ಪಡುಕೋಣೆ: 2023-24 ದಿನಾಂಕ 13-9-2023 ರಂದು ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆ ಪಡುಕೋಣೆಯಲ್ಲಿ ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು ವಲಯದ ಆಶ್ರಯದಲ್ಲಿ ಪಡುಕೋಣೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಸಂಚಾಲಕರಾದ ವಂದನೀಯ ಫ್ರಾನ್ಸಿಸ್ ಕರ್ನೇಲಿಯೊ ಅಧ್ಯಕ್ಷತೆ ವಹಿಸಿದ್ದರು. ನಾಡಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಪಾರ್ವತಿ ಉದ್ಭ್ಬಾಟನೆ ನೆರವೇರಿಸಿದರು. ವಾರ್ಡ್ ಮೆಂಬರ್ ಸುಧಾಕರ ಶೆಟ್ಟಿ ಮತ್ತು ಜ್ಯೋತಿ, ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ್ ಪೂಜಾರಿ ಮತ್ತು ಗಿರಿಜಾ, ಅಚ್ಯುತ್ ಬಿಲ್ಲವ, ಆಡಳಿತ ಮಂಡಳಿಯವರಾದ ಪ್ರಭು ಕೆನೆಡಿ ಪಿರೇರಾ, ಅಲೆಕ್ಸ್ ಆಂಟನಿ ಡಿಸೋಜಾ , ವಿನ್ಸೆಂಟ್ ಡಿಸೋಜಾ , ಫಿಲಿಪ್ ಡಿಸಿಲ್ವ, ಜೋಸೆಫ್ ಡಿಸಿಲ್ವ, ಸ್ಟೀವನ್ ಡಿಸೋಜಾ, ನಿವ್ರತ್ತ ಶಿಕ್ಷಕ ಸ್ಟಾನಿ ಲುವಿಸ್, ಸಿಸ್ಟರ್ ಮೋರ್ಸಿ, ಕಿರಣ್ ಲೋಬೊ , ಹೆಮ್ಮಾಡಿ ವ್ರತ್ತ ಸಂಯೋಜಕ ಯೋಗೀಶ್, ೦೫೧ ರಾಮನಾಥ ಮೇಸ್ತ ಹಾಗೂ ಮುಖ್ಯ ಶಿಕ್ಷಕಿ ಶಾಂತಿ ಪಾಯ್ಬ್ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತ, ಹಳೆಯ ಕಾಲದ ವಸ್ತು ಪ್ರದರ್ಶನ, ಸೆಲ್ಟಿ ಬೂತ್ ನಲ್ಲಿ ಚಂದ್ರಯಾನದ ರಾಕೆಟ್ ಮಾದರಿ ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 16 ಶಾಲೆಗಳ ಮಕ್ಕಳು ಮತ್ತು ಇತರರೂ ಸೇರಿ 400 ಕ್ಕೂ ಮಿಕ್ಕಿದ ಜನರು ಸಂಭ್ರಮದಿಂದ ಪಾಲ್ಗೊಂಡಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರ ನಾಡಾ ಸಿಬ್ಬಂದಿ ಸಹಕರಿಸಿದರು . ಶಿಕ್ಷಕಿ ಸರಿಟಾ ಪಾಯ್ಸ್ ಮತ್ತು ಶರ್ಮಿಳಾ ನಿರೂಪಣೆ ಮಾಡಿದರು. ಮುಖ್ಯ ಶಿಕ್ಷಕಿ ಶಾಂತಿ ಪಾಯ್ಸ್ ಸ್ವಾಗತ ಭಾಷಣ ಮಾಡಿದರು.CRP ರಾಮನಾಥ ಮೇಸ್ತ ಧನ್ಯವಾದ ಅರ್ಪಿಸಿದರು.