಯಲ್ಲಿದ್ದ ಭಾರತವನ್ನು ಯಾರಿಂದಲೂ ಬಿಡುಗಡೆ ಮಾಡಲು ಸಾಧ್ಯವಿಲ್ಲದಾಗ ಅವರು ಶಾಂತಿ, ಸತ್ಯಮಾರ್ಗದಿಂದ ನಮಗೆ ಸ್ವಾತಂತ್ರ ತಂದುಕೊಟ್ಟಿದ್ದಾರೆ, ಅದರ ಫಲ ನಾವು ಇಂದು ಉಣ್ಣುತ್ತಾ ಇದ್ದೆವೆ, ಯೇಸುವಿನ ತತ್ವಮಾರ್ಗಗಳನ್ನು ಸರಿಯಾಗಿ ಪಾಲಿಸಿದವರು ಗಾಂಧೀಜಿ ಆಗಿದ್ದಾರೆ. ಅವರನ್ನು ನಮ್ಮ ಕ್ರೈಸ್ತರ ಲೆಕ್ಕಾಚಾರದಲ್ಲಿ ಸಂತರೆಂದು ಕರೆಯಬಹುದೆಂದು’ ಅವರು ತಿಳಿಸಿದರು.
ಗಾಂಧಿಜೀಯ ಬಗ್ಗೆ ಪ್ರಶ್ನೆಗಳನ್ನು ಕೇಳಿ, ಸರಿ ಉತ್ತರ ಕೊಟ್ಟವರಿಗೆ ಪುಸ್ತಕಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಕಾರ್ಮೆಲ್ ಸಭೆಯ ಕರ್ನಾಟಕ ಪ್ರಾಂತೀಯ ಮುಖ್ಯಸ್ಥೆ ವಂದನೀಯ ಭಗಿನಿ ಶಮಿತ, ಕುಂದಪುರ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸುಪ್ರಿಯಾ, ಕುಂದಾಪುರ ವಲಯ ಕಥೊಲಿಕ್ ಸಭಾದ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ, ಕುಂದಾಪುರ ಘಟಕದ ನಿರ್ಗಮನ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ, ಪದಾಧಿಕಾರಿಗಳಾದ ಪ್ರೇಮಾ ಡಿಕುನ್ಹಾ, ಎಲ್ಡ್ರಿನ್ ಡಿಸೋಜಾ, ಅತಿಥಿ ಭಗಿನಿಯರು ಮತ್ತು ಇತರರು ಉಪಸ್ಥಿತರಿದ್ದರು. ಕಥೊಲಿಕ್ ಸಭಾ ಘಟಕದ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕಿ ಆಶಾ ಕರ್ವಾಲ್ಲೊ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗಳನ್ನು ಅರ್ಪಿಸಿದರು.