ಬ್ರಹ್ಮಾವರದಲ್ಲಿ ರೋಜರಿ ಸೊಸೈಟಿಯ 10 ನೇ ಶಾಖೆ ಉದ್ಘಾಟನೆ : ಬಡವ ಮಧ್ಯಮ ವರ್ಗದವರೂ ಪ್ರಗತಿ ಕಾಣಬೇಕನ್ನುವುದೇ ಈ ಸೊಸೈಟಿಯ ವೈಶಿಷ್ಠತೆ – ಶ್ರೇಷ್ಟ ಧರ್ಮಗುರು ಮೊನ್ಸಿಂಜೆರ್ ಅ|ವಂ|ಫರ್ಡಿನಾಂಡ್


ಬ್ರಹ್ಮಾವರ, ಅ.2: “ಕುಂದಾಪುರದಲ್ಲಿನ ಕೆಲವು ಹಿರಿಯರು ಸಮಾಜದ ಒಳಿತಿಗಾಗಿ ಚಿಂತನೆ ಮಾಡಿ ಒಂದು ಸಣ್ಣ ಕೋ.ಆಪರೇಟಿವ್ ಸೊಸೈಟಿಯನ್ನು ಸ್ಥಾಪಿಸಿದರು. ಅದು ರೋಜರಿ ಮಾತೆಯ ಹೆಸರಿನಲ್ಲಿ, ಅದೀಗ ಇತ್ತೀಚಿನ ದಿನಗಳಲ್ಲಿ ಬಹಳ ಪ್ರಗತಿ ಸಾಧಿಸಿ ಉತ್ತಮ ಸಾಧನೆ ಮಾಡಿ 10 ನೇ ಶಾಖೆ ಶುಭಾರಂಬಗೊಂಡಿದೆ, ಉಡುಪಿ ಮಣಿಪಾಲ ಬೆಳೆಯುತ್ತಿದೆ, ಇದೀಗ ಬ್ರಹ್ಮಾವರ ಬೆಳೆಯುಬೇಕು, ರೋಜರಿ ಸೊಸೈಟಿಯ ಅಗತ್ಯವಿದೆ, ಈ ಸೊಸೈಟಿ ಎಲ್ಲಾ ಸಮಾಜಕ್ಕೆ ತಮ್ಮ ಉತ್ತಮ ಸೇವೆ ನೀಡುವುದರಲ್ಲಿ ಖ್ಯಾತಿ ಗಳಿಸಿದೆ. ಇತ್ತೀಚೆಗೆ ಕೋಟಿ ಕೋಟಿ ಲಾಭ ಗಳಿಸಿದ ಸಂಸ್ಥೆ ಆದರೂ ಇವರ ವೈಶಿಷ್ಠತೆ ಎನೆಂದರೇ ಬಡ ಮತ್ತು ಸಾಮಾನ್ಯ ಜನರ ಪ್ರಗತಿ ಹೊಂದಬೇಕೆನ್ನುವುದೇ ಇವರ ಚಿಂತನೆ ಎಂದು ಶ್ಲಾಘಿಸಿ ಇವರ ಉದ್ದೇಶ ಫಲ ನೀಡಲಿ’ ಎಂದರು.
ಅವರು ಬ್ರಹ್ಮಾವರದ ಬಸ್ಸು ನಿಲ್ದಾಣದ ಸಮೀಪದಲ್ಲಿರು ಶ್ರೀ ರಾಮ್ ಆರ್ಕೆಡ್ ಕಾಂಪ್ಲೆಕ್ಸನಲ್ಲಿ ರೋಜರಿ ಕ್ರೆಡಿಟ್ ಕೋ-ಆಪರೆಟೀವ್ ಸೊಸೈಟಿ ಲಿ.ಕುಂದಾಪುರದ 10 ನೇ ಶಾಖೆಯ ಅ.1ರಂದು ಉದ್ಘಾಟನೆ ಮಾಡಿ ಹಾರೈಸಿದರು. ನೂತನ ಸಂಸ್ಥೆಯ ಕಚೇರಿಯನ್ನು ಆಶಿರ್ವದಿಸುವ ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟ ಬ್ರಹ್ಮಾವರ ಜೆ.ಎಮ್.ಜೆ ಚರ್ಚಿನ ಧರ್ಮಗುರು ವಂ|ಜೋನ್ ಫೆರ್ನಾಂಡಿಸ್ “ಅಕ್ಟೋಬರ್ ತಿಂಗಳು ರೋಜರಿ ಮಾತೆಗೆ ಸಮರ್ಪಿಸಿದ್ದ ತಿಂಗಳು, ಮೊದಲ ದಿವಸವೇ ರೋಜರಿ ಸೊಸೈಟಿಯ ಶಾಖೆ ಇಲ್ಲಿ ಉದ್ಘಾಟನೆ ಗೊಂಡಿದೆ, ಈ ಸೊಸೈಟಿಯ ಅಧ್ಯಕ್ಷರು, ನಿರ್ದೇಶಕರು ಮತ್ತು ಆಡಳಿತ ಮಂಡಳಿಯಿ ಶ್ರಮದಿಂದ ಈ ಸೊಸೈಟಿ ಏಳಿಗೆ ಪಡೆದಿದೆ. ಈ ಸೊಸೈಟಿಯಿಂದ ಇಲ್ಲಿನ ಜನರಿಗೆ ಒಳಿತಾಗಲಿ” ಎಂದು ಶುಭ ಹಾರೈಸಿದರು.
