ಬೀದಿ ಬದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದಿಂದ ಸಿಗುತ್ತಿರುವ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಸಂಸದ ವಿ.ಮುನಿಸ್ವಾಮಿಯರಿಂದ ಅರಿವು


ಪಟ್ಟಣದ ಪುರಸಭೆ ಕಛೇರಿಯಲ್ಲಿ ಭಾನುವಾರ ಬೀದಿ ಬದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದ ಪಿಎಂ ಸ್ವಾನಿಧಿ ಯೋಜನೆಯಲ್ಲಿ ಅರ್ಹ ಫಲನಾಭುವಿಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಣೆ ಮಾಡಿ ಮಾತನಾಡಿದರು.
ಬೀದಿ ಬದಿ ವ್ಯಾಪಾರಿಗಳಾದ ಹೂವಿನ ವ್ಯಾಪಾರಿಗಳು, ತರಕಾರಿ ವ್ಯಾಪಾರಿಗಳು, ಹಣ್ಣು ವ್ಯಾಪಾರಿಗಳು ಸಾಲಕ್ಕಾಗಿ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು, ಯಾವ ರೀತಿಯಾಗಿ ಮರುಪಾವತಿ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡುತ್ತಾ, ಮೊದಲಿಗೆ 10 ಸಾವಿರ ಸಾಲವನ್ನು ಮರುಪಾವತಿ ಮಾಡಿದ ನಂತರ 20 ಸಾವಿರ ಪಡೆಯಬಹುದು, ಅದೇ ರೀತಿಯಾಗಿ ಹಂತ ಹಂತವಾಗಿ ಒಂದು ಲಕ್ಷದಿಂದ 10ಲಕ್ಷದ ವರೆಗೂ ಯಾವುದೇ ಅಡಮಾನ ವಿಲ್ಲದೆ ಪಿಎಂ ಸ್ವಾನಿಧಿ ಯೋಜನೆಯಲ್ಲಿ ಸಾಲ ನೀಡಲಾಗುತ್ತದೆ . ಜಿಲ್ಲೆಯಲ್ಲಿ ಪಿಎಂ ಸ್ವಾನಿಧಿ 5 ಸಾವಿರ ಫಲಾನುಭವಿಗಳು ಕೇಂದ್ರ ಸರ್ಕಾರ ಪಿಎಂ ಸ್ವಾನಿಧಿ ಯೋಜನೆಯನ್ನು ಇದುವೆರೆಗೂ ಸದ್ಭಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು .
ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರಮೋದಿಯವರು ಒಂದು ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದಿರುವ ಕಾರಣ ಎಲ್ಲಾ ಕಷ್ಟವನ್ನು ಅರಿತು ಬಡವರ ಆರೋಗ್ಯದ ಹಿತದೃಷ್ಟಿಯಿಂದ ಆಯುಷ್‍ಮಾನ್ ಭಾರತ್ , ರೈತರಿಗೆ ಕಿಸಾನ್ ಸನ್ಮಾನ್ ಯೋಜನೆ , ಬೀದಿ ಬದಿ ವ್ಯಾಪಾರಿಗಳಿಗೆ ಆತ್ಮ ನಿರ್ಭರ್ ನಿಧಿ ಈ ರೀತಿಯಾಗಿ ಹಲವು ಯೋಜನೆಗಳನ್ನು ತಂದಿದ್ದು ಈ ಯೋಜನೆಗಳನ್ನು ಸದುಪಯೋಗ ಪಡೆಸಿಕೊಂಡಿರುವ ಫಲಾನುಭವಿ ಜೊತೆ ಉಳಿದ ಫಲಾನುಭವಿಗಳು ಸದುಪಯೋಗ ಪಡೆಸಿಕೊಳ್ಳುವಂತೆ ಮನವಿ ಮಾಡಿದರು.
ನಂತರ ಅರಣ್ಯ ಇಲಾಖೆಯಿಂದ ದೌರ್ಜನ್ಯಕ್ಕೆ ಒಳ ಪಟ್ಟ ನೂರಾರು ಸಂತ್ರಸ್ಥ ರೈತರೊಂದಿಗೆ ಚರ್ಚೆ ಮಾಡುತ್ತಾ, 70 ರಿಂದ 80 ವರ್ಷಗಳಿಂದ ಅನುಭವದಲ್ಲಿ ರೈತರ ಭೂಮಿಯನ್ನು ಅರಣ್ಯ ಇಲಾಖೆಯು ಹಾಗು ರೈತರು ಬೆಳೆದಿರುವ ಮರಗಳನ್ನು ಫಸಲನ್ನು ನಾಶಪಡಿಸಿರುವ ಹಿನ್ನೆಲೆಯಲ್ಲಿ ಅನ್ಯಾಯಕ್ಕೆ ಒಳಗಾಗಿರುವ ರೈತರು ಪರವಾಗಿ ನಾವಿದ್ದು, ಮುಂದಿನ ದಿನಗಳಲ್ಲಿ ವಿಧಾನಸೌದ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡು ಶ್ರೀನಿವಾಸಪುರದಿಂದ ಬೆಂಗಳೂರಿನ ವಿಧಾನಸೌದದವರೆಗೂ ಪಾದ ಯಾತ್ರೆಯನ್ನ ಹಮ್ಮಿಕೊಳ್ಳಲಾಗುವುದು. ಈ ಹೋರಾಟಕ್ಕೆ ಅನ್ಯಾಯಕ್ಕೆ ಒಳಗಾದ ರೈತರು ಪಕ್ಷಾತೀತವಾಗಿ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಕೈಜೋಡಿಸಬೇಕು ಎಂದು ಮನವಿ ಮಾಡುತ್ತಾ , ಹೋರಾಟ ಅಂಗವಾಗಿ ಪೂರ್ವಭಾವಿ ಸಭೆಯ ದಿನಾಂಕವನ್ನು ಅತಿ ಶೀಘ್ರವಾಗಿ ನಿಗದಿಪಡಿಸಲಾಗುವುದು ಎಂದು ಮಾಹಿತಿ ನೀಡಿದರು.