ಶ್ರಿ ಕ್ಷೇತ್ರ ಧರ್ಮಾಧಿಕಾರಿಗಳ ತೇಜೋವಧೆ ಮಾಡಿದವರ ಮೇಲೆ ಕ್ರಮಕೈಗೊಳ್ಳಲು ಆಗ್ರಹ


ದಿನಾಂಕ 25.08.2023 ರಂದು ಕುಂದಾಪುರ ತಾಲೂಕಿನ ಶಾಸ್ತ್ರಿ ವೃತ್ತದಲ್ಲಿ ನಡೆದ ಸೌಜನ್ಯ ಪ್ರಕರಣದ
ಮರು ತನಿಖೆಗಾಗಿ ನಡೆದ ಜನಾಗ್ರಹ ಸಭೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ವ್ಯಯುಕ್ತಿಕ ತೇಜೋವಧೆ ಮಾಡಿರುವುದು ತೀರಾ ಖಂಡನೀಯವಾಗಿದೆ. ಶ್ರೀ ಮಹೇಶ್ ಶೆಟ್ಟಿ ತಿಮರೋಡಿಯವರು ಬಹಿರಂಗ ಸಭೆಯಲ್ಲಿ ಜನರ ಧಾರ್ಮಿಕ ಭಾವನೆಗಳಿಗೆ ಅಸತ್ಯ ಮತ್ತು ದ್ವೇಷದ ಬೀಜ ಬಿತ್ತಿರುವುದು, ತಾವು ಹೇಳಿದ ಕಟ್ಟುಕತೆಯನ್ನೇ ಹಳ್ಳಿ ಹಳ್ಳಿಗಳಲ್ಲಿ ಅಪಪ್ರಚಾರ ಮಾಡುವಂತೆ ಜನರಿಗೆ ಸಾರ್ವಜನಿಕ ಕರೆ ಕೊಟ್ಟಿರುವುದು ಸಮಾಜದ ಶಾಂತಿ ಮತ್ತು ವ್ಯವಸ್ಥೆಯನ್ನು ಹಾಳುಮಾಡುವ ಕೃತ್ಯವಾಗಿದೆ ಹಾಗೂ ಆಧಾರರಹಿತವಾಗಿ ವ್ಯಯುಕ್ತಿಕ ನಿಂದನೆ, ಧಾರ್ಮಿಕ ನಿಂದನೆ ಕಾನೂನಾತ್ಮಕವಾಗಿ ಅಪರಾಧವಾಗಿದೆ. ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.
ಈ ಸಭೆಯಲ್ಲಿ ಶ್ರೀ ವೀರೇಂದ್ರ ಹೆಗ್ಗಡೆರವರು ಹಾಗೂ ಧರ್ಮಸ್ಥಳದ ಬಗ್ಗೆ ಯಾವುದೇ ಅವಮಾನಕರ ಮತ್ತು ತೇಜೋವಧೆ ಮಾತುಗಳನ್ನಾಡದಂತೆ ನಿಬರ್ಂಧಿಸಬೇಕೆಂದು ಉಡುಪಿ ಜಿಲ್ಲಾ ಸುಪರಿಟೆಂಡೆಂಟ್ ಆಫ್ ಫೋಲಿಸ್ ಇವರಿಗೆ ಕುಂದಾಪುರ ಡಿ ವೈ ಎಸ್ ಪಿ ಬೆಳ್ಳಿಯಪ್ಪ ಮೂಲಕ ಮನವಿ ನೀಡಿದಾಗಲು ಸದ್ರಿ ಸಭೆಯಲ್ಲಿ ಪ್ರಚೋಧನಕಾರಿ ಹಾಗೂ ಅವಹೇಳನಕಾರಿಯಾಗಿ ಮಾತನಾಡಲು ಪೋಲಿಸ್ ಇಲಾಖೆ ಅವಕಾಶ ನೀಡಿರುವುದನ್ನು ತೀವೃವಾಗಿ ಖಂಡಿಸುತ್ತೇವೆ. ಯಾವುದೇ ರೀತಿಯಲ್ಲಿ ಕ್ಷೇತ್ರದ ವಿರುದ್ಧ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡದಂತೆ ಕರ್ನಾಟಕ ಘನ ನ್ಯಾಯಾಲಯವು ನೀಡಿರುವ ಪ್ರತಿಬಂಧಕಾಜ್ಞೆಯನ್ನು ನೀಡಲಾಗಿದ್ದರೂ ಸಹ ಅದೇ ಪ್ರವೃತ್ತಿಯನ್ನು ಮುಂದುವರೆಸಿರುವ ಇವರು ನ್ಯಾಯಾಲಯದ ನಿಂದನೆ ಮಾಡಿರುತ್ತಾರೆ.
