ಆಶ್ರಯದಲ್ಲಿ ಉಚಿತ ಆರೋಗ್ಯ ಮಾಹಿತಿ, ಆಯುಷ್ಮಾನ್ ಭವ ಕಾರ್ಡ್ ಮಾಹಿತಿ ಹಾಗೂ ಬೃಹತ್ ನೇತ್ರ ತಪಾಸಣಾ ಶಿಬಿರ


ಕುಂದಾಪುರ; ತಾಲೂಕು ಸಾರ್ವಜನಿಕ ಆಸ್ಪತ್ರೆ, ಕುಂದಾಪುರ. ಆರೋಗ್ಯ ಮತ್ತು ಯೋಗ ಕ್ಷೇಮ ಕೇಂದ್ರ ಒಡೆಯರ್ ಹೋಬಳಿ.ಜೆ ಸಿಐ ಕುಂದಾಪುರ,ವಿಘ್ನೇಶ್ವರ ಯುವಕ ಮಂಡಲ ಒಡೆಯರ್ ಹೋಬಳಿ, ಪ್ರಸಾದ್ ನೇತ್ರಾಲಯ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಕುಂದಾಪುರದ ಆಶೀರ್ವಾದ ಹಾಲ್ ನಲ್ಲಿ (26/9/23) ಉಚಿತ ಆರೋಗ್ಯ ಮಾಹಿತಿ, ಆಯುಷ್ಮಾನ್ ಭವ ಕಾರ್ಡ್ ಮಾಹಿತಿ ಹಾಗೂ ಬೃಹತ್ ನೇತ್ರ ತಪಾಸಣಾ ಶಿಬಿರ ನೆರವೇರಿಸಲಾಯಿತು ಈ ಶಿಬಿರದಲ್ಲಿ ನೇತೃ ತಪಾಷಣೆ ಹಾಗೂ ಬಿಪಿ,ಶುಗರ್ ತಪಾಸಣೆ ನಡೆಸಲಾಯಿತು.200 ಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದರು.ಸುಮಾರು 18 ಜನರಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಲು ದಿನಾಂಕ ನಿಗದಿಪಡಿಸಲಾಯಿತು.ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜೆಸಿಐ ಕುಂದಾಪುರದ ಅಧ್ಯಕ್ಷರಾದ ಜೆಸಿ ಸುಧಾಕರ್ ಕಾಂಚನ್ ದೀಪ ಬೆಳಗಿಸಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪುರಸಭಾ ಸದಸ್ಯರಾದ ಶೇಖರ್ ಪೂಜಾರಿ ,ರತ್ನಾಕರ್ ಕುಂದಾಪುರ, ವಿಘ್ನೇಶ್ವರ ಯುವಕ ಮಂಡಲದ ಅಧ್ಯಕ್ಷರಾದ ಮಂಜುನಾಥ್, ಉಪಾಧ್ಯಕ್ಷ ಗೋಪಾಲ್ ಪೂಜಾರಿ ಹಾಗೂ ಆಶೀರ್ವಾದ ಹಾಲ್ ಮಾಲಕರಾದ ವಾಲ್ಟಾರ್ ಡಿಸೋಜ,ಎಸ್ಡಿಎಂಸಿ ಸದಸ್ಯರಾದ ಕೃಷ್ಣಾನಂದ್ ಶಾನಭಾಗ್, ಆರೋಗ್ಯ ಇಲಾಖೆ ವೈದ್ಯರು ,ಪ್ರಸಾದ್ ನೇತ್ರಾಲಯದ ವೈದ್ಯರು, ಸಿಬ್ಬಂದಿಗಳು,ಸರಕಾರಿ ಆಸ್ಪತ್ರೆ ಸಿಬ್ಬಂದಿಗಳು ,ಆಶಾ ಕಾರ್ಯಕರ್ತರು ಸರ್ಕಾರಿ ಆಸ್ಪತ್ರೆಯ ವೀಣಾ ಸ್ವಾಗತಿಸಿ, ಗುರು ದತ್ ಕಾರ್ಯಕ್ರಮ ನಿರ್ವಹಿಸಿ, ಮೇದಿನಿ ಧನ್ಯವಾದ ನೀಡಿದರು.