ಭದ್ರತಾ ಕೊಠಡಿ ಉದ್ಘಾಟಿಸಿದ ಕುಂದಾಪುರ ವಲಯ ಪ್ರಧಾನ, ಹಾಗೂ ಸೊಸೈಟಿ ಮಾರ್ಗದರ್ಶಕ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ‘ಸಮಾಜದಲ್ಲಿ ಎರಡು ವರ್ಗದ ಜನರಿದ್ದಾರೆ, ಒಂದು ಶ್ರೀಮಂತ ವರ್ಗ, ಮತ್ತೊಂದು ಬಡವರ ವರ್ಗ, ಶ್ರೀಮಂತರು ಈ ಸೊಸೈಟಿಯಲ್ಲಿ ಹಣ ಠೇವಣಿ ಇರಿಸುವುದು, ಬಡವರು ಬಡ್ಡಿಗೆ ಸಾಲ ತೆಗೆದುಕೊಂಡು, ಶ್ರಮಪಟ್ಟು ಪ್ರಗತಿಹೊಂದಿ ಹಣ ವಾಪಾಸು ನೀಡುವುದು ಆವಾಗ ನಿಮ್ಮ ಉದ್ದೇಶ ಮತ್ತು ಸೊಸೈಟಿಯ ಉದ್ದೇಶವು ಈಡೇರುತ್ತದೆ ಎಂದು’ ಶುಭ ನುಡಿಗಳನ್ನಾಡಿದರು. ಸೊಸೈಟಿಯ ಹಿರಿಯ ನಿರ್ದೇಶಕ ಫಿಲಿಪ್ ಡಿಕೋಸ್ತಾ ‘ಗಣಕಯಂತ್ರಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ. ಅಧ್ಯಕ್ಷ ಜೋನ್ಸನ್ ಡಿ ಆಲ್ಮೇಡಾ ವಹಿಸಿ ‘ಕಥೊಲಿಕ್ ಸಭಾ ಸಂಘಟನೇಯ ಮೂಲಕ ನಮ್ಮ ಹಿರಿಯರು, ಬಹಳ ದೂರ ದ್ರಷ್ಟಿ ಇಟ್ಟುಕೊಂಡು ಸೊಸೈಟಿಯ ಸಣ್ಣ ಬೀಜವನ್ನು ಬಿತ್ತಿದ್ದರು, ಅದೀಗ ಅದು ಹೆಮ್ಮರವಾಗಿ ಬೆಳೆಯುತ್ತೀದೆ. ಇದು ಬೆಳೆಯಬೇಕಾದರೆ ನಿರಂತರವಾಗಿ ಶ್ರಮಿಸುತ್ತೀರುವ ನಿರ್ದೇಶಕರು, ಹಾಗೇ ಸೇವೆ ಸಲ್ಲಿಸುತ್ತೀರುವ ಕಾರ್ಯ ನಿರ್ವಹಣ ಅಧಿಕಾರಿಗಳು, ಸಿಬಂಧಿ ವರ್ಗ. ಹಾಗೇ ನಮ್ಮ ಸದಸ್ಯರು ಮತ್ತು ಗ್ರಾಹಕರು ಕೂಡ ಕಾರಣರಾಗಿದ್ದಾರೆ. ಬ್ರಹ್ಮಾವರದಲ್ಲಿ ಹಲವಾರು ಕೋ.ಆಪರೇಟಿವ್ ಸೊಸೈಟಿಗಳು ಇದ್ದು, ನಾವು ಇಲ್ಲಿ ಪ್ರತಿಸ್ಪರ್ಧೆ ಮಾಡುತ್ತಿಲ್ಲ. ನಮ್ಮ ಸೊಸೈಟಿ ಉತ್ತಮ ಸೇವೆ ನೀಡುವುದೇ ನಮ್ಮ ಗುರಿ ಎನ್ನುತ್ತಾ ನಾವು ನಮ್ಮ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಸಿಬಂದಿ ವರ್ಗದವರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಾಗಿ ಸಾಲದ ಯೋಜನೆ, ಹೀಗೆ ಇತರೆ ಹಲವಾರು ಸಮಾಜಮುಖಿ ಸೇವೆಗಳನ್ನು ಮಾಡುತ್ತಾ ಇದೆ ಎಂದು ತಿಳಿಸಿ ಸ್ವಾಗತಿಸಿದರು. ವೇದಿಕೆಯಲ್ಲಿ ಸೊಸೈಟಿಯ ಉಪಾಧ್ಯಕ್ಷ ಕಿರಣ್ ಲೋಬೊ, ವಿಠಲ್ ಮೆಡಿಕಲ್ ಸೆಂಟರ್ ಮಾಲಕ ಕಾವ್ರಾಡಿ ಸೀತಾರಾಮ್ ಶೆಟ್ಟಿ ಇದ್ದು, ಸೊಸೈಟಿಯ ನಿರ್ದೇಶಕರಾದ ಡಯಾನ ಡಿಆಲ್ಮೇಡಾ, ಶಾಂತಿ ಆರ್ ಕರ್ವಾಲ್ಲೊ, ವಿಲ್ಫ್ರೆ ಡ್ ಮಿನೇಜಸ್, ಟೆರೆನ್ಸ್ ಸುವಾರಿಸ್, ತಿಯೋದೋರ್ ಒಲಿವೇರಾ ಉಪಸ್ಥಿತರಿದ್ದರು. ಸೊಸೈಟಿಯ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಮೇಬಲ್ ಡಿ ಆಲ್ಮೇಡಾ ವಂದಿಸಿದರು. ಸೊಸೈಟಿಯ ನಿರ್ದೇಶಕ ಬ್ರಹ್ಮಾವರ ಶಾಖೆಯ ಸಭಾಪತಿ ಡೆರಿಕ್ ಡಿ ಸೋಜಾ ಕಾರ್ಯಕ್ರಮ ನಿರೂಪಿಸಿದರು.