ಆದರೂ ಶ್ರೀಮತಿ ಕುಸುಮಾವತಿ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಪ್ರಚೋದನಕಾರಿ ಮಾತುಗಳನ್ನಾಡಲು ಅವಕಾಶ ಮಾಡಿಕೊಟ್ಟಿರುವುದು ಕಾನೂನು ಬಾಹಿರವಾಗಿದೆ. ಬಹಿರಂಗ ಸಭೆಯಲ್ಲಿ ಮಾತನಾಡಿದವರನ್ನು ಬಂಧಿಸಿ ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ. ಒಂದು ವೇಳೆ ಕಾನೂನು ಕ್ರಮ ಕೈಗೊಳ್ಳದೆ ಇದ್ದಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯವರ ಕಾನೂನು ಬಾಹಿರ ಕೃತ್ಯಕ್ಕೆ ಉಗ್ರ ಪ್ರತಿಭಟನೆ ಮಾಡುವ ಹಕ್ಕು ಶ್ರೀ ಕ್ಷೇತ್ರದ ಅಭಿಮಾನಿಗಳಾದ ನಮಗಿರುತ್ತದೆ.
ಶ್ರಿ ಕ್ಷೇತ್ರ ಧರ್ಮಸ್ಥಳ ಆಶ್ರಯದಲ್ಲಿ ನಡೆಯುವ ಹತ್ತಾರು ಯೋಜನೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಲಕ್ಷಾಂತರ ಮಂದಿಗೆ ಈ ವಿದ್ಯಮಾನ ನೋವನ್ನುಂಟುಮಾಡಿದೆ ಹಾಗೂ ವಿಶ್ವದಾದ್ಯಂತ ಇರುವ ಕೋಟ್ಯಾಂತರ ಭಕ್ತರು ಸೌಜನ್ಯ ಪ್ರಕರಣದ ಹೆಸರಲ್ಲಿ ಹೋರಾಟಗಾರರೆಂಬುವವರು ಮಾಡಿದ ಆಪಾದನೆಗಳನ್ನು ತಪ್ಪು ತಿಳಿಯುವ ಸಂಭವವಿರುತ್ತದೆ.
ಈ ಕಾರಣಕ್ಕಾಗಿ ಸೌಜನ್ಯ ಪ್ರಕರಣದ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳು ಹಾಗೂ ಅವರ ಕುಟುಂಬದ ವಿರುದ್ಧ ನೀಡಿದ ಹೇಳಿಕೆಗಳೆಲ್ಲಾ ದ್ವೇóಷದ ಹೇಳಿಕೆಗಳೆಂದು ಈ ಮೂಲಕ ತಿಳಿಯಪಡಿಸುತ್ತೇವೆ.
ಸನಾತನ ಧರ್ಮದ ಹೆಸರಿನಲ್ಲಿ ತಪ್ಪು ಮಾಹಿತಿ ನೀಡುತ್ತಾ ಯುವಕರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇವರ ಆಶಯಗಳು ಧರ್ಮ ಶ್ರದ್ಧೆಯ ವಿರುದ್ಧವಾಗೇ ಇವೆ. ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು ಎಂದು ವಿನಂತಿಸುತ್ತೇವೆ. ಕುಸುಮಾವತಿ ಮತ್ತು ಮಹೇಶ್ ಶೆಟ್ಟಿ ತಿಮರೋಡಿರವರ ಹೇಳಿಕೆಗಳು ಎಲ್ಲವೂ ಪೂರ್ವಾಗ್ರಹ ಪೀಡಿತ, ಕಪೋಲ ಕಲ್ಪಿತ ಮತ್ತು ದ್ವೇಷದ ಹೇಳಿಕೆಗಳಾಗಿವೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಶ್ರೀ ಕ್ಷೇತ್ರದ ಅಭಿಮಾನಿಗಳ ಪರವಾಗಿ ಅಪ್ಪಣ್ಣ ಹೆಗ್ಗಡೆ -ಮಾಜಿ ಶಾಸಕರು, ಜಿಲ್ಲಾ ಜನ ಜಾಗೃತಿ ವೇದಿಕೆಯ ಪರವಾಗಿ ರಟ್ಟಾಡಿ ನವೀನ್‍ಚಂದ್ರ ಶೆಟ್ಟಿ, ಪ್ರಗತಿ ಬಂಧು- ಸ್ವ ಸಹಾಯ ಸಂಘಗಳ ಒಕ್ಕೂಟದ ಪರವಾಗಿ ಗೀತಾಂಬ, ಚಂದ್ರಾವತಿ ಮತ್ತು ಪ್ರದೀಪ್ ಮಡಿವಾಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು ಹಾಗೂ ಕಾರ್ಯಕರ್ತರು, ಕುಂದಾಪುರ ಇವರು ಪೋಲೀಸ್ ಇಲಾಖೆಗೆ ದೂರು ನೀಡಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.