ಪರಿಸರ ಪ್ರಜ್ಞೆಯ ಜೀವನಶೈಲಿಯನ್ನು ಉತ್ತೇಜಿಸಿ , ಹವಾಮಾನ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲು ವ್ಯಕ್ತಿಗಳನ್ನು ಪ್ರೇರೇಪಿಸಿ – ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ್

ಶ್ರೀನಿವಾಸಪುರ 1 : ಪರಿಸರ ಪ್ರಜ್ಞೆಯ ಜೀವನಶೈಲಿಯನ್ನು ಉತ್ತೇಜಿಸಿ , ಹವಾಮಾನ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲು ವ್ಯಕ್ತಿಗಳನ್ನು ಪ್ರೇರೇಪಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ್ ಹೇಳಿದರು.
ಪಟ್ಟಣದ ಪುರಸಭೆ ಕಛೇರಿಯಲ್ಲಿ ಗುರುವಾರ ಕಛೇರಿ ಸಭಾಂಗಣದಲ್ಲಿ ತ್ರೈಮಾಸಿಕ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಮನೆಗಳಲ್ಲಿ , ಕಛೇರಿಗಳಲ್ಲಿ ಹಸಿಗೊಬ್ಬರ, ಒಣಗೊಬ್ಬರಗಳನ್ನು ಬೇರ್ಪಡಿಸುವ ವಿಧಾನಗಳ ಬಗ್ಗೆ ವಿವರಿಸಿದರು. ಸ್ವಚ್ಚ ಭಾರತ್ ಮಿಷನ್ ಅಭಿಯಾನದ ಅಡಿಯಲ್ಲಿ ಆರ್‍ಆರ್‍ಆರ್ ಕಾರ್ಯಕ್ರಮವನ್ನು ಎಲ್ಲಾ ಸರ್ಕಾರಿ ಕಛೇರಿಗಳು, ಸಂಸ್ಥೆಗಳು, ನಿಗಮ ಮಂಡಳಿಗಳು, ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಅನುಷ್ಠಾನ ಮಾಡುವ ಕುರಿತು ಮಾತನಾಡಿದರು.
ಕಛೇರಿ ವ್ಯವಸ್ಥಾಪಕ ನವೀನ್‍ಚಂದ್ರ, ಪುರಸಭಾ ಹಿರಿಯ ಸದಸ್ಯ ಬಿ.ವಿ.ವೆಂಕಟರೆಡ್ಡಿ, ಸ್ವಚ್ಚಭಾರತ್ ರಾಯಬಾರಿ ಮಾಯಾ ಬಾಲಚಂದ್ರ, ಎಸ್‍ಬಿಐ ಬ್ಯಾಂಕ್‍ನ ವ್ಯವಸ್ಥಾಪಕಿ ಉಮಾ, ಬಿಸಿಎಂ ಅಧಿಕಾರಿ ನರಸಿಂಹಮೂರ್ತಿ, ಸಿಡಿಪಿಓ ಕಛೇರಿ ಸಿಬ್ಬಂದಿಗಳಾದ ನವೀನ್, ಬೈರೆಡ್ಡಿ, ತ್ಯಾಗರಾಜ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಂ.ಬೈರೇಗೌಡ, ಹಿರಿಯ ಆರೋಗ್ಯ ಸಹಾಯಕ ನಿರೀಕ್ಷಕರಾದ ಕೆ.ಜಿ.ರಮೇಶ್, ಕಂದಾ
ಯ ನಿರೀಕ್ಷಕ ಎನ್.ಶಂಕರ್, ಸಿಬ್ಬಂದಿಗಳಾದ ಸಂತೋಷ್, ಸುರೇಶ್, ಎಸ್ ಸಿಸಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.